ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಿಂದ 'ಭಾರತೀಯ' ರೂಪದಲ್ಲಿ ಮತ್ತೆ ಬರಲಿದೆ ಪಬ್‌ಜಿ

Last Updated 24 ನವೆಂಬರ್ 2020, 10:15 IST
ಅಕ್ಷರ ಗಾತ್ರ

ಚೀನಾ ಆ್ಯಪ್‌ಗಳ ನಿಷೇಧದ ಪ್ರವಾಹದಲ್ಲಿ ದೇಶದಿಂದ ಕಣ್ಮರೆಯಾಗಿದ್ದ ಪಬ್‌ಜಿ ಎಂಬ ಆಟ ಮತ್ತೆ ಭಾರತದಲ್ಲಿ ಶುರುವಾಗಲಿದೆ. ಯುವಜನರಲ್ಲಿ ವ್ಯಸನಕ್ಕೂ ಕಾರಣವಾಗಿ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿದ್ದ ಪಬ್‌ಜಿ ಎಂಬ ಆನ್‌ಲೈನ್ ಗೇಮ್, ಈಗ ಭಾರತೀಯ ಕಂಪನಿಯ ರೂಪ ತಾಳಿದೆ.

ಭಾರತದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಡಿ ಇದೀಗ 'ಪಬ್‌ಜಿ ಇಂಡಿಯಾ ಪ್ರೈವೆಟ್ ಲಿಮಿಟೆಡ್' ಆಗಿ ಕಂಪನಿಯು ನ.21ರಂದು ಹೆಸರು ನೋಂದಾಯಿಸಿಕೊಂಡಿದ್ದು, ಭಾರತದಲ್ಲಿ ಬೆಂಗಳೂರಿನಿಂದ ಮತ್ತೆ ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿದೆ.

ದಕ್ಷಿಣ ಕೊರಿಯಾ ಮೂಲದ 'ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್'(PUBG) ಕಾರ್ಪೊರೇಶನ್, ಚೀನಾದ ಸಹಯೋಗಿ ಸಂಸ್ಥೆ'ಟೆನ್ಸೆಂಟ್' ಮೂಲಕ ಈ ಹಿಂದೆ ಭಾರತದಲ್ಲಿ ಕಾರ್ಯಾಚರಿಸುತ್ತಿತ್ತು. ಚೀನಾದ ಆ್ಯಪ್‌ಗಳನ್ನು ನಿಷೇಧಿಸಿದಾಗ ಪಬ್‌ಜಿಯೂ ಭಾರತದಲ್ಲಿ ಕಾರ್ಯಾಚರಣೆ ನಿಲ್ಲಿಸಬೇಕಾಗಿ ಬಂದಿತ್ತು.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಸೈಟಿನಲ್ಲಿನ ಮಾಹಿತಿ ಪ್ರಕಾರ, ಪಬ್‌ಜಿ ಕಾರ್ಪೊರೇಶನ್‌ನ ಭಾರತೀಯ ಸಂಸ್ಥೆಯು ಬೆಂಗಳೂರಿನಲ್ಲಿಯೇ ನೋಂದಾವಣೆಗೊಂಡಿದ್ದು, ಅದರ ಮುಖ್ಯ ಕಚೇರಿಯೂ ಇಲ್ಲೇ ಸ್ಥಾಪನೆಯಾಗುವ ಸಾಧ್ಯತೆಗಳಿವೆ. ಪಬ್‌ಜಿ ಆನ್‌ಲೈನ್ ಆಟಕ್ಕೆ ಕೇಂದ್ರ ಸರ್ಕಾರ ಪುನಃ ಅನುಮತಿ ನೀಡುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ಪಬ್‌ಜಿ ಗೇಮ್ಸ್ ಆಡುವ ಮಕ್ಕಳು, ಓದು, ಪಾಠದತ್ತ ಗಮನ ಕೊಡದೆ, ಈ ಆನ್‌ಲೈನ್ ಗೇಮ್‌ನ ವ್ಯಸನದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಾಕಷ್ಟು ಪ್ರಕರಣಗಳು ಕೂಡ ಭಾರತದ ವಿವಿಧೆಡೆ ವರದಿಯಾಗಿದ್ದವು.

ಇವನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT