ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟಾದಿಂದ ಡೆವಲಪರ್‌ಗಳಿಗೆ ನೆರವು

Last Updated 9 ಡಿಸೆಂಬರ್ 2022, 16:35 IST
ಅಕ್ಷರ ಗಾತ್ರ

ಬೆಂಗಳೂರು: ಫೇಸ್‌ಬುಕ್‌ನ ಮಾತೃಸಂಸ್ಥೆಯಾಗಿರುವ ಮೆಟಾ, ಎಕ್ಸ್‌ಟೆಂಡೆಡ್‌ ರಿಯಾಲಿಟಿ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ಭಾರತದ ಕೊಡುಗೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಫಿಕ್ಕಿ) ಎಕ್ಸ್‌ಆರ್ ಓಪನ್ ಸೋರ್ಸ್ ಕಾರ್ಯಕ್ರಮಕ್ಕೆ 1 ಮಿಲಿಯನ್ ಡಾಲರ್ ನೆರವು ಒದಗಿಸುತ್ತಿದೆ.

ಎಕ್ಸ್‌ಆರ್ ಓಪನ್ ಸೋರ್ಸ್ ಕಾರ್ಯಕ್ರಮವು ತಂತ್ರಜ್ಞಾನದ ಈ ವಲಯದಲ್ಲಿ ಕೆಲಸ ಮಾಡುವ ದೇಶದ 100 ಡೆವಲಪರ್‌ಗಳಿಗೆ ನೆರವು ಒದಗಿಸಲಿದ್ದು, ಅವರಿಗೆ ತಿಂಗಳ ಭತ್ಯೆ ಹಾಗೂ ಮಾರ್ಗದರ್ಶನ ನೀಡಲಿದೆ. ಎಕ್ಸ್‌ಆರ್‌ ಟೆಕ್ನಾಲಜಿಗೆ ಸಂಬಂಧಿಸಿದ ಓಪನ್ ಸೋರ್ಸ್ ಯೋಜನೆಗಳಿಗೆ ಕೊಡುಗೆ ನೀಡಲು ಈ ಯೋಜನೆಯು ಡೆವಲಪರ್‌ಗಳಿಗೆ ಸಹಾಯ ಒದಗಿಸಲಿದೆ ಎಂದು ‍ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT