ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಖರೀದಿಸಿದ ವಸ್ತುಗಳ ಪಟ್ಟಿ ಇಲ್ಲಿದೆ

Last Updated 22 ಮೇ 2019, 19:46 IST
ಅಕ್ಷರ ಗಾತ್ರ

ಆನ್‌ಲೈನ್‌ನಲ್ಲಿ ಖರೀದಿಸಿದವಸ್ತುಗಳ ಪಟ್ಟಿ ಇಲ್ಲಿದೆ

ನೀವು ಆನ್‌ಲೈನ್ ಮೂಲಕ ಖರೀದಿಸಿದ ವಸ್ತುಗಳು ಯಾವುದು? ಯಾವಾಗ ಖರೀದಿಸಿದಿರಿ? ಈ ಎಲ್ಲ ಮಾಹಿತಿಗಳನ್ನು ಗೂಗಲ್ ಸೇವ್ ಮಾಡಿಡುತ್ತಿದೆ. ನೀವು ಖರೀದಿಸಿದ ವಸ್ತುಗಳು ಎಲ್ಲಿಂದ ಖರೀದಿಸಿದ್ದು? ಅದರ ಬೆಲೆ ಎಷ್ಟು?ಡೆಲಿವರಿ ಅಡ್ರೆಸ್ ಯಾವುದು? ಈ ಎಲ್ಲ ಮಾಹಿತಿಗಳೂ ಇಲ್ಲಿವೆ. ಅಂದರೆ ನಿಮ್ಮ ಆನ್‌ಲೈನ್ ಖರೀದಿಯ ಮೇಲೆ ಗೂಗಲ್ ಸದಾ ಕಣ್ಣಿಟ್ಟಿರುತ್ತದೆ.

ಎಲ್ಲಿ ಸೇವ್ ಆಗಿದೆ?

ಗೂಗಲ್ ಖಾತೆಗೆ ಸೈನ್ ಇನ್ ಆಗಿ https://myaccount.google.com/purchases ಲಿಂಕ್ ಕ್ಲಿಕ್ ಮಾಡಿ. ಇಲ್ಲಿ ನೀವು ಈವರೆಗೆ ಗೂಗಲ್ ಖಾತೆ ಬಳಸಿ ಆನ್‌ಲೈನ್‌ನಲ್ಲಿ ಖರೀದಿಸಿದ ಪಟ್ಟಿ ಸಿಗುತ್ತದೆ.
ಯಾವ ತಿಂಗಳು ಏನೆಲ್ಲಾ ಖರೀದಿಸಿದಿರಿ? ಎಂಬ ಪಟ್ಟಿ ಇಲ್ಲಿದ್ದು ನಿರ್ದಿಷ್ಟ ವಸ್ತುವಿನ ಹೆಸರು ಕ್ಲಿಕ್ ಮಾಡಿದ ಕೂಡಲೇ ಆ ವಸ್ತು ಎಲ್ಲಿಂದ ಖರೀದಿಸಿದ್ದು? ಯಾವಾಗ ನಿಮ್ಮ ಕೈ ತಲುಪಿದ್ದು? ಎಲ್ಲ ಮಾಹಿತಿಗಳು ಸಿಗುತ್ತವೆ.

ಎಲ್ಲಿಂದ ಆರ್ಡರ್ ಮಾಡಿರುವ ವಸ್ತುಗಳು ಇವು?

ಗೂಗಲ್ ಪ್ಲೇ ಸ್ಟೋರ್, ಗೂಗಲ್ ಎಕ್ಸ್‌ಪ್ರೆಸ್ ಹೀಗೆ ಗೂಗಲ್ ಸೇವೆಗಳನ್ನು ಬಳಸಿ ಖರೀದಿಸಿದ ವಸ್ತುಗಳು ಮತ್ತು ಆನ್‌ಲೈನ್ ಖರೀದಿಗಾಗಿ ಗೂಗಲ್ ಮೇಲ್ ಬಳಸಿದ್ದರೆ ಆ ವಸ್ತುಗಳ ಪಟ್ಟಿ ಇಲ್ಲಿ ಡಿಸ್‌ಪ್ಲೇ ಆಗುತ್ತವೆ.

ಡಿಲೀಟ್ ಮಾಡಿ

ಗೂಗಲ್‌ನ ಪರ್ಚೇಸ್ ಪುಟದಲ್ಲಿ ಖರೀದಿ ಮಾಡಿದ ವಸ್ತುಗಳ ಪಟ್ಟಿಯನ್ನು ಒಟ್ಟಿಗೆ ಡಿಲೀಟ್ ಮಾಡಲು ಸಾಧ್ಯವಿಲ್ಲ. ಇದರ ಬದಲು ಒಂದೊಂದೇ ವಸ್ತುವನ್ನು ಕ್ಲಿಕ್ ಮಾಡಿ Remove purchase ಕ್ಲಿಕ್ ಮಾಡಿ.
ಅಲ್ಲಿ Cancel ಮತ್ತು View Email ಎಂಬ ಆಯ್ಕೆಯಲ್ಲಿ view email ಕ್ಲಿಕ್ ಮಾಡಿ. ನೀವು ವಸ್ತುವನ್ನು ಖರೀದಿ ಮಾಡುವಾಗ ಅದಕ್ಕೆ ಸಂಬಂಧಿಸಿದ ಇಮೇಲ್‌ಗಳು ನಿಮ್ಮ ಇನ್‌ಬಾಕ್ಸ್‌ನಲ್ಲಿರುತ್ತವೆ. ಈ ಇಮೇಲ್‌ಗಳನ್ನು ಡಿಲೀಟ್ ಮಾಡಿ, ಈ ಮಾಹಿತಿಗಳು ನಿಮಗೆ ಮಾತ್ರ ಕಾಣಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT