ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್‌ ಪ್ರವಾಸ: ಇಲ್ಲ ಪ್ರಯಾಸ

ದೂರ ಪ್ರವಾಸ ಕೈಗೊಳ್ಳುವವರ ನೆರವಿಗೆ ಕಿರುತಂತ್ರಾಂಶಗಳು
Last Updated 21 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ದೂರ ಪ್ರವಾಸ ಕೈಗೊಳ್ಳುವವರಿಗಾಗಿ ಸ್ಮಾರ್ಟ್ ಫೋನ್‌ಗಳಲ್ಲಿರುವ ಹಲವು ತಂತ್ರಾಂಶಗಳು ನೆರವಾಗುತ್ತವೆ. ಸದ್ಯ ವಾಟ್ಸ್ ಆ್ಯಪ್‌ ವಿಶ್ವದಲ್ಲಿ ಸಂದೇಶ ಕಳುಹಿಸಲು ಬಳಕೆಯಾಗುವ ಜನಪ್ರಿಯ ಆ್ಯಪ್‌. ಈಗ ಏಷ್ಯಾದಲ್ಲಿ ಇಂಥ ಸೌಲಭ್ಯ ನೀಡುವ ಇನ್ನೂ ಮೂರು ಮೊಬೈಲ್‌ ಅಪ್ಲಿಕೇಷನ್‌ಗಳು ಲಭ್ಯವಾಗುತ್ತಿವೆ. ಇವು ಹೆಚ್ಚುವರಿ ವೈಶಿಷ್ಟ್ಯಗಳನ್ನು ಹೊಂದಿವೆ.

ಯಾವ ಅಪ್ಲಿಕೇಷನ್‌ಗಳು?

ಚೀನಾದಲ್ಲಿ ವಿ–ಚಾಟ್‌ (We Chat), ಥಾಯ್ಲೆಂಡ್‌ನ ಲೈನ್‌ (line), ದಕ್ಷಿಣ ಕೊರಿಯದ ಕಾಕಾವೊಟಾಕ್‌ (KakaoTalk) ಸದ್ಯ ಜನಪ್ರಿಯತೆಯ ಹಾದಿಯಲ್ಲಿರುವ ಅಪ್ಲಿಕೇಷನ್‌ಗಳು. ಪಠ್ಯ ಮತ್ತು ವಿಡಿಯೊ ಸಂದೇಶ ಕಳುಹಿಸುವ ಸೌಲಭ್ಯ ಈ ಅಪ್ಲಿಕೇಷನ್‌ಗಳಲ್ಲಿವೆ.

ಉಬರ್‌ ಟ್ಯಾಕ್ಸಿ ಸೌಲಭ್ಯ, ಗೂಗಲ್‌ ನಕ್ಷೆಗಳು, ಆ್ಯಪಲ್‌ ಪೇ ನಲ್ಲಿರುವ ಎಲ್ಲ ವೈಶಿಷ್ಟ್ಯಗಳು ಈ ಅಪ್ಲಿಕೇಷನ್‌ಗಳಲ್ಲಿವೆ. ಪ್ರಯಾಣ ಹಂಚಿಕೆ (share riding), ನಗದು ರಹಿತ ಹಣ ಪಾವತಿ ವ್ಯವಸ್ಥೆಗಳು ಕೂಡಾ ಈ ಆ್ಯಪ್‌ಗಳಲ್ಲಿವೆ. ಇವು ಪ್ರವಾಸದ ವೇಳೆ ಪ್ರಯಾಣಿಕರಿಗೆ ಸಮರ್ಪಕವಾಗಿ ನೆರವಾಗಲಿವೆ.

–ಹಹ್ನಾ ಯೂನ್‌ ದ ನ್ಯೂಯಾರ್ಕ್ ಟೈಮ್ಸ್

ವಿ ಚಾಟ್

ಗೂಗಲ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಜನಪ್ರಿಯ ವೆಬ್‌ಸೈಟ್‌ಗಳನ್ನು ಕೆಲವೊಮ್ಮೆ ನಿರ್ಬಂಧಿಸಲಾಗುವುದರಿಂದ, ವೀಚಾಟ್ ಆ ಸಂದರ್ಭದಲ್ಲಿ ನೆರವಾಗುವಂತೆ ಈ ಅಪ್ಲಿಕೇಷನ್‌ನ್ನು ವಿನ್ಯಾಸಗೊಳಿಸಲಾಗಿದೆ. ಇದು ಚೀನಾದ ಪ್ರಧಾನ ಪ್ರದೇಶದಲ್ಲಿರುವ ಸಾಮಾಜಿಕ ಮಾಧ್ಯಮ ವೇದಿಕೆ. ಇದು ಇತ್ತೀಚೆಗೆ ಜನಪ್ರಿಯವಾಗಿದೆ. ಇದರಲ್ಲಿರುವ ಪ್ರಯಾಣಿಕರಿಗೆ ಭಾಷಾನುವಾದ ಮತ್ತು ನಗದುರಹಿತ ಹಣ ಪಾವತಿ ವ್ಯವಸ್ಥೆಯಲ್ಲಿ ನೆರವಾಗುತ್ತದೆ.

ಮೊದಲು, ವಿ ಚಾಟ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಫೋನ್‌ನಲ್ಲಿ ಇನ್‌ಸ್ಟಾಲ್‌ ಮಾಡಿ. ಸಾಮಾನ್ಯವಾಗಿ ಅದು ಇಂಗ್ಲಿಷ್‌ ಭಾಷೆಯಲ್ಲೇ ಇನ್‌ಸ್ಟಾಲ್‌ ಆಗುತ್ತದೆ. ಅದೇ ಭಾಷೆಯಲ್ಲಿ ಡಿಸ್ಪ್ಲೆ ಆಗುತ್ತದೆ. ಅಪ್ಲಿಕೇಷನ್‌ ಅಳವಡಿಸಿಕೊಂಡ ಬಳಿಕ ಅದರ ಪರದೆಯ ಮೇಲಿನ ಬಲಭಾಗದ ಮೂಲೆಯಲ್ಲಿ ಕ್ಲಿಕ್‌ ಮಾಡಿದರೆ 18 ಭಾಷೆಗಳ ಆಯ್ಕೆ ಪಟ್ಟಿ ಕಾಣಿಸಿಕೊಳ್ಳುತ್ತದೆ. ನಿಮಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಬಹುದು.

ಅನುವಾದಕದ ವಿಶಿಷ್ಟತೆ ಹೀಗಿದೆ: ಉದಾಹರಣೆಗೆ ರೆಸ್ಟೊರೆಂಟ್‌ನ ಮೆನು ಪಟ್ಟಿಯ ಪದಗಳನ್ನು(ಮ್ಯಾಂಡರಿನ್‌ ಅಕ್ಷರಗಳ ಪಠ್ಯ) ಅನುವಾದಿಸಲು ಸರಳ ವಿಧಾನವಿದೆ. ಅಪ್ಲಿಕೇಷನ್‌ನ ಕೆಳಭಾಗದಲ್ಲಿ ಸ್ಕ್ಯಾನ್‌ ಆಯ್ಕೆ ಇರುತ್ತದೆ ಅಥವಾ ಮೆನುವಿನಲ್ಲಿರುವ(ಇದ್ದರೆ) ಕ್ಯೂ ಆರ್‌ ಕೋಡ್‌ನ್ನೂ ಸ್ಕ್ಯಾನ್‌ ಮಾಡಬಹುದು. ಮೆನು ಪಟ್ಟಿಯಲ್ಲಿರುವ ಚಿತ್ರಗಳನ್ನು ತೆಗೆಯಲು ಈ ಅಪ್ಲಿಕೇಷನ್‌ ಅವಕಾಶ ಕಲ್ಪಿಸುತ್ತದೆ. ಚಿತ್ರ ತೆಗೆದ ಒಂದೆರಡು ಸೆಕೆಂಡ್‌ಗಳಲ್ಲಿ ಅದರಲ್ಲಿರುವ ಪಠ್ಯ ಇಂಗ್ಲಿಷ್‌ಗೆ ಅನುವಾದಗೊಳ್ಳುತ್ತದೆ ಅಥವಾ ಅಪ್ಲಿಕೇಷನ್‌ನಲ್ಲಿರುವ ಆಯ್ಕೆಯ ಯಾವುದೇ ಭಾಷೆಯಲ್ಲಿ ಪಠ್ಯವನ್ನು ಓದಬಹುದು.

ನೀವು ಚೀನಾ ಭಾಷೆಯಲ್ಲಿ ಸಂದೇಶಗಳನ್ನು ಸ್ವೀಕರಿಸಿ. ನೀವು ಫೋನ್‌ನಲ್ಲಿರುವ ಯಾವ ಭಾಷೆಯಲ್ಲಿ ಅದರ ಅನುವಾದ ಓದಬೇಕೆಂದು ನಿರ್ಧರಿಸಿ. ನಂತರ ಆ ಸಂದೇಶವನ್ನು ಸೆಲೆಕ್ಟ್‌ ಮಾಡಿ. ಅದರ ಮೇಲೆ ದೀರ್ಘಕಾಲ ಕೈ ಬೆರಳಿನಿಂದ ಒತ್ತಿ ಹಿಡಿಯಬೇಕು.

ಇನ್ನಷ್ಟು ಸೌಲಭ್ಯ

ಈ ವಿ ಚಾಟ್‌ನಲ್ಲಿ ನೀವು ಭೇಟಿ ನೀಡಿದ ಸ್ಥಳ, ಆಹಾರ ವೈವಿಧ್ಯ, ವಿಶೇಷತೆಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಬಹುದು. ಹಣ ಪಾವತಿ ವ್ಯವಸ್ಥೆ ಇದೆಯಾದರೂ ಅದಕ್ಕಾಗಿ ನೀವು ಸ್ಥಳೀಯ ಬ್ಯಾಂಕ್‌ನಲ್ಲಿ ಖಾತೆ ಹೊಂದಿರಬೇಕು. ಒಂದು ವೇಳೆ ಖಾತೆ ಇಲ್ಲವಾದರೆ ಸ್ಥಳೀಯ ಸ್ನೇಹಿತರನ್ನು ಸಹಾಯ ಕೇಳಬಹುದು. ನೀವು ಅವರಿಗೆ ಹಣವನ್ನು ಹಸ್ತಾಂತರಿಸಿದ ನಂತರ, ಅವರು ತಮ್ಮಲ್ಲಿರುವ ಆ್ಯಪ್ ಮೂಲಕ ಎಲೆಕ್ಟ್ರಾನಿಕ್ ಹಣವನ್ನು ವರ್ಚುವಲ್ ಕೆಂಪು ಲಕೋಟೆಯಲ್ಲಿ (‘ಹಾಂಗ್‌ಬಾವೊ’ ಎಂದು ಕರೆಯುತ್ತಾರೆ) ನಿಮಗೆ ವರ್ಗಾಯಿಸಬಹುದು. ನೀವು ಮೊದಲ ಬಾರಿಗೆ ಕೆಂಪು ಲಕೋಟೆ ತೆರೆಯುವುದರಿಂದ ಅಪ್ಲಿಕೇಶನ್‌ನ ‘me page’ನಲ್ಲಿ ಕಾಣಿಸಿಕೊಳ್ಳುವ ವಾಲೆಟ್ ಟ್ಯಾಬ್ ಪಾಪ್‌ ಅಪ್‌ (ಸೂಚನೆಗಳನ್ನು ತೋರಿಸಿ) ಸಕ್ರಿಯವಾಗುತ್ತದೆ. ನಂತರ ನೀವು WeChat Pay ನ್ನು ಬಳಸಬಹುದು.

ನಿಮ್ಮ ವ್ಯಾಲೆಟ್‌ನ್ನು ಭರ್ತಿ ಮಾಡಿಕೊಳ್ಳಲು ಆಯ್ಕೆಗಳಿವೆ. ನೀವು ಪೇಪಾಲ್(Paypal) ಖಾತೆಯನ್ನು ಹೊಂದಿದ್ದರೆ ಸ್ವಾಪ್ಸಿಯಂತಹ (Swapsy) ಸೇವೆಗಳನ್ನು ಸಹ ನೀವು ಬಳಸಬಹುದು. ಸ್ವಾಪ್ಸಿ ಕರೆನ್ಸಿ ವಿನಿಮಯದ ವೆಬ್‌ಸೈಟ್ ಆಗಿದ್ದು ಅದು ಪೇಪಾಲ್ ಖಾತೆಗಳಲ್ಲಿನ ಹಣವನ್ನು ವಿ ಚಾಟ್‌ ಮೂಲಕ ವಿನಿಮಯ ಮಾಡಿಕೊಳ್ಳಲು ಅನುಕೂಲ ಕಲ್ಪಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT