ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Log4Shell ಪತ್ತೆ: ವಿಶ್ವದಾದ್ಯಂತ ಸರ್ವರ್‌ಗಳಿಗೆ ಹ್ಯಾಕಿಂಗ್‌ ಭೀತಿ

Last Updated 11 ಡಿಸೆಂಬರ್ 2021, 11:29 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವದಾದ್ಯಂತ ಬಳಕೆಯಲ್ಲಿರುವ ಕ್ಲೌಡ್‌ ಸರ್ವರ್‌ಗಳು ಮತ್ತು ಎಂಟರ್‌ಪ್ರೈಸ್‌ ಸಾಫ್ಟ್‌ವೇರ್‌ಗಳಲ್ಲಿ ಸರ್ವವ್ಯಾಪಿಯಾಗಿರುವ ದೋಷವೊಂದು ತಲೆನೋವಾಗಿ ಪರಿಣಮಿಸಿದೆ. ಶೀಘ್ರದಲ್ಲೇ ದೋಷವನ್ನು ಸರಿ ಪಡಿಸದಿದ್ದಲ್ಲಿ ಬೃಹತ್‌ ಸೈಬರ್‌ ಹ್ಯಾಕಿಂಗ್‌ಗೆ ಅವಕಾಶ ಮಾಡಿಕೊಟ್ಟಂತಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಈ ಬಗ್ಗೆ ಸೈಬರ್‌ ಭದ್ರತಾ ಸಂಸ್ಥೆ ಕ್ರೌಡ್‌ಸ್ಟ್ರೈಕ್‌ನ ಉಪಾಧ್ಯಕ್ಷ ಆ್ಯಡಮ್‌ ಮೇಯರ್ಸ್‌ 'ಅಂತರ್ಜಾಲವೀಗ ಸಂಕಷ್ಟದಲ್ಲಿದೆ. ದೋಷವನ್ನು ರಿಪೇರಿ ಮಾಡಲು ಹೆಣಗಾಡುತ್ತಿದ್ದಾರೆ. ಎಲ್ಲ ರೀತಿಯ ಜನರು ತೊಂದರೆ ಎದುರಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.

'ಕಳೆದ 12 ಗಂಟೆಗಳಿಂದ ದೋಷವು ಸಕ್ರಿಯವಾಗಿದೆ. ಅಂದರೆ ಹ್ಯಾಕ್‌ ಮಾಡಲು ಕುತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ, ಹಂಚಿಕೆ ಮಾಡಲಾಗಿದೆ ಎಂದರ್ಥ' ಎಂದುಶುಕ್ರವಾರ ಬೆಳಗ್ಗೆ ಆ್ಯಡಮ್‌ ತಿಳಿಸಿದ್ದಾರೆ.

ದೋಷವನ್ನು ಸರಿಪಡಿಸದಿದ್ದಲ್ಲಿ ಅತ್ಯಮೂಲ್ಯ ಡೇಟಾಗಳನ್ನು ಕದಿಯಲು, ಕುತಂತ್ರಾಂಶಗಳನ್ನು ಸೇರಿಸಲು, ಮಹತ್ವದ ಮಾಹಿತಿಯನ್ನು ಅಳಿಸಿ ಹಾಕಲು ಸುಲಭವಾಗುತ್ತದೆ ಎನ್ನಲಾಗಿದೆ. 'ಕಳೆದ ದಶಕದಲ್ಲೇ ಎದುರಾಗಿರುವ ಪ್ರಬಲ ಕಂಪ್ಯೂಟರ್‌ ದೋಷ ಇದಾಗಿದೆ' ಎಂದು ಸೈಬರ್‌ ಭದ್ರತಾ ಸಂಸ್ಥೆ ಟೆನೆಬಲ್‌ನ ಸಿಇಒ ಅಮಿತ್‌ ಯೊರಾನ್‌ ತಿಳಿಸಿದ್ದಾರೆ.

ಈ ಕಂಪ್ಯೂಟರ್‌ ಎಕ್ಸ್‌ಪ್ಲಾಯಿಟ್‌ ದೋಷವನ್ನು ಲಾಗ್‌ಫೋರ್‌ಶೆಲ್‌(Log4Shell) ಎಂದು ಗುರುತಿಸಲಾಗಿದೆ. ಅಪಾಚೆ ಸಾಫ್ಟ್‌ವೇರ್‌ ಫೌಂಡೇಶನ್‌ ದೋಷವನ್ನು ಸರಿಪಡಿಸಲು ತುರ್ತು ಭದ್ರತಾ ನವೀಕರಣವನ್ನು ಬಿಡುಗಡೆ ಮಾಡಿದೆ.

ಕ್ಲೌಡ್‌ ಸರ್ವರ್‌ಗಳಾದ ಸ್ಟೀಮ್‌, ಆ್ಯಪಲ್‌ ಐಕ್ಲೌಡ್‌ ಹಾಗೂ ಮೈಕ್ರೋಸಾಫ್ಟ್‌ನಂತಹ ಆ್ಯಪ್‌ಗಳು ಈಗಾಗಲೇ ದುರ್ಬಲಗೊಂಡಿರುವುದು ಕಂಡುಬಂದಿರುವುದಾಗಿ ಆ್ಯಪ್‌ ಭದ್ರತಾ ಕಂಪನಿ ಲುನಾಸೆಕ್‌ನ ಸಂಶೋಧಕರು ಹೇಳಿದ್ದಾರೆ.

ಆ್ಯಪಲ್‌, ಅಮೆಜಾನ್‌, ಕ್ಲೌಡ್‌ಫ್ಲೇರ್‌, ಟ್ವಿಟರ್‌, ಸ್ಟೀಮ್‌, ನೆಟ್‌ಈಸ್‌, ಟೆನ್ಸೆಂಟ್‌ ಮತ್ತಿತರ ಕಂಪನಿಗಳು ಲಾಗ್‌ಫೋರ್‌ಶೆಲ್‌ನ ಹ್ಯಾಕಿಂಗ್‌ ಆತಂಕ ಎದುರಿಸುತ್ತಿರುವ ಸರ್ವರ್‌ಗಳನ್ನು ಹೊಂದಿವೆ ಎಂದು ಟೆಕ್‌ಕ್ರಂಚ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT