ಬುಧವಾರ, ಜೂನ್ 16, 2021
21 °C

ಹೊಸ ಅಪ್‌ಡೇಟ್‌: ಟೆಲಿಗ್ರಾಂನಲ್ಲೂ ಮಾಡಿ ವಿಡಿಯೊ ಕಾಲ್‌

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಟೆಲಿಗ್ರಾಂ ವಿಡಿಯೊ ಕರೆ–ಚಿತ್ರ ಕೃಪೆ: ಟೆಲಿಗ್ರಾಂ ಬ್ಲಾಗ್‌

ಅತ್ಯಂತ ಸುರಕ್ಷಿತ ಮೆಸೇಜಿಂಗ್‌ ಅಪ್ಲಿಕೇಷನ್‌ ಎಂದೇ ಬಿಂಬಿಸಿಕೊಂಡಿರುವ 'ಟೆಲಿಗ್ರಾಂ' ಇತ್ತೀಚೆಗಷ್ಟೇ ವಿಡಿಯೊ ಕರೆ ಮಾಡುವ ಆಯ್ಕೆಯನ್ನು ಪರಿಚಯಿಸಿದೆ. ಟೆಲಿಗ್ರಾಂನ ಏಳನೇ ವರ್ಷಾಚರಣೆಯ ಪ್ರಯುಕ್ತ ಆ್ಯಂಡ್ರಾಯ್ಡ್‌ ಮತ್ತು ಐಒಎಸ್‌ ಬಳಕೆದಾರರಿಗೆ ಆಲ್ಫಾ ಆವೃತ್ತಿಯ ವಿಡಿಯೊ ಕಾಲಿಂಗ್‌ ಅಪ್‌ಡೇಟ್‌ ಬಿಡುಗಡೆ ಮಾಡಿದೆ.

ಆಗಸ್ಟ್‌ 16ರಂದು ಟೆಲಿಗ್ರಾಂ ಬಳಕೆದಾರರಿಗೆ ಹೊಸ ಅಪ್‌ಡೇಟ್‌ ಕುರಿತು ಸಂದೇಶ ಬಂದಿದೆ. ಪ್ರಸ್ತುತ ಒಬ್ಬ ವ್ಯಕ್ತಿಗೆ ಮಾತ್ರ ವಿಡಿಯೊ ಕರೆ ಮಾಡಬಹುದಾಗಿದೆ ಹಾಗೂ ಮಾತನಾಡುವಾಗ ವಿಡಿಯೊ ಆಫ್‌ ಅಥವಾ ಆನ್‌ ಮಾಡಿಕೊಳ್ಳುವ ಅವಕಾಶವೂ ಇದೆ. ಈಗಾಗಲೇ ವಾಟ್ಸ್‌ಆ್ಯಪ್‌ ಮತ್ತು ಫೇಸ್‌ಬುಕ್‌ ಮೆಸೆಂಜರ್‌ ಒಮ್ಮೆಗೆ ವಿಡಿಯೊ ಕರೆಯಲ್ಲಿ ಭಾಗಿಯಾಗುವ ಬಳಕೆದಾರರ ಸಂಖ್ಯೆ ಹೆಚ್ಚಿಸುವ ಪ್ರಯತ್ನ ನಡೆಸುತ್ತಿವೆ.

ಈಗಷ್ಟೇ ಟೆಲಿಗ್ರಾಂ ವಿಡಿಯೊ ಕರೆ ಅವಕಾಶ ನೀಡಿದ್ದು, ಮುಂದಿನ ದಿನಗಳಲ್ಲಿ ಗ್ರೂಪ್‌ ವಿಡಿಯೊ ಕಾಲಿಂಗ್‌ ಆಯ್ಕೆಯನ್ನೂ ಪರಿಚಯಿಸುವುದಾಗಿ ಹೇಳಿಕೊಂಡಿದೆ. ಪ್ರಸ್ತುತ ವಿಡಿಯೊ ಕರೆ ಮಾಡುತ್ತಲೇ ಚಾಟ್‌ ಮಾಡುವುದು, ಇತರೆ ಆ್ಯಪ್‌ಗಳ ನೋಟಿಫಿಕೇಷನ್‌ ಗಮನಿಸುವುದನ್ನು ಅಡಚಣೆ ಇಲ್ಲದೆ ನಡೆಸಬಹುದು. ವಿಡಿಯೊ ಕರೆಗಳೂ ಎಂಡ್‌–ಟು–ಎಂಡ್ ಎನ್‌ಕ್ರಿಪ್ಷನ್‌ಗೆ ಒಳಪಟ್ಟಿರುತ್ತವೆ ಎಂದು ಟೆಲಿಗ್ರಾಂ ತನ್ನ ಬ್ಲಾಗ್‌ನಲ್ಲಿ ವಿವರಿಸಿದೆ. ಸ್ಕ್ರೀನ್‌ ಮೇಲೆ ಕಾಣುವ ನಾಲ್ಕು ಎಮೋಜಿಗಳು ಹೊಂದಿಕೆಯಾಗುವುದನ್ನು ಗಮನಿಸುವ ಮೂಲಕ ವಿಡಿಯೊ ಕರೆ ಎನ್‌ಕ್ರಿಪ್ಟ್‌ ಆಗಿದೆ ಅಥವಾ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ.

ಕೋವಿಡ್‌ ಕಾರಣಗಳಿಂದಾಗಿ ಬಹುತೇಕ ಸಭೆಗಳು, ಚರ್ಚೆಗಳು, ಪಾಠ ಮತ್ತು ತರಬೇತಿಗಳು ಜೂಮ್‌, ಗೂಗಲ್‌ ಮೀಟ್‌ ರೀತಿಯ ವಿಡಿಯೊ ಕಾನ್ಫರೆನ್ಸ್‌ ಆ್ಯಪ್‌ಗಳ ಮೂಲಕವೇ ನಡೆಯುತ್ತಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು