ಬೆಂಗಳೂರು: ಜಾಗತಿಕ ಹವಾಮಾನ ಬದಲಾವಣೆಗೆ ಟೆಸ್ಲಾ ಸಿಇಒ ಎಲೊನ್ ಮಸ್ಕ್ ನೀಡುತ್ತಿರುವ ಕೊಡುಗೆ ಗಮನಾರ್ಹವಾದುದು ಎಂದು ಮೈಕ್ರೋಸಾಫ್ಟ್ ಸಹಸಂಸ್ಥಾಪಕ ಬಿಲ್ ಗೇಟ್ಸ್ ಶ್ಲಾಘಿಸಿದ್ದಾರೆ. ಎಲೊನ್ ಮಸ್ಕ್ ಪ್ರಸ್ತಾವಿಸಿರುವ ಯೋಜನೆಗಳು ಈಗಿರುವ ಸಮಸ್ಯೆಗಳಿಗೆ ನೈಜ ಪರಿಹಾರವಲ್ಲ, ಆದರೆ ಅವರನ್ನು ಕಡೆಗಣಿಸುವಂತಿಲ್ಲ ಎಂದು ಗೇಟ್ಸ್ ಹೇಳಿದ್ದಾರೆ.
ಕಾರಾ ಸ್ವಿಶರ್ 'ಸ್ವೇ ಪಾಡ್ಕಾಸ್ಟ್' ಸಂದರ್ಶನದಲ್ಲಿ ಭಾಗವಹಿಸಿದ್ದ ಬಿಲ್ ಗೇಟ್ಸ್, ‘ಹೌ ಟು ಅವಾಯ್ಡ್ ಅ ಕ್ಲೇಮೇಟ್ ಡಿಸಾಸ್ಟರ್’ ಎಂಬ ಪುಸ್ತಕದ ಕುರಿತು ಮಾತನಾಡುತ್ತಾ, ರಾಕೆಟ್ನಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಬದಲು, ಆ ಹಣವನ್ನು ಲಸಿಕೆ ತಯಾರಿಸಲು ಬಳಸಬಹುದು ಎಂದಿದ್ದಾರೆ.
1000 ಡಾಲರ್ ಮೊತ್ತಕ್ಕೆ ಲಸಿಕೆ ಖರೀದಿಸಿ ಒಂದು ಜೀವ ಉಳಿಸಬಹುದು. ನನ್ನ ಫೌಂಡೇಶನ್ ಕೂಡ ಅದನ್ನೇ ಮಾಡುತ್ತಿದೆ. ಅದರ ಬದಲು ಬಾಹ್ಯಾಕಾಶ ಯಾನದ ಕುರಿತು ನಾನು ಚಿಂತಿಸುತ್ತಿಲ್ಲ ಎಂದು ಬಿಲ್ ಗೇಟ್ಸ್ ತಿಳಿಸಿದ್ದಾರೆ.
ಪ್ರಯಾಣಿಕ ಕಾರುಗಳ ವಿಚಾರದಲ್ಲಿ ಟೆಸ್ಲಾ ಅತ್ಯುತ್ತಮ ಕೆಲಸ ಮಾಡಿದೆ. ಆದರೆ ವಿದ್ಯುತ್, ಪ್ರಯಾಣಿಕ ಕಾರು ವಿಚಾರಕ್ಕಿಂತಲೂ ಸ್ಟೀಲ್, ಸಿಮೆಂಟ್ ಮತ್ತು ಮಾಂಸ, ಈ ಬಗ್ಗೆ ನಾವು ಹೆಚ್ಚು ಚಿಂತಿಸಬೇಕಾಗಿದೆ ಮತ್ತು ಕೆಲಸ ಮಾಡಬೇಕಿದೆ ಎಂದು ಗೇಟ್ಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.