ಮಂಗಳವಾರ, ಫೆಬ್ರವರಿ 25, 2020
19 °C

‘ಜಿಸ್ಯಾಟ್–30’ ಯಶಸ್ವಿ ಉಡಾವಣೆ: 2020ರಲ್ಲಿ ಇಸ್ರೊ ಶುಭಾರಂಭ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊದ ನೂತನ ‘ಹೈಪವರ್ ಕಮ್ಯುನಿಕೇಷನ್ ಉಪಗ್ರಹ ಜಿಸ್ಯಾಟ್–30’ಯನ್ನು ಫ್ರೆಂಚ್ ಗಯಾನಾದಿಂದ ಶುಕ್ರವಾರ ನಸುಕಿನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

‘ಜಿಸ್ಯಾಟ್–30ಯನ್ನು ಫ್ರೆಂಚ್ ಗಯಾನಾದ ಕಾರೌ ಉಡಾವಣಾ ನೆಲೆಯಿಂದ ‘ಏರಿಯಾನ್–5 ವಿಎ–251’ ಉಡಾಹಕದ ಮೂಲಕ ಇಂದು ಬೆಳಿಗ್ಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು’ ಎಂದು ಇಸ್ರೊ ಟ್ವೀಟ್ ಮಾಡಿದೆ.

ದೂರದರ್ಶನ ಪ್ರಸಾರ, ಡಿಟಿಎಚ್, ಟೆಲಿಕಮ್ಯುನಿಕೇಷನ್ಸ್‌ ಮತ್ತು ಪ್ರಸಾರ ಕ್ಷೇತ್ರದ ಸೇವೆಗಳ ಗುಣಮಟ್ಟ ಹೆಚ್ಚಿಸಲು ‘ಜಿಸ್ಯಾಟ್–30’ ನೆರವಾಗಲಿದೆ.

ಯಶಸ್ವಿ ಉಡಾವಣೆಗಾಗಿ ಇಸ್ರೊ ಮತ್ತು ಏರಿಯಾನ್‌ಸ್ಪೇಸ್ ತಂಡವನ್ನು ಇಸ್ರೊದ ಯು.ಆರ್.ರಾವ್ ಉಪಗ್ರಹ ಕೇಂದ್ರದ ನಿರ್ದೇಶಕ, ಸದ್ಯ ಕಾರೌದಲ್ಲಿರುವ ಪಿ. ಕುಞ್ಞಿಕೃಷ್ಣನ್ ಅಭಿನಂದಿಸಿದ್ದಾರೆ. ಇದು 2020ರ ಅದ್ಭುತ ಆರಂಭ ಎಂದು ಅವರು ಬಣ್ಣಿಸಿದ್ದಾರೆ. ಈವರ್ಷ ಇಸ್ರೊ ಉಡಾವಣೆ ಮಾಡಿದ ಮೊದಲ ಉಪಗ್ರಹ ಇದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು