ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ 48 ಗಂಟೆಗಳಲ್ಲಿ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಸಾಧ್ಯತೆ

Last Updated 12 ಅಕ್ಟೋಬರ್ 2018, 6:12 IST
ಅಕ್ಷರ ಗಾತ್ರ

ನವದೆಹಲಿ: ನೆಟ್‍ವರ್ಕ್ ದುರಸ್ತಿ ಕಾರ್ಯ ನಡೆಯುವ ಕಾರಣಮುಂದಿನ 48 ಗಂಟೆಗಳಲ್ಲಿ ಜಗತ್ತಿನಾದ್ಯಂತ ಅಂತರ್ಜಾಲ ಸಂಪರ್ಕ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ.ನೆಟ್‍ವರ್ಕ್ ಸಮಸ್ಯೆಗಳನ್ನು ಸರಿ ಪಡಿಸುವುದಕ್ಕಾಗಿ ಪ್ರಧಾನ ಡೊಮೇನ್ ಸರ್ವರ್‌ಗಳ ಕಾರ್ಯಗಳನ್ನು ಸ್ಥಗಿತಗೊಳಿಸಲಾಗುವುದು.ಕೆಲವೇ ಕ್ಷಣಗಳ ಕಾಲ ಮಾತ್ರ ಇಂಟರ್ನೆಟ್ ಸೇವೆ ಲಭ್ಯವಾಗುವುದಿಲ್ಲ ಎಂದು ಬಲ್ಲಮೂಲಗಳು ಹೇಳಿವೆ.

ದುರಸ್ತಿ ಕಾರ್ಯಕ್ಕಾಗಿ ಕ್ರಿಪ್ಟೋಗ್ರಫಿಕ್ ಕೀ ಬದಲಿಸಲಾಗುವುದು. ಡೊಮೇನ್ ಹೆಸರುಗಳ ಸಂರಕ್ಷಣೆಗಾಗಿ ಇದನ್ನು ಮಾಡಲಾಗುತ್ತದೆ.ಸೈಬರ್ ದಾಳಿ ಹೆಚ್ಚುತ್ತಿರುವುದರಿಂದ ಈ ದುರಸ್ತಿ ಕಾರ್ಯಗಳನ್ನು ಮಾಡಲಾಗುತ್ತಿದೆ.

ಸುಸ್ಥಿರ, ಸುರಕ್ಷಿತ ಡಿಎನ್‍ಎಸ್‍ಗಾಗಿ ಜಾಗತಿಕ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸುವುದು ಅನಿವಾರ್ಯ ಆಗಿದೆ ಎಂದು ಸಂವಹನ ನಿರ್ವಹಣಾ ಪ್ರಾಧಿಕಾರ (ಸಿಆರ್‌ಎ) ಹೇಳಿದೆ.

ವೆಬ್‍ ಪೇಜ್ ಮತ್ತು ಆನ್‍ಲೈನ್ ವಹಿವಾಟು ನಡೆಸುವಾಗ ಮುಂದಿನ 48 ಗಂಟೆಗಳಲ್ಲಿ ಕೆಲವು ಅಡಚಣೆಗಳು ತಲೆದೋರಬಹುದು.ಔಟ್ ಡೇಟೆಡ್ ಆಗಿರುವ ಐಎಸ್‍ಪಿ ಬಳಸುವವರಿಗೆ ಗ್ಲೋಬಲ್ ನೆಟ್‍ವರ್ಟ್ ಸಂಪರ್ಕ ಬಳಸಲು ಸಾಧ್ಯವಾಗುವುದಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT