ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲೇ ಏರ್‌ ಪಾಡ್ಸ್‌ ಪ್ರೊ

Last Updated 23 ಅಕ್ಟೋಬರ್ 2019, 12:31 IST
ಅಕ್ಷರ ಗಾತ್ರ

ಆ್ಯಪಲ್‌ ಕಂಪನಿಯು ತನ್ನ ಐಕಾನಿಕ್‌ ವೈಯರ್‌ಲೆಸ್‌ ಇಯರ್‌ಫೋನ್ ಏರ್‌ಪಾಡ್ಸ್‌ 2 ಬಿಡುಗಡೆ ಮಾಡಿದೆ. ಮೊದಲು ಏರ್‌ಪಾಡ್ಸ್‌ ಅನ್ನು ಬಿಡುಗಡೆ ಮಾಡಿತ್ತು.

ಅದನ್ನು ಈಚೆಗಷ್ಟೇ ಮೇಲ್ದರ್ಜೆಗೇರಿಸಿದೆ. ವಯರ್‌ ಇಲ್ಲದೆಯೇ ಇದನ್ನು ರಿಚಾರ್ಜ್‌ ಮಾಡಬಹುದಾಗಿದೆ. ಆದರೆ, ಇದು ಕಂಪನಿಯು ಮೊಟ್ಟ ಮೊದಲ ಬಾರಿಗೆ ಬಿಡುಗಡೆ ಮಾಡಿರುವುದನ್ನೇ ಹೋಲುತ್ತಿದೆ. ಹೀಗಾಗಿ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲು ಕಂಪನಿ ಮುಂದಾಗಿದೆ. ಇದು 2020ಕ್ಕೂ ಮುನ್ನವೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಇದು ಏರ್‌ಪಾಡ್ಸ್‌ಗಿಂತಲೂ ದುಬಾರಿಯಾಗಿರಲಿದೆಯಂತೆ.

ಕಂಪನಿಯು 2019ರಲ್ಲಿಯೇ ಹೊಸ ಆವೃತ್ತಿಯ ಐಪಾಡ್‌ ಪ್ರೊ, ಮ್ಯಾಕ್‌ ಪ್ರೊ ಬಿಡುಗಡೆ ಮಾಡಲಿದ್ದು, 16 ಇಂಚಿನ ಮ್ಯಾಕ್‌ ಬುಕ್‌ ಪ್ರೊ ಬಿಡುಗಡೆ ಮಾಡುವ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿವೆ.

ಈ ಬಗ್ಗೆ ಕಂಪನಿ ಅಧಿಕೃತ ಮಾಹಿತಿಯನ್ನು ಇನ್ನಷ್ಟೇ ಹಂಚಿಕೊಳ್ಳಬೇಕಿದೆ. ಚೀನಾದ ಎಕನಾಮಿಕ್‌ ಡೈಲಿಯ ಪ್ರಕಾರ ಹೊಸದಾಗಿ ಬಿಡುಗಡೆ ಆಗಲಿರುವ ಈ ಪಟ್ಟಿಯಲ್ಲಿ ಏರ್‌ಪಾಡ್ಸ್‌ ಪ್ರೊ ಸಹ ಸೇರಿಕೊಂಡಿದೆ. ರಬ್ಬರ್‌ ಇಯರ್‌ ಟಿಪ್ಸ್‌ ನೀಡಲಿದ್ದು, ಇದರಿಂದ ಹೊರಗಿನ ಶಬ್ದವು ಕೇಳುವುದಿಲ್ಲ ಎಂದು ಹೇಳಿದೆ.

ಮಾಹಿತಿ ಸಂಗ್ರಹ: ವಿಶ್ವನಾಥ ಎಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT