ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಲೈಫ್‌ಗಾಗಿ ಸ್ಮಾರ್ಟ್ ಸಾಧನ

Last Updated 20 ಫೆಬ್ರುವರಿ 2019, 19:32 IST
ಅಕ್ಷರ ಗಾತ್ರ

ಇದು ತಂತ್ರಜ್ಞಾನದ ಯುಗ. ಬೆರಳತುದಿಯಲ್ಲಿಯೇ ಎಲ್ಲವನ್ನೂ ನಿಯಂತ್ರಿಸಬಲ್ಲ ನಿತ್ಯ ನೂತನ ವೈಶಿಷ್ಟಗಳನ್ನು ಒಳಗೊಂಡ ಹೊಸ ಹೊಸ ವಿದ್ಯುನ್ಮಾನ ಉಪಕರಣಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ.

ಪ್ರತಿ ವರ್ಷದಂತೆ ಈ ಬಾರಿಯೂ ಕಣ್ಸೆಳೆಯುವ ಟ್ರೆಂಡಿಂಗ್ ಎಲೆಕ್ಟ್ರಾನಿಕ್ ಗ್ಯಾಜೆಟ್‍ಗಳು ಹೊರಬರುತ್ತಿವೆ. ಕುಳಿತಲ್ಲಿಯೇ ಮನೆ ಸ್ವಚ್ಛಗೊಳಿಸಲು, ಸುಲಭವಾಗಿ ನಿರ್ವಹಿಸಲು ಹಾಗೂ ಆಡಿಯೊ ಸೆಟ್‌ಗಳ ಧ್ವನಿ ನಿಯಂತ್ರಿಸುವಂತಹ ಉಪಕರಣಗಳು ಮಾರುಕಟ್ಟೆ ಪ್ರವೇಶಿಸುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನದ ಗಾಳಿ ಶುದ್ಧಿಕರಣ ಯಂತ್ರದಿಂದ ಹಿಡಿದು ರೋಬೊಟಿಕ್ ವ್ಯಾಕೂಮ್ ಕ್ಲೀನರ್‌ಗಳು ನಿಮ್ಮನ್ನು ಇನ್ನಷ್ಟು ಸ್ಮಾರ್ಟ್ ಆಗಿಸಲಿವೆ. ಅಂಥ ಪ್ರಮುಖ ನಾಲ್ಕು ಉತ್ಪನ್ನಗಳ ಪರಿಚಯ ಇಲ್ಲಿದೆ.

ಅಮೇಜಾನ್ ಅಲೆಕ್ಸಾ

ಬಹುತೇಕ ರೋಬೊಗಳು ಒಂದೇ ಒಂದು ಪದದ ಆದೇಶವನ್ನು ಪಡೆಯದೇ ನಿಮ್ಮ ಕೆಲಸವನ್ನು ಮಾಡುತ್ತವೆ. ಎಲ್ಲಾ ರೋಬೊಗಳು ಅಮೆಜಾನ್ ಅಲೆಕ್ಸಾನಂತೆ ಜಾಣವಲ್ಲ. ಜಾಗತಿಕ ಇ-ಕಾಮರ್ಸ್ ಕಂಪನಿ ಅಮೆಜಾನ್ ಅಭಿವೃದ್ಧಿಪಡಿಸಿರುವ ಈ ಅಲೆಕ್ಸಾದಿಂದ ನಿಮ್ಮ ಮನೆಯಲ್ಲಿ ಅಳವಡಿಸಲಾಗಿರುವ ಐಓಟಿ ಡಿವೈಸ್ ಹಾಗೂ ಸ್ಮಾರ್ಟ್ ಸಾಧನಗಳನ್ನು ನಿಯಂತ್ರಿಸಬಹುದು. ಮಾತುಕತೆಯ ವರ್ಚುವಲ್ ಹೋಮ್ ಅಸಿಸ್ಟೆಂಟ್ ಆಗಿರುವ ಅಮೆಜಾನ್ ಅಲೆಕ್ಸಾ ಮೂಲಕ ರಿಮೈಂಡರ್‌ಗಳನ್ನು ಸೆಟ್‌ ಮಾಡಬಹುದು. ಅಪಾಯಿಂಟ್‍ಮೆಂಟ್ ಬುಕ್ ಮಾಡಬಹುದು. ನ್ಯೂಸ್ ಓದಬಹುದು. ಇದೆಲ್ಲಕ್ಕೂ ನಿಮ್ಮ ಸರಳ ಧ್ವನಿ ಸೂಚನೆಯೊಂದೇ ಸಾಕು. ‘ಅಲೆಕ್ಸಾ, ಮೇಕ್ ರೂಂಬಾ ಕ್ಲೀನ್ ದಿ ಲಿವಿಂಗ್ ರೂಮ್, ಸೆಟ್ ದಿ ಎಸಿ ಟು 20 ಡಿಗ್ರೀಸ್‌ ಇಂಟರ್ನೆಟ್‍ನಲ್ಲಿ ಆಸಕ್ತಿಕರ ಥಾಯ್ ರೆಸಿಪಿ ಹುಡುಕು’ ಎಂದು ಹೇಳಿದರೆ ಸಾಕು, ಅದು ತನ್ನ ಪಾಡಿಗೆ ನಿಮ್ಮ ಕೆಲಸವನ್ನು ಮಾಡುತ್ತದೆ.

ರೂಂಬಾ 966

ಇದೊಂದು ಶಕ್ತಿಶಾಲಿ ರೊಬೊ ವ್ಯಾಕೂಮ್ ಕ್ಲೀನರ್. ನಿಮ್ಮ ಆರಾಮದಾಯಕ ಜೀವನಕ್ಕೆ ಕಿರಿಕಿರಿ ಉಂಟುಮಾಡದೇ ಮನೆಯ ಇಂಚಿಂಚು ಸ್ಥಳವನ್ನೂ ತುಂಬಾ ನಾಜೂಕಿನಿಂದ ಸ್ವಚ್ಛಗೊಳಿಸುತ್ತದೆ. Roomba 966 ವೈಫೈ ಸೌಕರ್ಯವನ್ನು ಸಕ್ರಿಯಗೊಳಿಸುತ್ತದೆ ಮತ್ತು iRobot HOME ಆ್ಯಪ್ ಮೂಲಕ ಇದನ್ನು ಸುಲಭವಾಗಿ ನಿಯಂತ್ರಿಸಬಹುದು. ನೀವು ಮನೆಯಲ್ಲಿ ಇಲ್ಲದಿದ್ದಾಗಲೂ ಸ್ಟಾರ್ಟ್ ಮತ್ತು ಸ್ಟಾಪ್ ಆಯ್ಕೆಗಳ ಮೂಲಕ ನಿರ್ದಿಷ್ಟವಾಗಿ ಸ್ವಚ್ಛಗೊಳಿಸುವ ಕಾರ್ಯದ ಅವಧಿಯನ್ನು ನಿಗದಿ ಮಾಡ ಬಹುದು. ಸ್ವಚ್ಛ ಮತ್ತು ಕಸವಿರುವ ಪ್ರದೇಶಗಳನ್ನು ಮ್ಯಾಪ್‌ ಮೂಲಕ ಟ್ರ್ಯಾಕ್ ಮಾಡಿ ಇಡೀ ನೆಲವನ್ನು ಶುಭ್ರಗೊಳಿಸುತ್ತದೆ.

ಮೈಕ್ರೊಸಾಫ್ಟ್ ಸರ್ಫೇಸ್ ಪ್ರೊ 6

ಹೊಸ ತಂತ್ರಜ್ಞಾನದ ಬಗ್ಗೆ ಒಲವಿರುವ ಹಾಗೂ ಅಂತಹ ಸಾಧನಗಳನ್ನು ಬಳಸಬೇಕೆಂಬ ಇಚ್ಛೆಯುಳ್ಳ ಯುವ ಸಮೂಹಕ್ಕೆ ಇದು ಹೇಳಿ ಮಾಡಿಸಿದಂತಿದೆ. 12.3 ಇಂಚು ಪಿಕ್ಸೆಲ್‍ಸೆನ್ಸ್ ಟಚ್‍ಸ್ಕ್ರೀನ್ ಡಿಸ್‍ಪ್ಲೇ, 8 ಜನರೇಷನ್ ಇಂಟೆಲ್ ಕ್ವಾಡ್‍ಕೋರ್ ಪ್ರೊಸೆಸರ್, 8.0 ಎಂಪಿ ಆಟೊ ಫೋಕಸ್ ಎಚ್‍ಡಿ ಕ್ಯಾಮೆರಾ ಹಾಗೂ ವಿಂಡೋಸ್ 10 ಹೈಬ್ರಿಡ್ ಸಿಸ್ಟಂ ಹೊಂದಿರುವ ಇದು ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಗೆ ಸಿದ್ಧವಾಗಿದೆ. ಕೇವಲ 1.7 ಪೌಂಡ್ ತೂಕವಿರುವ ಇದು ಹಗುರವಾಗಿದ್ದರೂ ಕಾರ್ಯನಿರ್ವಹಣೆಯಲ್ಲಿ ಚುರುಕು. ವಿಂಡೋಸ್ ಇಂಕ್ ಸಾಫ್ಟ್‌ವೇರ್‌ ಹೊಂದಾಣಿಕೆಯೊಂದಿಗೆ ನೀವು ಸರ್ಫೇಸ್ ಪ್ರೊನಲ್ಲಿ ನೋಟ್ಸ್ ಮಾಡಿಕೊಳ್ಳಬಹುದು. ಚಿತ್ರ ಹಾಗೂ ಡೂಡಲ್ ಬಿಡಿಸುವುದು ಸೇರಿದಂತೆ ಇನ್ನೂ ಹಲವು ಉದ್ದೇಶಗಳಿಗೆ ಇದನ್ನು ಬಳಸಬಹುದು. ಟೈಪ್ ಕವರ್ ಜೋಡಣೆ ಯೊಂದಿಗೆ(ಪ್ರತ್ಯೇಕವಾಗಿಯೂ ಮಾರಾಟ ಮಾಡಲಾಗುತ್ತಿದೆ) ಇದನ್ನು ಟ್ಯಾಬ್ಲೆಟ್ ರೀತಿಯಲ್ಲಿ ಇಲ್ಲವೇ ಲ್ಯಾಪ್‍ಟಾಪ್ ರೀತಿಯಲ್ಲೂ ಬಳಸಬಹುದು.

ಬ್ರಾವಾ 390ಟಿ

ಐರೋಬಾಟ್‍ ಅಭಿವೃದ್ಧಿಪಡಿಸಿದ ಮನೆ ಸ್ವಚ್ಛಗೊಳಿಸುವ ಅತ್ಯಾಧುನಿಕ ಸಾಧನವಿದು. ಬ್ರಾವಾ 390ಟಿ ಮನೆಯನ್ನು ಗುಡಿಸುವ ಮತ್ತು ಒರೆಸುವ ಒಂದು ಜಾಣ ಉಪಕರಣ. ರೂಂಬಾ 966 ಸಾಧನದ ಜತೆಗೆ ಮನೆಯಲ್ಲಿ ಇದೂ ಇದ್ದರೆ ಉತ್ತಮ. ಅತ್ಯಾಧುನಿಕ ಆಪ್ಟಿಕಲ್ ಮತ್ತು ಅಕಸ್ಟಿಕ್ ಸೆನ್ಸಾರ್‌ಗಳ ಮೂಲಕ ಕಾರ್ಯನಿರ್ವಹಿಸುವ ಬ್ರಾವಾ390 ಟಿ ಸಾಧನ ಪ್ರೋ ಕ್ಲೀನ್ ರಿಸರ್‍ವೈಯರ್ ಪ್ಯಾಡ್‍ನೊಂದಿಗೆ ಮನೆಯ ಇಂಚಿಂಚು ಸ್ಥಳವನ್ನು ಗುಡಿಸಿ ಒರೆಸುತ್ತದೆ. ಇದು ಎರಡು ಬಗೆಯ ಶುಚಿಗೊಳಿಸುವ ಕ್ರಿಯೆಗಳನ್ನು ಹೊಂದಿದೆ. ಸಿಂಗಲ್ ಪಾಸ್ ಕ್ಲೀನಿಂಗ್ ಮತ್ತು ಟ್ರಿಪಲ್ ಪಾಸ್ (ಝಿಗ್ ಝಾಗ್ ಮಾದರಿಯಲ್ಲಿ ಚಲನೆ) ಕ್ಲೀನಿಂಗ್ ವಿಧಾನವನ್ನು ಹೊಂದಿದ್ದು, ವೈಯಕ್ತಿಕ ಅಗತ್ಯಕ್ಕೆ ಅನುಗುಣವಾಗಿ ಮನೆಯನ್ನು ಶುದ್ಧೀಕರಣಗೊಳಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT