ಗುರುವಾರ , ಜೂನ್ 17, 2021
22 °C

ಸ್ಮಾರ್ಟ್ ಫೋನ್ ಬಿಸಿಯಾಗುತ್ತಿದೆಯೇ?

ರಶ್ಮಿ. ಕೆ Updated:

ಅಕ್ಷರ ಗಾತ್ರ : | |

ಸ್ಮಾರ್ಟ್ ಫೋನ್ ಬಿಸಿಯಾಗುತ್ತಿದೆಯೇ?

ಸ್ಮಾರ್ಟ್ ಫೋನ್ ಸಿಕ್ಕಾಪಟ್ಟೆ ಬಿಸಿಯಾಗುತ್ತದೆ ಎಂದು ಹೇಳದಿರುವವರು ಕಡಿಮೆಯೇ. ಸಾಮಾನ್ಯವಾಗಿ ನಾವು ಬಳಸುತ್ತಿರುವ ಸ್ಮಾರ್ಟ್ ಫೋನ್‍ಗಳು ಬಿಸಿಯಾಗುತ್ತವೆ. ಸದಾ ಫೋನ್‍ನಲ್ಲಿ ಬ್ಯುಸಿಯಾಗಿರುವುದು ಕೂಡಾ ಇದಕ್ಕೊಂದು ಕಾರಣ ಆಗಿದ್ದರೂ ನಾವು ಸ್ಮಾರ್ಟ್ ಫೋನ್‌ನ್ನು ಯಾವ ರೀತಿ ಬಳಸುತ್ತಿದ್ದೇವೆ ಎಂಬುದು ಕೂಡಾ ಇಲ್ಲಿ ಮುಖ್ಯವಾಗುತ್ತದೆ. ಫೋನ್ ಸಿಕ್ಕಾಪಟ್ಟೆ ಬ್ಯುಸಿ ಆಗುವುದಕ್ಕೆ ಹಾರ್ಡ್‌ವೇರ್ ಕೂಡಾ ಕಾರಣವಾಗಿದ್ದರೂ, ಫೋನ್ ಬಿಸಿಯಾಗದಂತೆ ತಡೆಯಲು ನಮ್ಮಿಂದ ಸಾಧ್ಯವಿದೆ.

ಫೋನ್ ಬಿಸಿಯಾಗದಂತೆ ತಡೆಯಲು ಟಿಪ್ಸ್‌

ನೇರವಾಗಿ ಸೂರ್ಯ ತಾಪ ತಾಕದಂತೆ ನೋಡಿಕೊಳ್ಳಿ: ಜಾಸ್ತಿ ಹೊತ್ತು ನೇರವಾಗಿ ಸೂರ್ಯ ತಾಪ ತಾಗಿದರೆ ಸ್ಮಾರ್ಟ್ ಫೋನ್‌ಗಳು ಬೇಗನೆ ಬಿಸಿಯಾಗುತ್ತವೆ. ಪ್ಲಾಸ್ಟಿಕ್ ಬ್ಯಾಕ್ ಕವರ್ ಇರುವ ಫೋನ್‍ಗಳು ಈ ರೀತಿ ಬೇಗ ಬಿಸಿಯಾಗುತ್ತವೆ. ಟಚ್ ಸ್ಕ್ರೀನ್ ತುಂಬಾ ಹೊತ್ತು ಬಿಸಿಲಿಗೆ ತೆರೆದಿಟ್ಟರೆ ಈ ರೀತಿ ಫೋನ್ ಬಿಸಿಯಾಗುವುದು ಸಹಜ.

ಚಾರ್ಜ್ ಮಾಡುವಾಗ ಬೆಡ್ ಮೇಲಿಡಬೇಡಿ: ಸಾಮಾನ್ಯವಾಗಿ ಬೆಡ್ ಬದಿಯಲ್ಲಿರುವ ಚಾರ್ಜರ್ ಪಾಯಿಂಟ್‌ನಲ್ಲಿ ಪ್ಲಗ್ ಸಿಕ್ಕಿಸಿ ಫೋನ್‌ನ್ನು ಬೆಡ್ ಮೇಲಿಟ್ಟು ಚಾರ್ಜ್ ಮಾಡುತ್ತೇವೆ. ಈ ರೀತಿ ಬೆಡ್ ಅಥವಾ ಸೋಫಾದ ಮೇಲಿಟ್ಟು ಫೋನ್ ಚಾರ್ಜ್ ಮಾಡುವಾಗ ಬೆಡ್ ಉಷ್ಣಾಂಶವನ್ನು ಹೊರ ಸೂಸುವುದರಿಂದ ಫೋನ್ ಮತ್ತಷ್ಟು ಬಿಸಿಯಾಗುತ್ತದೆ. ಯಾವತ್ತೂ ಫೋನ್ ಚಾರ್ಜ್ ಮಾಡುವಾಗ ಮೃದುವಾದ ಮೇಲ್ಮೈ ಬದಲು ಗಟ್ಟಿಯಾದ ಮೇಲ್ಮೈಯಲ್ಲಿಟ್ಟು ಚಾರ್ಚ್ ಮಾಡಿ.

ಬ್ಯಾಕ್ ಕೇಸ್ ಕವರ್ ತೆಗೆಯಿರಿ: ಮೊಬೈಲ್ ಉಂಟು ಮಾಡುವ ಉಷ್ಣವನ್ನು ಬ್ಯಾಕ್ ಕೇಸ್ ಹೊರಹೋಗಲು ಬಿಡುವುದಿಲ್ಲ. ಹೀಗಿರುವಾಗ ಫೋನ್ ಮತ್ತಷ್ಟು ಬಿಸಿಯಾಗುತ್ತದೆ. ಹೀಗೆ ಬಿಸಿಯಾದಾಗ ಬ್ಯಾಕ್ ಕೇಸ್ ತೆಗೆದು ಫೋನ್ ತಣ್ಣಗಾಗಲು ಬಿಡಿ.

ರಾತ್ರಿಯಿಡೀ ಚಾರ್ಜ್ ಮಾಡಬೇಡಿ: ಫೋನ್‌ನ್ನು ರಾತ್ರಿಯಿಡೀ ಚಾರ್ಜ್‌ಗೆ ಹಾಕಿ ಮಲಗುವ ಅಭ್ಯಾಸ ಬಹುತೇಕರಿಗೆ ಇದೆ. ಈ ರೀತಿ ಮಾಡುವುದರಿಂದ ಫೋನ್ ಹೆಚ್ಚು ಬಿಸಿಯಾಗುವುದು ಮಾತ್ರವಲ್ಲದೆ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುವುದಿಲ್ಲ.

ಬ್ಯಾಕ್‍ಗ್ರೌಂಡ್ ಆ್ಯಪ್ ತೆಗೆಯಿರಿ: ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಆ್ಯಪ್‌ಗಳು ಬ್ಯಾಕ್‍ಗ್ರೌಂಡ್‍ಲ್ಲಿ ಕಾರ್ಯವೆಸಗುತ್ತಿರುತ್ತವೆ. ಒಂದಕ್ಕಿಂತ ಹೆಚ್ಚು ಆ್ಯಪ್‌ಗಳು ಈ ರೀತಿ ಕಾರ್ಯವೆಸಗುವಾಗ ಫೋನ್ ಬಿಸಿಯಾಗುತ್ತದೆ. ಅಂಥಾ ಆ್ಯಪ್‌ಗಳನ್ನು ತೆಗೆಯಿರಿ.

ಬೇರೆ ಚಾರ್ಜರ್‌ಗಳನ್ನು ಬಳಸಬೇಡಿ: ನಿಮ್ಮ ಫೋನ್ ಚಾರ್ಜ್ ಮಾಡಲು ಬೇರೆ ಕಂಪನಿಯ ಚಾರ್ಜರ್ ಬಳಸಬೇಡಿ. ಇವು ಬ್ಯಾಟರಿ ಮೇಲೆ ಪರಿಣಾಮ ಬೀರಿ, ಫೋನ್ ಬಿಸಿಯಾಗುವಂತೆ ಮಾಡುತ್ತವೆ.

ರಶ್ಮಿ ಕೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.