ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸೇವೆಗಳನ್ನು ನೀಡಲು ಟ್ರೂಕಾಲರ್-ಸಂಸದ ತೇಜಸ್ವಿ ಸೂರ್ಯ ಕಚೇರಿ ಸಹಯೋಗ

Last Updated 17 ಮಾರ್ಚ್ 2021, 6:39 IST
ಅಕ್ಷರ ಗಾತ್ರ

ಬೆಂಗಳೂರು: ಭಾರತದ ಅತ್ಯಂತ ವಿಶ್ವಾಸಾರ್ಹ ಮತ್ತು ನಿಖರ ಟೆಲಿಫೋನ್ ಸರ್ಚ್ ಎಂಜಿನ್ ಟ್ರೂಕಾಲರ್ , ಸಂಸದ ತೇಜಸ್ವಿ ಸೂರ್ಯ ಅವರ ಕಚೇರಿಯೊಂದಿಗೆ ಸರ್ಕಾರದ ಸೇವೆಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿರುವುದನ್ನು ಪ್ರಕಟಿಸಿದೆ.

ಇದು ಟ್ರೂಕಾಲರ್ ಸರ್ಚ್ ಎಂಜಿನ್ ವಿವಿಧ ಜಿಲ್ಲೆಗಳ ಇಲಾಖೆಗಳ ಸಂಪರ್ಕವನ್ನು ಒಗ್ಗೂಡಿಸುತ್ತದೆ. ಈ ಡೈರೆಕ್ಟರಿ ನಾಗರಿಕರಿಗೆ ಸರ್ಕಾರದ ಸಂಪರ್ಕಗಳಿಗೆ ಒಂದೇ ಕೋಶವಾಗಿ ಕೆಲಸ ಮಾಡುತ್ತದೆ. ಅಲ್ಲದೆ ಇದು ಸರ್ಕಾರದ ಮಾನ್ಯತೆಯೊಂದಿಗೆ ಬಂದಿದ್ದು ಅದರಲ್ಲಿ ನಾಗರಿಕರಿಗೆ ಮಾಹಿತಿಯ ಸುಲಭ ಲಭ್ಯತೆ ಇರುವುದಲ್ಲದೆ ಸರ್ಕಾರದ ಸೇವೆಗಳ ಟಚ್-ಪಾಯಿಂಟ್‍ಗಳೊಂದಿಗೆ ಸಂಪರ್ಕಿಸುತ್ತದೆ. ನಾಗರಿಕರಿಗೆ ವಿವಿಧ ಇಲಾಖೆಗಳೊಂದಿಗೆ ಅವರ ಅನುಭವ ಕುರಿತು ಫೀಡ್‍ಬ್ಯಾಕ್ ನೀಡಲು ಅವಕಾಶ ನೀಡುತ್ತದೆ.

ಈ ವಿಶೇಷತೆಯು ಕರ್ನಾಟಕದ ಬಳಕೆದಾರರಿಗೆ ಸದ್ಯದಲ್ಲೇ ಬಿಡುಗಡೆಯಾಗಲಿದೆ ಮತ್ತು ಈ ಸಹಯೋಗವನ್ನು ಇತರೆ ರಾಜ್ಯ ಸರ್ಕಾರಗಳೊಂದಿಗೆ ವಿಸ್ತರಿಸುವ ಭರವಸೆ ಹೊಂದಿದೆ.

ಈ ಸಹಯೋಗದ ಕುರಿತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ, 'ನಾವು ಜನರಿಗೆ ಹೆಚ್ಚು ಲಭ್ಯವಿರುವಂತಿರಬೇಕು ಆದ್ದರಿಂದ ಈ ಸಹಯೋಗದಲ್ಲಿ ನಾವು ದೊಡ್ಡ ಅವಕಾಶ ಕಂಡೆವು. ಟ್ರೂಕಾಲರ್ ಭಾರತದ ಅತ್ಯಂತ ಜನಪ್ರಿಯ ಟೆಲಿಫೋನ್ ಸರ್ಚ್ ಎಂಜಿನ್ ಆಗಿದ್ದು ಕೋಟ್ಯಂತರ ಮಂದಿ ಆನ್‍ಲೈನ್ ಬಳಕೆದಾರರಿದ್ದಾರೆ. ಅಲ್ಲದೆ ಜನರು ಸಾಮಾನ್ಯವಾಗಿ ಸರ್ಕಾರದ ವಿವಿಧ ಇಲಾಖೆಗಳನ್ನು ಕಂಡುಕೊಳ್ಳುವಲ್ಲಿ ಮತ್ತು ತಲುಪುವಲ್ಲಿ ಸಮಸ್ಯೆ ಎದುರಿಸುತ್ತಾರೆ. ಸರ್ಕಾರಿ ಸರ್ವೀಸಸ್ ಡೈರೆಕ್ಟರಿಯು ಟ್ರೂಕಾಲರ್ ಒಳಗಿನ ಸರ್ಚ್ ಎಂಜಿನ್ ಭಾಗವಾಗಿದ್ದು ಬೆಂಗಳೂರು ಹಾಗೂ ಕರ್ನಾಟಕದ ಜನರು ಯಾವುದೇ ಬಗೆಯ ನಾಗರಿಕ ಪ್ರಶ್ನೆ ಅಥವಾ ಸಮಸ್ಯೆ ಇರುವಾಗ ಸರಿಯಾದ ವ್ಯಕ್ತಿ ಮತ್ತು ಇಲಾಖೆಯನ್ನು ಕಂಡುಕೊಳ್ಳುವಲ್ಲಿ ಸಮಸ್ಯೆ ಎದುರಾಗುವುದಿಲ್ಲ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT