ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುತಿನ ಚೀಟಿಗಾಗಿ ಆನ್‍ಲೈನ್ ಅರ್ಜಿ ಸಲ್ಲಿಸಿ

Last Updated 7 ಆಗಸ್ಟ್ 2019, 7:53 IST
ಅಕ್ಷರ ಗಾತ್ರ

ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಮತದಾನ ಮಾಡಲು ನಿಮ್ಮ ಬಳಿ ಮತದಾರರ ಗುರುತಿನಚೀಟಿ ಮತ್ತು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರಬೇಕು. ನಿಮ್ಮ ಬಳಿ ಮತದಾರರ ಗುರುತಿನ ಚೀಟಿ (Voter id) ಇಲ್ಲದಿದ್ದರೆ, ಮೊದಲ ಬಾರಿ ಮತದಾನ ಮಾಡುವವರಾಗಿದ್ದರೆ ಗುರುತಿನ ಚೀಟಿಗಾಗಿ ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್‌ ಮಾಡಬೇಕು.

ಅಗತ್ಯ ದಾಖಲೆಗಳು

1. ನಿಮ್ಮ ವಯಸ್ಸು ತೋರಿಸುವ ದಾಖಲೆ (ಮತದಾನ ಮಾಡಲು 18 ವರ್ಷ ಆಗಿರಬೇಕು)

a)ಜನ್ಮ ದಿನಾಂಕದ ದಾಖಲೆ ಪತ್ರ (ಮುನ್ಸಿಪಾಲಿಟಿ ಅಥವಾ ಜಿಲ್ಲಾ ಕಚೇರಿಯಿಂದ ಪ್ರಮಾಣೀಕೃತವಾಗಿರಬೇಕು)

b)ಶಾಲೆ/ ಕಾಲೇಜು ಸರ್ಟಿಫಿಕೇಟ್ (10 ನೇ ತರಗತಿ ಅಥವಾ ಇನ್ಯಾವುದೇ ಶೈಕ್ಷಣಿಕ ಅರ್ಹತೆಯ ಸರ್ಟಿಫಿಕೇಟ್‍ನಲ್ಲಿ ನಿಮ್ಮ ಜನ್ಮ ದಿನಾಂಕ ನಮೂದಾಗಿದ್ದರೆ, ಅದನ್ನು ಜನ್ಮ ದಿನಾಂಕದ ದಾಖಲೆಯಾಗಿ ಪರಿಗಣಿಸಲಾಗುವುದು)

c)ಪಾಸ್‍ಪೋರ್ಟ್ d) PAN ಕಾರ್ಡ್ e) ಡ್ರೈವಿಂಗ್ ಲೈಸನ್ಸ್ f) ಆಧಾರ್ ಕಾರ್ಡ್

ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೆ ಸಾಕು

2. ವಿಳಾಸದ ದಾಖಲೆ (ಯಾವುದಾದರೂ ಒಂದು ದಾಖಲೆ ಸಾಕು)

a)ನೀವು ಇಂಥಾ ಸ್ಥಳದಲ್ಲಿ ವಾಸವಾಗಿದ್ದೀರಿ ಎಂದು ತೋರಿಸುವ ದಾಖಲೆ ಬೇಕು

b)ಬ್ಯಾಂಕ್ ಪಾಸ್ ಬುಕ್/ ಕಿಸಾನ್ ಪಾಸ್ ಬುಕ್/ ಪೋಸ್ಟ್ ಆಫೀಸಿನಲ್ಲಿ ಖಾತೆ ಹೊಂದಿರುವ ಪಾಸ್‍ಬುಕ್

c)ರೇಷನ್ ಕಾರ್ಡ್

d)ಪಾಸ್ ಪೋರ್ಟ್

e)ಆದಾಯ ತೆರಿಗೆಯ ದಾಖಲೆ

f)ಬಾಡಿಗೆ ಮನೆಯಾಗಿದ್ದರೆ ಪ್ರಸ್ತುತ rent agreement ಪತ್ರ

g)ನೀರು/ ಟೆಲಿಫೋನ್/ ವಿದ್ಯುತ್ ಅಥವಾ ಗ್ಯಾಸ್ ಕನೆಕ್ಷನ್ ಬಿಲ್

3. ಪಾಸ್‍ಪೋರ್ಟ್ ಗಾತ್ರದ ಫೋಟೊ

ಇವುಗಳನ್ನು ಸ್ಕ್ಯಾನ್ ಮಾಡಿಟ್ಟುಕೊಂಡ ನಂತರ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‍ಗೆ ಭೇಟಿ ನೀಡಿ.
ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವ ವಿಧಾನ

1.ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್‍ https://www.nvsp.in/ ಗೆ ಭೇಟಿ ನೀಡಿ. Apply online for registration of new voter / due to shifting from AC ಕ್ಲಿಕ್ ಮಾಡಿ. ಅಲ್ಲಿ Form 6 ಮೇಲೆ ಕ್ಲಿಕ್ ಮಾಡಿದಾಗ ಅರ್ಜಿ ತೆರೆದುಕೊಳ್ಳುತ್ತದೆ. ಕ್ಲಿಕ್ ಮಾಡಿದ ಕೂಡಲೇ ಹಿಂದಿ ಭಾಷೆಯಲ್ಲಿ ಅರ್ಜಿ ಡಿಸ್‍ಪ್ಲೇ ಆಗುತ್ತಿದ್ದು, ಬಲ ಭಾಗದಲ್ಲಿ ಮೇಲೆ select language ನಲ್ಲಿ ಇಂಗ್ಲಿಷ್ ಅಥವಾ ಮಲಯಾಳಂ ಭಾಷೆ ಆಯ್ಕೆ ಮಾಡಬಹುದು.

2.ಅರ್ಜಿಯಲ್ಲಿ ಎಲ್ಲ ಮಾಹಿತಿಗಳನ್ನು ತುಂಬಿದ ನಂತರ Submit ಬಟನ್ ಒತ್ತಿ.
ಅರ್ಜಿ ಸಲ್ಲಿಕೆಯಾದ ಕೂಡಲೇ ನಿಮ್ಮ ಇಮೇಲ್‍ಗೆ ಲಿಂಕ್ ಕಳಿಸಲಾಗುತ್ತದೆ. ಈ ಲಿಂಕ್ ಮೂಲಕ ನಿಮ್ಮ ಮತದಾರರ ಗುರುತಿನ ಚೀಟಿ ಅರ್ಜಿಯ status ಟ್ರ್ಯಾಕ್ ಮಾಡಬಹುದು. ಸರಿಸುಮಾರು 30 ದಿನಗಳಲ್ಲಿ ನಿಮಗೆ ಮತದಾರರ ಗುರುತಿನ ಚೀಟಿ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT