ಗುರುವಾರ , ಡಿಸೆಂಬರ್ 5, 2019
24 °C

ಟೆಲಿಗ್ರಾಂ ಆ್ಯಪ್‌‌ ಬಗ್ಗೆ ಅರಿಯಿರಿ

Published:
Updated:

ವಾಟ್ಸ್ಆ್ಯಪ್‌ನಲ್ಲಿ ಚಾಟ್ ಮಾಡಿದಂತೆ ಟೆಲಿಗ್ರಾಂನಲ್ಲಿ ಚಾಟ್ ಮಾಡುವುದಿಲ್ಲ ಎಂದು ಹೇಳುವವರಿದ್ದಾರೆ. ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಟೆಲಿಗ್ರಾಂ ಆ್ಯಪ್ ಬಳಸುವುದು ಅಷ್ಟೇನೂ ಕಷ್ಟವಲ್ಲ. ಟೆಲಿಗ್ರಾಂನಲ್ಲಿ ಕೆಲವೊಂದು ಸೆಟ್ಟಿಂಗ್ಸ್ ಬಗ್ಗೆ ಅರಿತರೆ ಅದರ ಬಳಕೆಯೂ ಸುಲಭ ಎನಿಸುತ್ತದೆ.

ಥೀಮ್ ಚೇಂಜ್ ಮಾಡಿ: ಟೆಲಿಗ್ರಾಂ ಥೀಮ್ ಒಂದೇ ರೀತಿ ಇಟ್ಟುಕೊಳ್ಳುವ ಬದಲು ಆಗಾಗ ಬಣ್ಣ ಬದಲಿಸುತ್ತಿರಿ. ಟೆಲಿಗ್ರಾಂ ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ’ಥೀಮ್’ ಎಂದು ಆಯ್ಕೆ ಮಾಡುವ ಮೂಲಕ ನಿಮಗಿಷ್ಟದ ಬಣ್ಣ ಆಯ್ದುಕೊಳ್ಳಬಹುದು. ಅಲ್ಲಿರುವ ಥೀಮ್ ಅಲ್ಲದೆ ಬೇರೆ ಬೇರೆ ಬಣ್ಣಗಳನ್ನು ಬೆರೆಸಿ ನಿಮ್ಮದೇ ಥೀಮ್‌ ರಚಿಸಬಹುದಾಗಿದೆ.

ಸೀಕ್ರೆಟ್ ಚಾಟ್ ಮಾಡಿ: ನಿಮಗೆ ಯಾರ ಜತೆಗಾದರೂ ರಹಸ್ಯ ಮಾತುಕತೆ ಅಥವಾ ಚಾಟ್ ಮಾಡಬೇಕಿದ್ದರೆ ಸೀಕ್ರೆಟ್ ಚಾಟ್ ಬಳಸಬಹುದು. ಎಡಭಾಗದಲ್ಲಿ ಟೆಲಿಗ್ರಾಂ ಮೆನು ಕ್ಲಿಕ್ ಮಾಡಿ ಸೀಕ್ರೆಟ್ ಚಾಟ್ ಕ್ಲಿಕ್ಕಿಸಿ ನಿಮಗಿಷ್ಟದ ಜನರೊಡನೆ ಚಾಟಿಂಗ್ ಮಾಡಬಹುದು.

ಪ್ರೊಫೈಲ್ ಫೋಟೊ ಬದಲಿಸಿ: ವಾಟ್ಸ್‌ಆ್ಯಪ್‌ನಂತೆ ಇಲ್ಲಿ ನೀವು ಪ್ರೊಫೈಲ್ ಫೋಟೊ ಬದಲಿಸಿದರೆ ಹಳೇ ಫೋಟೊ ಮಾಯವಾಗುವುದಿಲ್ಲ. ನೀವು ಹೊಸ ಫೋಟೊವನ್ನು ಪ್ರೊಫೈಲ್ ಫೋಟೊ ಮಾಡುತ್ತಿದ್ದಂತೆ ಮುಂಚೆ ನೀವು ಬಳಸಿರುವ ಫೋಟೊ ಅಲ್ಲಿ ಸೇವ್ ಆಗಿರುತ್ತದೆ. ಕ್ಯಾಮೆರಾ ಚಿಹ್ನೆ ಕ್ಲಿಕ್ಕಿಸಿ ನಿಮ್ಮ ಫೋಟೊ ಬದಲಿಸಿ. ಈ ಹಿಂದೆ ನೀವು ಬಳಸಿರುವ ಫೋಟೊ ನೋಡಲು ನಿಮ್ಮ ಪ್ರೊಫೈಲ್ ಫೋಟೊ ಮೇಲೆ ಮುಟ್ಟಿದರೆ ಸಾಕು.

ನೀವಿರುವ ಜಾಗ ಶೇರ್ ಮಾಡಿ: ವಾಟ್ಸ್‌ಆ್ಯಪ್‌ನಂತೆಯೇ ಚಾಟ್ ಮೂಲಕ ನೀವಿರುವ ಜಾಗ (ಲೊಕೇಷನ್) ಶೇರ್ ಮಾಡಬಹುದು.

ಸಂದೇಶ ಅಳಿಸಿ: ಕೈ ತಪ್ಪಿ ನೀವು ಬೇರೆ ಯಾರಿಗಾದರೂ ಸಂದೇಶ ಕಳುಹಿಸಿದ್ದರೆ ಅದನ್ನು ಒತ್ತಿ ಹಿಡಿದು ಡಿಲೀಟ್ ಮಾಡಬಹುದು.

ನೋಟಿಫಿಕೇಷನ್ ನಿಯಂತ್ರಿಸಿ: ಸೆಟ್ಟಿಂಗ್ಸ್ ಕ್ಲಿಕ್ ಮಾಡಿ ನೋಟಿಷಿಕೇಷನ್ ಮತ್ತು ಸೌಂಡ್ ಆಯ್ಕೆಯಲ್ಲಿ ನಿಮಗೆ ಯಾವ ನೋಟಿಫಿಕೇಷನ್ ಬೇಕು ಮತ್ತು ಬೇಡ ಎಂಬುದನ್ನು ಆಯ್ಕೆ ಮಾಡಿಕೊಳ್ಳಿ. ನಿಮ್ಮ ಸಂಪರ್ಕದಲ್ಲಿರುವವರು ಟೆಲಿಗ್ರಾಂಗೆ ಸೇರಿದ್ದಾರೆ ಎಂಬ ನೋಟಿಫಿಕೇಷನ್ ಕಿರಿಕಿರಿ ಅನಿಸಿದರೆ ಇವೆಂಟ್ಸ್ ಎಂಬ ಆಯ್ಕೆಯಡಿಯಲ್ಲಿ ಟೆಲಿಗ್ರಾಂಗೆ ಸೇರಿರುವ ಸಂಪರ್ಕ ಸಂಖ್ಯೆಯ ನೋಟಿಫಿಕೇಷನ್ ರದ್ದು ಮಾಡಿದರೆ ಸಾಕು.

ಇದನ್ನೂ ಓದಿ: ಮೊಬೈಲ್‌ನಲ್ಲಿ Auto correct ಫೀಚರ್ ಸದುಪಯೋಗ ಹೇಗೆ?

ಫೈಲ್‌ಗಳ ಗಾತ್ರ ನಿಯಂತ್ರಿಸಿ: ಟೆಲಿಗ್ರಾಂನಲ್ಲಿ ಬರುವ ಫೋಟೊ/ವಿಡಿಯೊಗಳು ಮೊಬೈಲ್ ಡೇಟಾ ಆನ್ ಇರುವಾಗ ಡೌನ್‌ಲೋಡ್ ಮಾಡಿಕೊಳ್ಳಬೇಕೇ ಅಥವಾ ‘ವೈಫೈ ಇದ್ದಾಗ ಮಾತ್ರ ಡೌನ್‌ಲೋಡ್ ಮಾಡಬೇಕೆ’ ಎಂಬ ಆಯ್ಕೆಗಳು ಇಲ್ಲಿವೆ. ನಿಮ್ಮಿಷ್ಟದ ಆಯ್ಕೆಯನ್ನು ಆನ್ ಅಥವಾ ಆಫ್ ಮಾಡಬಹುದು. ಅದೇ ವೇಳೆ ಟೆಲಿಗ್ರಾಂನಲ್ಲಿ ಬರುವ ಆಡಿಯೊ/ವಿಡಿಯೊ ಅಥವಾ ಫೋಟೊಗಳನ್ನು ಎಷ್ಟು ದಿನ ಉಳಿಸಿಕೊಳ್ಳಬೇಕು ಎಂಬುದಕ್ಕಾಗಿ ಸಂಗ್ರಹ ಬಳಕೆ( ಸ್ಟೋರೇಜ್ ಯೂಸೇಜ್)ನಲ್ಲಿ ಆಯ್ಕೆಗಳಿವೆ. ನೀವು ಆಯ್ಕೆ ಮಾಡಿರುವ ದಿನಗಳಷ್ಟು ಕಾಲ ಮಾತ್ರ ಆ ಫೈಲ್‌ಗಳು ಲಭ್ಯವಿರುತ್ತವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು