ಶನಿವಾರ, ಸೆಪ್ಟೆಂಬರ್ 19, 2020
21 °C

ಅಗ್ಗದಲ್ಲಿ ಸ್ಮಾರ್ಟ್ ಹೋಮ್‌ ತಂತ್ರಜ್ಞಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರಕ್ಷತೆಯ ಎಲ್ಲಾ ಅವಕಾಶಗಳನ್ನೂ ಬಳಸಿಕೊಂಡು ಜೊತೆಗೆ ಅಗ್ಗವಾಗಿಯೂ ಮನೆ ನಿರ್ಮಿಸುವುದು ಸವಾಲಿನ ಕೆಲಸ. ನಗರದ ವಿದ್ಯಾರ್ಥಿಗಳ ತಂಡ ಇಂತದ್ದೊಂದು ಮಾದರಿಯನ್ನು ನಿರ್ಮಿಸಿ ಸೈ ಎನಿಸಿಕೊಂಡಿದೆ.

ಬೆಂಕಿ ಹತ್ತದಂತೆ ಭದ್ರತೆ, ಅವಘಡದ ಸಂದರ್ಭದಲ್ಲಿ ಮನೆಯವರನ್ನು ಎಚ್ಚರಿಸಲು ಸ್ಮೋಕ್‌ ಡಿಟೆಕ್ಟರ್‌, ಈ ಡಿಟೆಕ್ಟರ್‌ ಸರ್ವೋ ಮೋಟರ್‌ ಅನ್ನು ಬಳಸಿಕೊಂಡು ಸ್ವಯಂಚಾಲಿತವಾಗಿ ಕಿಟಕಿಗಳನ್ನು ತೆರೆಯುತ್ತದೆ. ಹೊಗೆಯನ್ನು ಹೊರಹಾಕಲು ನಿಷ್ಕಾಸ ನಾಳದ ವ್ಯವಸ್ಥೆ ಕೂಡ ಇದೆ.

ರಾತ್ರಿಯ ಸಮಯದಲ್ಲಿ ಮನೆಗೆ ಯಾರಾದರೂ ನುಗ್ಗಿದರೆ ಅಥವಾ ಬಾಗಿಲನ್ನು ಒಡೆಯಲು ಪ್ರಯತ್ನಿಸಿದರೆ ಮನೆಯವರನ್ನು ಎಚ್ಚರಿಸುತ್ತದೆ. ಇದಕ್ಕಾಗಿ ಎಚ್ಚರಿಕೆ ಗಂಟೆಯನ್ನೂ ಅಳವಡಿಸಲಾಗಿದೆ. ಬಾಗಿಲನ್ನು ತೆರೆಯಲು ಆರ್‌ಎಫ್‌ಐಡಿ ಕಾರ್ಡ್ ಬಳಕೆ ಮಾಡಬಹುದು. ಸರಿಯಾದ ಮಾಹಿತಿ ನೀಡಿದರೆ ಮಾತ್ರ ಈ ಬಾಗಿಲು ತೆರೆದುಕೊಳ್ಳುತ್ತದೆ. ಮನೆ, ಕಚೇರಿಯನ್ನು ನಿರ್ವಹಿಸಲು ಎಲೆಕ್ಟ್ರಾನಿಕ್ ಸಾಧನವನ್ನು ಒಳಗೊಂಡ ಅಪ್ಲಿಕೇಶನ್‌ ಕೂಡ ಸಿದ್ದಮಾಡಲಾಗಿದೆ.

ಈ ಅಪ್ಲಿಕೇಶನ್‌ ಮೂಲಕ ಮನೆಯ ಸುರಕ್ಷತೆ ಬಗ್ಗೆ ಕಚೇರಿಯಲ್ಲಿಯೇ ಮಾಹಿತಿ ಪಡೆದುಕೊಳ್ಳಬಹುದು. ಮನೆಯಲ್ಲಿರುವ ವಿವಿಧ ವಿದ್ಯುನ್ಮಾನ ಸಾಧನಗಳ ಸಂಪರ್ಕವನ್ನೂ ಇದು ಹೊಂದಿರುತ್ತದೆ. ಎಂವಿಜೆ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು