ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2021ಕ್ಕೆ ಜಿಯೊ 5ಜಿ ಸೇವೆ: ಮುಕೇಶ್ ಅಂಬಾನಿ

Last Updated 8 ಡಿಸೆಂಬರ್ 2020, 18:06 IST
ಅಕ್ಷರ ಗಾತ್ರ

ನವದೆಹಲಿ: 5ಜಿ ದೂರಸಂಪರ್ಕ ಸೇವೆಗಳನ್ನು 2021ರ ದ್ವಿತೀಯಾರ್ಧದಲ್ಲಿ ಆರಂಭಿಸುವ ಸೂಚನೆಯನ್ನು ಜಿಯೊ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ನೀಡಿದ್ದಾರೆ. ಅತ್ಯಂತ ವೇಗದ ಇಂಟರ್ನೆಟ್ ಸಂಪರ್ಕ ನೀಡುವ 5ಜಿ ಸೇವೆಗಳನ್ನು ಬೇಗನೆ ಆರಂಭಿಸಲು, ಅವು ಎಲ್ಲರಿಗೂ ಸಿಗುವಂತೆ ಆಗಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದೂ ಅವರು ಹೇಳಿದ್ದಾರೆ.

‘ಭಾರತವು ಇಂದು ಅತ್ಯುತ್ತಮ ಡಿಜಿಟಲ್ ಸಂಪರ್ಕ ಹೊಂದಿರುವ ದೇಶಗಳ ಸಾಲಿಗೆ ಸೇರಿದೆ. ಈ ಸ್ಥಾನವನ್ನು ಉಳಿಸಿಕೊಳ್ಳಬೇಕು ಎಂದಾದರೆ, 5ಜಿ ಸೇವೆಗಳನ್ನು ತ್ವರಿತವಾಗಿ ಆರಂಭಿಸಲು, ಅವು ಎಲ್ಲರ ಕೈಗೆಟಕುವ ದರದಲ್ಲಿ ಇರುವಂತಾಗಲು, ಎಲ್ಲ ಕಡೆಯೂ ಸಿಗುವಂತಾಗಲು ನೀತಿ ನಿರೂಪಣೆ ಹಂತದಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. 2021ರ ದ್ವಿತೀಯಾರ್ಧದಲ್ಲಿನ5ಜಿ ಕ್ರಾಂತಿಯಲ್ಲಿ ಜಿಯೊ ಮುಂಚೂಣಿಯಲ್ಲಿ ಇರುತ್ತದೆ ಎಂಬ ಭರವಸೆಯನ್ನು ನಾನು ನೀಡುತ್ತಿದ್ದೇನೆ’ ಎಂದು ಅವರು ಹೇಳಿದರು.ಇದನ್ನೂ ಓದಿ:ಜಿಯೊದಿಂದ ಅಗ್ಗದ 5ಜಿ ಸ್ಮಾರ್ಟ್‌ಫೋನ್‌?

ಜಿಯೊ ಕಂಪನಿಯ 5ಜಿ ಸೇವೆಗಳು ದೇಶದಲ್ಲೇ ಅಭಿವೃದ್ಧಿಪಡಿಸಿದ ನೆಟ್‌ವರ್ಕ್‌ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಿವೆ.

‘ದೇಶದ 30 ಕೋಟಿ ಮೊಬೈಲ್‌ ಫೋನ್‌ ಬಳಕೆದಾರರು ಇಂದಿಗೂ 2ಜಿ ಕಾಲದಲ್ಲೇ ಇದ್ದಾರೆ. ಅವರು ಕೈಗೆಟಕುವ ದರದಲ್ಲಿ ಸ್ಮಾರ್ಟ್‌ಫೋನ್‌ ಹೊಂದುವಂತೆ ಆಗಲು, ಅವರು ಕೂಡ ತಮ್ಮ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ನೇರವಾಗಿ ವರ್ಗಾವಣೆ ಮಾಡಿಕೊಳ್ಳುವ ಸೌಲಭ್ಯ ಅನುಭವಿಸುವಂತೆ ಆಗಲು, ಡಿಜಿಟಲ್ ಅರ್ಥ ವ್ಯವಸ್ಥೆಯಲ್ಲಿ ಅವರೂ ಪಾಲ್ಗೊಳ್ಳುವಂತೆ ಆಗಲು ನೀತಿ ನಿರೂಪಣೆ ಹಂತದಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ’ ಎಂದು ಅಂಬಾನಿ ಆಗ್ರಹಿಸಿದರು.

‘₹5 ಸಾವಿರಕ್ಕಿಂತ ಕಡಿಮೆ ಮೊತ್ತದ, 5ಜಿ ಸೌಲಭ್ಯ ಇರುವ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆ ರಿಲಯನ್ಸ್ ಜಿಯೊ ಕಂಪನಿಗೆ ಇದೆ. ಮಾರುಕಟ್ಟೆಗೆ ಬಿಡುಗಡೆ ಮಾಡಿದ ನಂತರದ ದಿನಗಳಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯನ್ನು ₹2,500 ಅಥವಾ ₹3,000ಕ್ಕೆ ತಗ್ಗಿಸುವ ಆಲೋಚನೆ ಕೂಡ ಕಂಪನಿಗೆ ಇದೆ’ ಎಂದು ಇತ್ತೀಚೆಗೆ ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT