ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್ ಸ್ಟೇಟಸ್ ಫೇಸ್‌ಬುಕ್‌ನಲ್ಲಿ ಷೇರ್ ಮಾಡಿ

Last Updated 25 ಸೆಪ್ಟೆಂಬರ್ 2019, 19:31 IST
ಅಕ್ಷರ ಗಾತ್ರ

ಜನಪ್ರಿಯ ಮೆಸೆಜಿಂಗ್ ತಾಣ ವಾಟ್ಸ್‌ಆ್ಯಪ್ ತನ್ನ ಬಳಕೆದಾರರಿಗೆ ಸದಾ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಲೇ ಇರುತ್ತದೆ. ಇದೀಗ ವಾಟ್ಸ್‌ಆ್ಯಪ್ ಸ್ಟೋರಿಗಳನ್ನು ಫೇಸ್‌ಬುಕ್‌ನಲ್ಲಿ ಷೇರ್ ಮಾಡುವ ಆಯ್ಕೆಯನ್ನು ಆಂಡ್ರಾಯ್ಡ್ ಬಳಕೆದಾರರಿಗೆ ಒದಗಿಸಿದೆ.

2020ರ ಒಳಗಾಗಿ ವಾಟ್ಸ್‌ಆ್ಯಪ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಬಳಕೆದಾರರು ಪರಸ್ಪರ ಸಂವಹನ ನಡೆಸಲು ಆಗುವಂತೆ ಮಾಡುವ ಉದ್ದೇಶವನ್ನು ಫೇಸ್‌ಬುಕ್ ಇಸಿಒ ಮಾರ್ಕ್ ಝುಕರ್ ಬರ್ಗ್ ಅವರು ಹೊಂದಿದ್ದಾರೆ. ಇದರ ಭಾಗವಾಗಿ ಈ ಆಯ್ಕೆ ನೀಡಲಾಗಿದೆ.

ಇನ್‌ಸ್ಟಾಗ್ರಾಂನಂತೆಯೇ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕುವ ಇಮೇಜ್, ಟೆಕ್ಸ್ಟ್ ಮತ್ತು ವಿಡಿಯೊಗಳು 24 ಗಂಟೆಯ ನಂತರ ಮಾಯವಾಗುತ್ತವೆ. ಆದರೆ ಇದೀಗ ಪರಿಚಯಿಸಿರುವ ಹೊಸ ವೈಶಿಷ್ಟ್ಯದಿಂದಾಗ ಸ್ಟೇಟಸ್ ಸ್ಟೋರಿಯನ್ನು ಫೇಸ್‌ಬುಕ್‌ನಲ್ಲಿ ಮತ್ತು ಇತರೆ ಆ್ಯಪ್‌ಗಳಲ್ಲಿ ನೇರವಾಗಿ ಷೇರ್ ಮಾಡಬಹುದು

ಸ್ಟೇಟಸ್‌ಗೆ ಇಮೇಜ್ ಅಥವಾ ವಿಡಿಯೊ ಅಪ್‌ಲೋಡ್ ಮಾಡಿದ ಬಳಿಕ ಸ್ಟೇಟಸ್ ಕೆಳಗೆ ಷೇರ್ ಆಯ್ಕೆ ಕಾಣಿಸುತ್ತದೆ. ಹಾಗಾದರೆ ಇನ್ನೇಕೆ ತಡ ವಾಟ್ಸ್‌ಆ್ಯಪ್ ಸ್ಟೋರಿಗಳನ್ನು ಫೇಸ್‌ಬುಕ್‌ನಲ್ಲಿಯೂ ಹಂಚಿಕೊಂಡು ಸಂಭ್ರಮಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT