ಜೈಲುವಾಸದಲ್ಲಿರುವ ಸ್ಯಾಮ್‌ಸಂಗ್ ಉಪಾಧ್ಯಕ್ಷ ಲೀ ಜೇ ಯಾಂಗ್ ಅವರಿಗೆ ದಂಡ

ಸಿಯೋಲ್: ನಿದ್ರಾಜನಕ ಔಷಧವನ್ನು ಕಾನೂನುಬಾಹಿರವಾಗಿ ಬಳಸಿದ್ದಾರೆ ಎಂಬ ಆರೋಪದಡಿಯಲ್ಲಿ ಆಗಲೇ ಜೈಲುವಾಸದಲ್ಲಿರುವ ದಕ್ಷಿಣ ಕೊರಿಯಾ ಮೂಲದ ಸ್ಯಾಮ್‌ಸಂಗ್ ಉದ್ಯಮ ಸಾಮ್ರಾಜ್ಯದ ಉಪಾಧ್ಯಕ್ಷ ಲೀ ಜೇ ಯಾಂಗ್ ಅವರ ಮೇಲೆ 45,000 ಅಮೆರಿಕನ್ ಡಾಲರ್ ದಂಡವನ್ನು (ಅಂದಾಜು ₹33 ಲಕ್ಷ) ಹೇರಲಾಗಿದೆ.
ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗಳ ಫೋರ್ಬ್ಸ್ ಪಟ್ಟಿಯಲ್ಲಿ 168ನೇ ಸ್ಥಾನದಲ್ಲಿರುವ ಲೀ ಜೇ ಯಾಂಗ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಎರಡೂವರೆ ವರ್ಷಗಳ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾರೆ.
ಸಾಮಾನ್ಯ ಅರಿವಳಿಕೆ ಗುಂಪಿಗೆ ಸೇರಿದ ಪ್ರೊಪೋಫೊಲ್ ಮದ್ದನ್ನು ಲೀ ಜೇ ಯಾಂಗ್ ಬಳಕೆ ಮಾಡುತ್ತಿದ್ದರು. 2009ರಲ್ಲಿ ಇದೇ ಔಷಧಿಯ ಓವರ್ ಡೋಸ್ ಸೇವಿಸಿದ ಕಾರಣ ಪಾಪ್ ತಾರೆ ಮೈಕಲ್ ಜಾಕ್ಸನ್ ಮೃತಪಟ್ಟಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಸರ್ಚ್ ಎಂಜಿನ್ನಲ್ಲಿ ಕನ್ನಡಕ್ಕೆ ಕೆಟ್ಟ ಭಾಷೆಯ ಪಟ್ಟಿ: ಕ್ಷಮೆಯಾಚಿಸಿದ ಗೂಗಲ್
2017 ಹಾಗೂ 2018ರಲ್ಲಿ ಸಿಯೋಲ್‌ನ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್‌ನಲ್ಲಿ ಲೀ ಅವರು ಈ ಔಷಧಿಯನ್ನು ಪದೇ ಪದೇ ತೆಗೆದುಕೊಳ್ಳುತ್ತಿದ್ದರು ಎಂದು ಆರೋಪಿಸಲಾಗಿದೆ.
ಈ ಕುರಿತು ವಿಚಾರಣೆ ನಡೆಸಿರುವ ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಪ್ರಾಸಿಕ್ಯೂಷನ್ ಕಚೇರಿಯು, 52 ವರ್ಷದ ಲೀ ಜೇ ಯಾಂಗ್ ಅವರಿಗೆ ದಂಡ ವಿಧಿಸಿದೆ. ವೈದ್ಯಕೀಯ ಕಾರಣಗಳಿಗಾಗಿ ಔಷಧಿ ನೀಡಲಾಗಿತ್ತು ಎಂದು ಲೀ ಪರವಾಗಿ ವಕೀಲರು ವಾದಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.