‘ಟ್ರಾವೆಲ್‌ಯಾರಿ ಆ್ಯಪ್‌’

ಗುರುವಾರ , ಏಪ್ರಿಲ್ 25, 2019
27 °C

‘ಟ್ರಾವೆಲ್‌ಯಾರಿ ಆ್ಯಪ್‌’

Published:
Updated:
Prajavani

ಆನ್‌ಲೈನ್ ಬಸ್ ಟಿಕೆಟ್ ಬುಕ್ಕಿಂಗ್ ಮಾಡಿಕೊಡುವ ‘ಟ್ರಾವೆಲ್ ಯಾರಿ’ ಸಂಸ್ಥೆ, ಇನ್ನಷ್ಟು ಪ್ರಯಾಣಿಕ ಸ್ನೇಹಿಯಾಗಿದೆ. ಸಂಸ್ಥೆಯು ತನ್ನ ವೆಬ್‌ಸೈಟ್ ಹಾಗೂ ಆ್ಯಪ್ ಅನ್ನು ಮೇಲ್ದರ್ಜೆಗೇರಿಸಿದೆ.

‘ಮಾಡಿಫೈ ಬುಕ್ಕಿಂಗ್’ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಇಮೇಲ್ ಹಾಗೂ ಮೊಬೈಲ್ ನಂಬರ್ ಮೂಲಕ ಟಿಕೆಟ್ ಡೆಲಿವರಿ ಮಾಹಿತಿಯನ್ನು ನೇರವಾಗಿ ಪ್ರಯಾಣಿಕರಿಗೆ ತಲುಪಿಸುವ ಸೌಲಭ್ಯವನ್ನು ಈ ತಂತ್ರಜ್ಞಾನ ಹೊಂದಿದೆ. ಅಲ್ಲದೆ ಪ್ರಯಾಣಿಕರ ಮಾಹಿತಿ (ಸೀಟ್, ಲಿಂಗ, ಪಿಲ್‌ಅಪ್ ಹಾಗೂ ಡ್ರಾಫ್‌ಆಫ್) ಬಗ್ಗೆಯೂ ಇಮೇಲ್ ಹಾಗೂ ಮೊಬೈಲ್ ನಂಬರ್ ಮೂಲಕ ಮಾಹಿತಿಯನ್ನು ಪ್ರಯಾಣಿಕರಿಗೆ ತಲುಪಿಸುತ್ತದೆ.

ಟಿಕೆಟ್ ಬುಕ್ ಆದ ಬಳಿಕವೂ ಬದಲಾವಣೆ ಬಯಸಿದ್ದಲ್ಲಿ, ಪ್ರಯಾಣಿಕರೇ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ ಬದಲಾವಣೆ ಮಾಡುವ ಸೌಲಭ್ಯವನ್ನು ಸಂಸ್ಥೆಯು ಕಲ್ಪಿಸಿದೆ.  ಪಿಎನ್‌ಆರ್ ಮಾಹಿತಿ ಅಪ್‌ಲೋ‌ಡ್ ಮಾಡಿದರೆ ಮಾತ್ರ ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಲು ಸಾಧ್ಯ.

ಪ್ರಯಾಣಿಕರು ‘ಟ್ರಾವೆಲ್ ಯಾರಿ’ ಖಾತೆಗೆ ಲಾಗಿನ್ ಆದ ಬಳಿಕ ‘ಮಾಡಿಫೈ’ ಆಪ್ಶನ್‌ನಲ್ಲಿರುವ ‘ಮ್ಯಾನೇಜ್ ಬುಕ್ಕಿಂಗ್’ ವಿಭಾಗಕ್ಕೆ ಭೇಟಿ ನೀಡಿ ಈ ಮೊದಲು ಬುಕ್ಕಿಂಗ್ ಮಾಡಿದ ಮಾಹಿತಿಯಲ್ಲಿ ಮತ್ತೆ ಬದಲಾವಣೆ ಮಾಡಬಹುದಾಗಿದೆ. ಪ್ರಯಾಣಿಕರು ಒಮ್ಮೆ ಮರು ಬದಲಾವಣೆಯನ್ನು ಯಶಸ್ವಿಯಾಗಿ ಮಾಡಿದ ಬಳಿಕ ಮಾಡಿಫೈಡ್ ಟಿಕೆಟ್ ಜನರೇಟ್ ಆಗುತ್ತದೆ. ಆ ಮಾಹಿತಿಯು ಇಮೇಲ್ ಹಾಗೂ ಮೊಬೈಲ್ ನಂಬರ್ ಮೂಲಕ ಪ್ರಯಾಣಿಕರಿಗೆ ತಲುಪುತ್ತದೆ.

ಹೋಳಿ ಹಬ್ಬಕ್ಕೆ `ಟ್ರಾವೆಲ್ಯಾರಿ’ ಕೊಡುಗೆ

ಹೋಳಿ ಹಬ್ಬದ ಸಲುವಾಗಿ ದೂರದ ಊರುಗಳಿಗೆ ಪ್ರಯಾಣಿಸುವವರು ತನ್ನ ಆ್ಯಪ್ ಮೂಲಕ ಬಸ್ ಟಿಕೆಟ್ ಕಾಯ್ದಿರಿಸಿದರೆ ಅಂತಹವರಿಗೆ ಗರಿಷ್ಠ ಶೇ 70ರಷ್ಟು ರಿಯಾಯಿತಿ, ಕ್ಯಾಶ್‍ಬ್ಯಾಕ್ ಮತ್ತಿತರ ರೂಪದ ಸೌಲಭ್ಯಗಳನ್ನು `ಟ್ರಾವೆಲ್ಯಾರಿ’ ಸಂಸ್ಥೆ ಘೋಷಿಸಿದೆ.

ಟ್ರಾವೆಲ್ಯಾರಿ ಸಂಸ್ಥೆಯ ಈ ರಿಯಾಯಿತಿ ಸೌಲಭ್ಯವು ವೆಬ್‍ಸೈಟ್‍ನಿಂದ ಮತ್ತು ಆ್ಯಪ್ ಹೋಳಿ ಮೂಲಕ ಟಿಕೆಟ್ ಕಾಯ್ದಿರಿಸುವಾಗ ವೆಬ್‍ಹೋಳಿ (WEBHOLI) ಎನ್ನುವ ಪ್ರೋಮೋಕೋಡ್ ಬಳಸಿದರೆ ಮಾತ್ರ ಸಿಗಲಿದೆ.

ಹೋಳಿ ಹಬ್ಬದ ಸಲುವಾಗಿ ಘೋಷಿಸಿರುವ ಈ ಆಕರ್ಷಕ ಸೌಲಭ್ಯಗಳು ಮಾರ್ಚ್ 20ರಿಂದ 25ರ ನಡುವೆ ಕೈಗೊಳ್ಳುವ ಪ್ರಯಾಣಗಳಿಗೆ ಮಾತ್ರ ಅನ್ವಯವಾಗಲಿದೆ. ಒಬ್ಬರಿಗೆ ಒಂದು ಬಾರಿ ಮಾತ್ರ ಇದು ಲಭ್ಯವಾಗಲಿದೆ ಎಂದು ಟ್ರಾವೆಲ್ಯಾರಿ ಸಂಸ್ಥೆ ಸ್ಪಷ್ಟಪಡಿಸಿದೆ.

ಟ್ರಾವೆಲ್ಯಾರಿ ಸಂಸ್ಥೆಯ ಆಯ್ದ ಬಸ್ಸುಗಳು ಮತ್ತು ಮಾರ್ಗಗಳಲ್ಲಿ ಈ ಅವಧಿಯಲ್ಲಿ ಸಂಚರಿಸುವವರಿಗೆ ಕೂಡಲೇ ಶೇಕಡ 7ರಿಂದ ಹಿಡಿದು ಶೇಕಡ 15ರವರೆಗೆ (ಗರಿಷ್ಠ 150 ರೂ.ಮಾತ್ರ) ತಕ್ಷಣವೇ ಕ್ಯಾಶ್‍ಬ್ಯಾಕ್ ಕೊಡಲಾಗುವುದು ಈ ಸೌಲಭ್ಯಗಳನ್ನು ಪಡೆಯಲು ಬಯಸುವವರು ಮಾರ್ಚ್ 20ರ ಒಳಗೆ ತಮ್ಮ ಪ್ರಯಾಣದ ಟಿಕೆಟ್‍ಗಳನ್ನು ಕಾಯ್ದಿರಿಸಬೇಕು ಎಂದು ಸಂಸ್ಥೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !