ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಆವಿಷ್ಕಾರ: ಸ್ಮಾರ್ಟ್‌ ಸೂಟ್‌ಕೇಸ್‌ ತಂತ್ರಜ್ಞಾನ

Last Updated 26 ಜೂನ್ 2019, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಎಂವಿಜೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಚಾಲಿತ ಹಾಗೂ ಟ್ರ್ಯಾಕಿಂಗ್‌ ವ್ಯವಸ್ಥೆ ಹೊಂದಿರುವ ಸ್ಮಾರ್ಟ್‌ ಸೂಟ್‌ಕೇಸ್‌ ಅಭಿವೃದ್ಧಿಪಡಿಸಿದ್ದಾರೆ.

ವಿದ್ಯಾರ್ಥಿಗಳಾದ ಮಿಷೆಲ್‌ ಜೆ.ಆರಾಧನಾ, ಮೀನಾಕ್ಷಿ ಪೋದರ್‌, ರಿತಿಕಾ ಅಯ್ಯರ್‌, ಸೌರವ್‌ ಬೆಹ್ರಾ ಈ ನೂತನ ತಂತ್ರಜ್ಞಾನದ ರೂವಾರಿಗಳು. ಈ ಸೂಟ್‌ಕೇಸ್‌ಗೆ ಮೊದಲು ಐಒಟಿ ತಂತ್ರಜ್ಞಾನವನ್ನು ಅಳವಡಿಸಲಾಯಿತು. ಒಂದು ವೇಳೆ ಸೂಟ್‌ಕೇಸ್‌ ಕಳ್ಳತನ ಆದರೆ ಇಂಟರ್‌ನೆಟ್‌ ಆಫ್‌ ಥಿಂಗ್ಸ್ ಟೆಕ್ನಾಲಜಿಯಿಂದ ಅದನ್ನು ಸುಲಭವಾಗಿ ಕಂಡುಹಿಡಿಯಬಹುದು.

ಸೂಟ್‌ಕೇಸ್‌ನಲ್ಲಿರುವ ಯಾವುದಾದರೂ ವಸ್ತುಗಳನ್ನು ಕದ್ದರೆ, ಭಾರದಲ್ಲಿ ಆಗುವ ಬದಲಾವಣೆಯನ್ನು ಅರಿತುಕೊಂಡು ಮಾಲೀಕರಿಗೆ ಸಂದೇಶದ ಮೂಲಕ ಕಳ್ಳತನದ ವಿಷಯವನ್ನು ರವಾನಿಸಲಿದೆ. ಇದಕ್ಕಾಗಿ ವೇಟ್‌ ಸೆನ್ಸರ್‌ ಕೂಡ ಅಳವಡಿಸಲಾಗಿದೆ. ಸೂಟ್‌ಕೇಸ್‌ ಇರುವ ಸ್ಥಳವನ್ನು ಕೂಡ ಇದು ಪತ್ತೆಮಾಡಬಹುದು. ಗೂಗಲ್‌ ಮ್ಯಾಪ್‌ನ ನೆರವಿನಿಂದ ಇದು ಸಾಧ್ಯವಾಗಿದೆ.

ಸ್ಮಾರ್ಟ್ ಸೂಟ್‌ಕೇಸ್‌
ಸ್ಮಾರ್ಟ್ ಸೂಟ್‌ಕೇಸ್‌

ಭಾರ ಎತ್ತಬೇಕಿಲ್ಲ: ವಿದ್ಯಾರ್ಥಿಗಳು ರೋಬೋಟಿಕ್‌ ತಂತ್ರಜ್ಞಾನವನ್ನು ಬಳಸಿಕೊಂಡು ಸ್ವಯಂ ಚಾಲಿತವಾಗಿ ಸೂಟ್‌ಕೇಸ್ ಬಳಸುವ ವಿಧಾನವನ್ನು ಕಂಡುಹಿಡಿದಿದ್ದಾರೆ. ಇದು ವಯೋವೃದ್ಧರಿಗೆ ಹಾಗೂ ದೂರದ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ. ಸದ್ಯ ರಿಮೋಟ್ ಬಳಕೆಯಿಂದ ಮಾಲೀಕರನ್ನು ಸೂಟ್‌ಕೇಸ್‌ ಹಿಂಬಾಲಿಸಲಿದೆ. ಆದರೆ ಕೆಲವೇ ದಿನಗಳಲ್ಲಿ ರಿಮೋಟ್ ಇಲ್ಲದೆಯೇ ಚಲಿಸುವಂತಹ ಸ್ಮಾರ್ಟ್ ತಂತ್ರಜ್ಞಾನವನ್ನು ಕೂಡ ಇದಕ್ಕೆ ಅಳವಡಿಸಲಾಗುತ್ತಿದೆ. ಇದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಂತ್ರಜ್ಞಾನವನ್ನು ಪಡೆದುಕೊಳ್ಳಲಿದೆ. 15 ದಿನಗಳಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT