ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತೀಯರು ಟಿಕ್‌ಟಾಕ್‌ ಪ್ರಿಯರು!

Last Updated 20 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಟಿಕ್‌ಟಾಕ್‌ ಬಗ್ಗೆ ಏನೆಲ್ಲಾ, ಎಷ್ಟೆಲ್ಲಾ ವಿವಾದಗಳಿದ್ದರೂ ಭಾರತದಲ್ಲಿ ಟಿಕ್‌ಟಾಕ್‌ ಬಳಕೆ ದಿನೇ ದಿನೇ ಹೆಚ್ಚುತ್ತಲೇ ಇದೆ. 2019ರಲ್ಲಿ ಭಾರತದಲ್ಲೇ ಅತಿ ಹೆಚ್ಚು ಡೌನ್‌ಲೋಡ್ ಆಗಿದೆ ಎಂದು ವರದಿಯೊಂದು ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಆ್ಯಪಲ್ ಸ್ಟೋರ್ ಮತ್ತು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಟ್ಟಾರೆ ಟಿಕ್ ಟಾಕ್ ಅಪ್ಲಿಕೇಷನ್‌ಗಳು 150 ಕೋಟಿ ಡೌನ್‌ಲೋಡ್ ಆಗಿದ್ದರೆ, ಇದರಲ್ಲಿ ಭಾರತ ಪಾಲು ಶೇ 31ರಷ್ಟಿದೆ. 2019ರಲ್ಲಿ 61.4 ಕೋಟಿ ಡೌನ್‌ಲೋಡ್ ಆಗಿದ್ದು, 2018ಕ್ಕಿಂತಲೂ ಶೇ 6ರಷ್ಟು ಹೆಚ್ಚಿಗೆ ಇದೆ ಎಂದು ಮೊಬೈಲ್ ಇಂಟೆಲಿಜೆನ್ಸ್ ಸಂಸ್ಥೆ ಸೆನ್ಸರ್ ಟವರ್ ತಿಳಿಸಿದೆ.

2019ರಲ್ಲಿ ಭಾರತದಲ್ಲಿ ಟಿಕ್‌ಟಾಕ್ ಬಳಕೆ ವೇಗವಾಗಿ ಹೆಚ್ಚಾಗುತ್ತಿದೆ. ಜಾಗತಿಕ ಬಳಕೆಯಲ್ಲಿ ಶೇ 45ರಷ್ಟಿದ್ದು ಇದುವರೆಗೆ 27.76 ಕೋಟಿ ಡೌನ್‌ಲೋಡ್ ಆಗಿದ್ದು, ಮೊದಲ ಸ್ಥಾನದಲ್ಲಿದೆ.ಥರ್ಡ್‌ಪಾರ್ಟಿ ಆಂಡ್ರಾಯ್ಡ್ ಸ್ಟೋರ್‌ಗಳಿಂದ ಆಗಿರುವ ಡೌನ್‌ಲೋಡ್ ಮಾಹಿತಿಯನ್ನು ಪರಿಗಣಿಸಲಾಗಿಲ್ಲ ಎಂದು ಸೆನ್ಸರ್ ಟವರ್ ತಿಳಿಸಿದೆ.

ಸದ್ಯ 61.40 ಕೋಟಿ ಬಾರಿ ಟಿಕ್‌ಟಾಕ್‌ ಡೌನ್‌ಲೋಡ್ ಆಗಿದ್ದು, ಅತಿ ಹೆಚ್ಚು ಡೌನ್‌ಲೋಡ್ ಆಗಿರುವ ಗೇಮಿಂಗ್ ಅಲ್ಲದ ಆ್ಯಪ್‌ಗಳ ಪಟ್ಟಿಯಲ್ಲಿ ಈ ವರ್ಷ ಮೂರನೇ ಸ್ಥಾನದಲ್ಲಿದೆ. ವಾಟ್ಸ್ಆ್ಯಪ್ (70.74 ಕೋಟಿ) ಮತ್ತು ಫೇಸ್‌ಬುಕ್‌(63.62 ಕೋಟಿ) ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ.

ಡೌನ್ ಲೋಡ್ (2019ರಲ್ಲಿ)

ಭಾರತದಲ್ಲಿ 27.76 , ಚೀನಾದಲ್ಲಿ 4.55 ಕೋಟಿ, ಅಮೆರಿಕದಲ್ಲಿ 3.76 ಕೋಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT