ಜಾಗೃತಿಗಾಗಿ ಶೇರ್‌ ಚಾಟ್‌

ಶನಿವಾರ, ಏಪ್ರಿಲ್ 20, 2019
27 °C

ಜಾಗೃತಿಗಾಗಿ ಶೇರ್‌ ಚಾಟ್‌

Published:
Updated:
Prajavani

ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಅದರಲ್ಲೂ ಕನ್ನಡದಲ್ಲಿ ಉಚಿತವಾಗಿ ಮತ ಜಾಗೃತಿ ನಡೆಸಲು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿ ಶೇರ್‌ಚಾಟ್ ಖಾತೆ ತೆರೆದಿದೆ.

ಇಲ್ಲಿ ಪ್ರಾದೇಶಿಕವಾಗಿ ನಡೆಯುವ ಜಾಗೃತಿ ಜಾಲತಾಣ ಇದಾಗಿದೆ. ಶೇರ್‌ಚಾಟ್‌ನಲ್ಲಿ @CEO_karnataka ಮೂಲಕ ಮಾಹಿತಿಯುಕ್ತ ವಿಡಿಯೋ, ಆಡಿಯೋ ಹಾಗೂ ಫೋಟೊಗಳನ್ನೂ ಅಪ್‌ಲೋಡ್ ಮಾಡಬಹುದು.

ಏಪ್ರಿಲ್‌ 18ರಂದು ಚುನಾವಣೆ ಮುಗಿಯುವವರೆಗೂ ಇದರಲ್ಲಿ ಜಾಗೃತಿ ಅಭಿಯಾನ ನಡೆಸಲು ಅವಕಾಶ ನೀಡಲಾಗಿದೆ. ಸಖತ್‌ ಸ್ಟುಡಿಯೋ ಇದಕ್ಕೆ ಕ್ರಿಯೇಟಿವ್‌ ಪಾಲುದಾರಿಕೆ ಹೊಂದಿದೆ. 

‘ಚಿಕ್ಕ ಗ್ರಾಮಗಳಲ್ಲೂ ಶೇರ್ ಚಾಟ್ ಬಳಕೆದಾರರು ಇದ್ದಾರೆ. ಇದರಲ್ಲಿ ಪೋಸ್ಟ್ ಮಾಡುವ ಮೂಲಕ ಮತದಾರರ ಸಂಖ್ಯೆ ಕೂಡ ಹೆಚ್ಚುವ ಸಾಧ್ಯತೆ ಇದೆ’ ಎಂದು ಜಂಟಿ ಮುಖ್ಯ ಚುನಾವಣಾ ಅಧಿಕಾರಿ ಎ.ವಿ. ಸೂರ್ಯಸೇನ್‌ ಹೇಳಿದರು. 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !