ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗಾಗಿ ಎಜುಬ್ಲಾಗ್ಸ್‌

ಆ್ಯಪ್ ಅಂಗಳ
Last Updated 25 ಜೂನ್ 2019, 19:31 IST
ಅಕ್ಷರ ಗಾತ್ರ

ಎಜುಬ್ಲಾಗ್ಸ್‌

ತಮ್ಮದೇ ಹೆಸರಿನಲ್ಲಿ ಬ್ಲಾಗ್ ರಚಿಸಿ ಮನಸ್ಸಿಗೆ ತೋಚಿದ್ದನ್ನು ಗೀಚುವುದು ಅನೇಕರ ಹವ್ಯಾಸ. ಈ ಸಾಲಿಗೆ ಶೈಕ್ಷಣಿಕ ಆ್ಯಪ್‌ ಒಂದು ಸೇರ್ಪಡೆಯಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬ್ಲಾಗ್ ರಚಿಸಿಕೊಳ್ಳಬಹುದು. ಇದರಲ್ಲಿ ಕೇವಲ ಬರಹಗಳನ್ನಷ್ಟೇ ಅಲ್ಲ ವಿಡಿಯೊ, ಫೋಟೊ ಹಾಗೂ ಪಾಡ್‌ಕಾಸ್ಟ್‌ಗಳನ್ನು ಸೇರಿಸಬಹುದು. ಇದನ್ನು ರಚಿಸುವುದು ಸುಲಭ. ವಿಜ್ಞಾನದ ವಿಷಯಕ್ಕೆ ಸಂಬಂಧಿಸಿದ ಗ್ರಂಥಾಲಯವನ್ನೂ ಇದು ಒಳಗೊಂಡಿದೆ. ಇದನ್ನು ಮನೆಯಲ್ಲಿ ಹಾಗೂ ತರಗತಿಯಲ್ಲಿ ಸುಲಭವಾಗಿ ಬಳಸಬಹುದು. ಖರ್ಚಿಲ್ಲದೇ ವಿಡಿಯೊ ಕೂಡ ತಯಾರಿಸಬಹುದು. ಇದರಲ್ಲಿ ಸಿಗುವ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮರು ಸೃಷ್ಟಿ ಮಾಡುವ ಮೂಲಕ ಕಲಿಯಬಹುದು. ಎಲ್ಲಾ ವಯಸ್ಸಿನ ಮಕ್ಕಳೂ ಇದರಲ್ಲಿ ತಮ್ಮ ಬ್ಲಾಗ್ ರಚಿಸಿಕೊಂಡು ಸುಲಭವಾಗಿ ಕಲಿಯಬಹುದು.

ವೊಲ್ಫ್ರಾಮ್ ಆಲ್ಫಾ

ಈ ಆ್ಯಪ್ ಉತ್ತರ ಹೇಳುವ ಯಂತ್ರವಿದ್ದಂತೆ. ಇದರಲ್ಲಿ ಸಮಾಜ, ವಿಜ್ಞಾನ, ಗಣಿತ ಹೀಗೆ ಎಲ್ಲ ವಿಷಯಕ್ಕೆ ಸಂಬಂಧಿಸಿ‌ದಂತೆ ಉತ್ತರಗಳಿರುತ್ತವೆ. ಕಂಪ್ಯೂಟರ್‌ನಲ್ಲಿ ಸಿಗುವಷ್ಟೇ ವೇಗವಾಗಿ ಇದರಲ್ಲಿ ಉತ್ತರಗಳು ಸಿಗುತ್ತವೆ. ಜೊತೆಗೆ ಉತ್ತರಗಳು ನಿಖರವಾಗಿರುತ್ತವೆ. ಉತ್ತರ ಹೇಳುವ ಜೊತೆಗೆ ನೀವು ಕೇಳುವ ಪ್ರಶ್ನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಒದಗಿಸುತ್ತದೆ. ಇದರಲ್ಲಿ ಅನೇಕ ವಿಷಯಗಳು ಒಳಗೊಂಡಿರುವುದರಿಂದ ಮಕ್ಕಳು ಎಲ್ಲ ವಿಷಯದ ಕುರಿತು ಜ್ಞಾನ ಬೆಳೆಸಿಕೊಳ್ಳಬಹುದು. ಕೈಯಲ್ಲಿ ಇರುವ ಆ್ಯಪ್‌ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಆದರೆ ಸರಿಯಾದ ಪ್ರಶ್ನೆಗಳನ್ನು ಹೇಗೆ ಕೇಳುವುದು ಎಂಬುದನ್ನು ಮಾತ್ರ ಮಕ್ಕಳು ಕಲಿತಿರಬೇಕು.

ಸೋಲೊಲರ್ನ್‌

ಇದು ಗೂಗಲ್ ಪ್ಲೇ ಅಭಿವೃದ್ಧಿ ಪಡಿಸಿದ ಆ್ಯಪ್. ಇದರಲ್ಲಿ ಕಂಪ್ಯೂಟರ್‌ ಲ್ಯಾಂಗ್ವೇಜ್‌ಗಳನ್ನು ಸುಲಭವಾಗಿ ಕಲಿಯಬಹುದು. ಗೂಗಲ್ ಪ್ಲೇ ಅನೇಕ ಶೈಕ್ಷಣಿಕ ಆ್ಯಪ್‌ಗಳನ್ನು ಹೊಂದಿದೆ. ಅದರ ವಿಶೇಷವೇನೆಂದರೆ ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗಳು. ಅದರ ಎಲ್ಲಾ ಆ್ಯಪ್‌ಗಳು ಕಂಪ್ಯೂಟರ್ ಲ್ಯಾಂಗ್ವೇಜ್‌ಗಳನ್ನು ಕಲಿಸುತ್ತವೆ. ಫೈಥನ್, ಜಾವಾ, ಸಿ ++, ಎಚ್‌ಟಿಎಂಎಲ್‌, ಪಿಎಚ್‌ಪಿ, ಜಾವಾ ಸ್ಕ್ರಿಪ್ಟ್‌, ಎಸ್‌ಕ್ಯೂಎಲ್‌ ಹಾಗೂ ಸ್ವಿಫ್ಟ್ ಸೇರಿದಂತೆ ಎಲ್ಲ ರೀತಿಯ ಕಂಪ್ಯೂಟರ್ ಲ್ಯಾಂಗ್ವೇಜ್‌ಗಳು ಇದರಲ್ಲಿ ಲಭ್ಯವಿವೆ. ಈ ಎಲ್ಲಾ ಆ್ಯಪ್‌ಗಳು ಉಚಿತವಾಗಿ ಲಭ್ಯವಿದ್ದು ಪ್ರತಿಯೊಬ್ಬ ಬಳಕೆದಾರನ ವಿಮರ್ಶೆಯನ್ನು ಇದು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT