ಶನಿವಾರ, ಡಿಸೆಂಬರ್ 7, 2019
22 °C

ರಿಯಲ್‌ಮಿ ಎಕ್ಸ್‌ಟಿ

Published:
Updated:
Prajavani

ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿರುವ ರಿಯಲ್‌ಮಿ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲು ಹೊಂದುವ ನಿಟ್ಟಿನಲ್ಲಿ ಸಾಗುತ್ತಿದೆ. ತಿಂಗಳಿಗೆ ಕನಿಷ್ಠ ಒಂದು ಹೊಸ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುವ ತಂತ್ರಗಾರಿಕೆ ಅನುಸರಿಸುತ್ತಿದೆ. ಆಗಸ್ಟ್‌ನಲ್ಲಿ ರಿಯಲ್‌ಮಿ 5 ಮತ್ತು 5 ಪ್ರೊ ಬಿಡುಗಡೆ ಮಾಡಿತ್ತು. ಇದೀಗ ಸೆಪ್ಟೆಂಬರ್‌ನಲ್ಲಿ ರಿಯಲ್‌ಮಿ ಎಕ್ಸ್‌ಟಿ ಬಿಡುಗಡೆ ಮಾಡಿದೆ.

64 ಎಂಪಿ ಎಐ ಕ್ವಾಡ್‌ ಕ್ಯಾಮೆರಾ ಹೊಂದಿದ್ದು, ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಈ ಸ್ಮಾರ್ಟ್‌ಫೋನ್‌ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಸೆಲ್ಫಿಗಾಗಿ 16ಎಂಪಿ ಸೋನಿ ಕ್ಯಾಮೆರಾ ಒಳಗೊಂಡಿದೆ. 6.4 ಇಂಚಿನ ಸೂಪರ್‌ ಅಮೊಎಲ್‌ಇಡಿ ಪರದೆ ಹೊಂದಿದ್ದು, ಸ್ಕ್ರೀನ್‌ ಟು ಬಾಡಿ ರೇಷಿಯೊ ಶೇ 91.9ರಷ್ಟಿದೆ.

4 ಸಾವಿರ ಎಂಎಎಚ್‌ ಬ್ಯಾಟರಿ, 3.5ಎಂಎಂ ಹೆಡ್‌ಸೆಟ್ ಜಾಕ್‌ ಸಿ ಟೈಪ್, ಡ್ಯುಯಲ್‌ ನ್ಯಾನೊ ಸಿಮ್‌ ಇದೆ. ಫೋನ್‌ನ ಎರಡೂ ಬದಿಯಲ್ಲಿ ಗೊರಿಲ್ಲಾ ಗ್ಲಾಸ್‌ ಹೊಂದಿದೆ. ಆಂಡ್ರಾಯ್ಡ್ ಪಿ ಆಧಾರಿತ ಕಲರ್‌ಒಎಸ್‌ 6ನಿಂದ ಕಾರ್ಯಾಚರಿಸುತ್ತದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು