ರೇಷ್ಮೆ ಪರೀಕ್ಷಾ ಕೇಂದ್ರಗಳ ಉದ್ಘಾಟನೆ

ಮಂಗಳವಾರ, ಮಾರ್ಚ್ 19, 2019
21 °C

ರೇಷ್ಮೆ ಪರೀಕ್ಷಾ ಕೇಂದ್ರಗಳ ಉದ್ಘಾಟನೆ

Published:
Updated:
Prajavani

ಹಲಸೂರಿನ ಟ್ಯಾಂಕ್ ರೋಡ್‍ನಲ್ಲಿರುವ ಕೆಎಚ್‍ಡಿಸಿ ಸಂಕೀರ್ಣದಲ್ಲಿ ಈಚೆಗೆ ರೇಷ್ಮೆ ಬಟ್ಟೆಯ ಗುಣಮಟ್ಟ ಪರೀಕ್ಷಿಸಲು 9 ಗ್ರಾಹಕ ಪರೀಕ್ಷಾ ಕೇಂದ್ರಗಳನ್ನು ಉದ್ಘಾಟಿಸಲಾಯಿತು.

ಮಹಿಳಾ ದಿನದ ಅಂಗವಾಗಿ ಈ ಕೇಂದ್ರಗಳನ್ನು ಸಿಲ್ಕ್‌ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾದ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ, ಕೇಂದ್ರಿಯ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಮತ್ತು ಬೆಂಗಳೂರು ಎಸ್‍ಎಂಒಐನ ಉಪ ಅಧ್ಯಕ್ಷ ರಜಿತ್ ರಂಜನ್ ಓಖಾಂಡಿಯರ್, ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರ ಉದ್ಘಾಟಿಸಿದರು.

ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಬೆಂಗಳೂರಿನಲ್ಲಿ 9 ಗ್ರಾಹಕ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿದ್ದು, ಇವು ಪ್ರಮುಖ ರೀಟೆಲ್ ಕೇಂದ್ರಗಳಲ್ಲಿರುತ್ತವೆ. ಗ್ರಾಹಕರಿಗೆ ರೇಷ್ಮೆಯ ಗುಣಮಟ್ಟ ಮತ್ತು ಶುದ್ಧತೆಯನ್ನು ಕ್ಷಿಪ್ರ ಗತಿಯಲ್ಲಿ ಮತ್ತು ಸುಲಭ ಕ್ರಮದಲ್ಲಿ ಪರೀಕ್ಷೆ ಮಾಡಿ ತಿಳಿಸಲು ಇದಕ್ಕಾಗಿ ಕೇಂದ್ರೀಯ ರೇಷ್ಮೆ ಮಂಡಳಿಯಲ್ಲಿ ತರಬೇತಿ ಹೊಂದಿದ ಸಿಬ್ಬಂದಿ ಇರುತ್ತಾರೆ.

ಅಗ್ನಿಪರೀಕ್ಷೆ, ಸೂಕ್ಷ್ಮದರ್ಶಕ ಪರೀಕ್ಷೆ ಇತ್ಯಾದಿ ಶುದ್ಧತಾ ಪರೀಕ್ಷೆಗಳನ್ನು ಇಲ್ಲಿ ಪೂರೈಸಲಾಗಿದ್ದು, ಗ್ರಾಹಕರಿಗೆ ಇನ್ವಾಯ್ಸ್ ಮತ್ತು ಸರಳ ಪರೀಕ್ಷಾ ವರದಿಯನ್ನು ನೀಡಲಾಗುತ್ತದೆ. ಸೀರೆಗಳ ರಚನೆಯನ್ನು ಹಾಳುಮಾಡದೆ ಈ ಪರೀಕ್ಷೆಗಳನ್ನು ಮಾಡಲಾಗುವುದಲ್ಲದೆ, ತಕ್ಷಣ ವರದಿಗಳನ್ನು ನೀಡಲಾಗುತ್ತದೆ. ಇದರಿಂದ ಗ್ರಾಹಕರ ಸಮಯ ವ್ಯರ್ಥವಾಗುವುದಿಲ್ಲ. ಈ ಪ್ರತಿ ಪರೀಕ್ಷೆಗೆ ಕೇವಲ 
₹ 20 ಶುಲ್ಕ ಇರುತ್ತದೆ. ನಗರದ ರೇಷ್ಮೆ ಪ್ರೇಮಿಗಳು ತಮ್ಮ ರೇಷ್ಮೆ ಉಡುಪುಗಳ ಶುದ್ಧತೆಯನ್ನು ಈ ಕೆಳಗಿನ ಕೇಂದ್ರಗಳಲ್ಲಿ ಪರೀಕ್ಷಿಸಿಕೊಳ್ಳಬಹುದಾಗಿದೆ.

* ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ, ರೂಂ ನಂ. 20, ಮೊದಲನೇ ಮಹಡಿ, ಬಿಟಿಎಂ ಬಡಾವಣೆ, ಬೆಂಗಳೂರು.  (ದೂರವಾಣಿ: 2628 2152/2628 2117)

* ಕರ್ನಾಟಕ ರೇಷ್ಮೆ ಬಟ್ಟೆ ರಿಟೇಲ್ ಮಾರಾಟಗಾರರ ಸಂಸ್ಥೆ, ನಂ. 646, 3ನೇ ಮಹಡಿ, ಗುಪ್ತಾ ಕಾಂಪ್ಲೆಕ್ಸ್, ಚಿಕ್ಕಪೇಟೆ ಸ್ಕ್ವೈರ್ (95382 22133)

* ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಸಿಲ್ಕ್ ಎಕ್ಸ್‌ಚೇಂಜ್ ಬಿಲ್ಡಿಂಗ್, ನಂ. 39, ಗ್ರೌಂಡ್ ಫ್ಲೋರ್, ಎಚ್.ಎಸ್. ಕಾಂಪ್ಲೆಕ್ಸ್, ಕಬ್ಬನ್‍ಪೇಟೆ ಮುಖ್ಯರಸ್ತೆ, (2221 1309)

* ಪ್ರಿಯದರ್ಶಿನಿ, ನಂ. 1, ಕಮರ್ಷಿಯಲ್ ಕಾಂಪ್ಲೆಕ್ಸ್, ಟ್ಯಾಂಕ್ ರಸ್ತೆ, ಎಂಇಜಿ ಸೆಂಟ್ರಲ್ ಹತ್ತಿರ, (99000 17270)

* ಪ್ರಿಯದರ್ಶಿನಿ, ನಂ. 61/62, ಮೊದಲ ಮಹಡಿ, ಬಿಬಿಎಂಪಿ ಕಮರ್ಷಿಯಲ್ ಕಾಂಪ್ಲೆಕ್ಸ್, ಜಯನಗರ (99000 17260)

* ಪ್ರಿಯದರ್ಶಿನಿ, ನಂ. 8, ಮಹಾವೀರ್ ಕಾಂಪ್ಲೆಕ್ಸ್, ಗಾಂಧಿನಗರ, (99000 17262)

* ರೇಷಮ್ ಘರ್, ಸಿಸಿಐಸಿ, ನಂ. 144, ಶುಭಂ ಕಾಂಪ್ಲೆಕ್ಸ್, ಎಂ.ಜಿ. ರಸ್ತೆ (94480 71867)

* ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ, ಓಕಳಿಪುರಂ, ನಂ. 4, ವಾಟಾಳ್  ನಾಗರಾಜ್ ರಸ್ತೆ, (94491 11481)

* ಪ್ರಿಯದರ್ಶಿನಿ, ಸ್ಯಾರಿ ಹೌಸ್, ಲಾಲ್‍ಬಾಗ್ ವೆಸ್ಟ್‌ ಗೇಟ್, ಆರ್.ವಿ. ರಸ್ತೆ,(99000 17336)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !