ಶುಕ್ರವಾರ, ಏಪ್ರಿಲ್ 10, 2020
19 °C

ವೀಸಾ ಸುಲಭಗೊಳಿಸಿದ ವಿಎಫ್‌ಎಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಆನ್‌ಲೈನ್‌ ಮತ್ತು ಡಿಜಿಟಲೀಕರಣದಿಂದಾಗಿ ಅಗತ್ಯ ಸೇವೆ, ಸೌಲಭ್ಯಗಳನ್ನು ತುರ್ತಾಗಿ, ಅತ್ಯಂತ ಸುಲಭವಾಗಿ ಪಡೆಯುವುದು ಸಾಧ್ಯವಾಗಿದೆ. ವೀಸಾಗೆ ಅರ್ಜಿ ಸಲ್ಲಿಸುವುದು ಈಗ ಅತಿ ಸುಲಭವಾದ ಕೆಲಸವಾಗಿದೆ.

ಪ್ರವಾಸ, ವಾಣಿಜ್ಯ ವಹಿವಾಟಿನ ಉದ್ದೇಶಗಳಿಗೆ ಬೇರೆ ದೇಶಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದು ವೀಸಾ ಬೇಡಿಕೆಯನ್ನೂ ದಿನೇ ದಿನೇ ಹೆಚ್ಚಿಸುತ್ತಿದೆ. ಡಿಜಿಟಲೀಕರಣದಿಂದ ವೀಸಾಗೆ ಅರ್ಜಿ ಸಲ್ಲಿಸಲು ನಗರಗಳಿಗೇ ಪ್ರಯಾಣಿಸುವುದು, ಅದಕ್ಕಾಗಿ ಕೆಲಸಕ್ಕೆ ರಜೆ ಹಾಕುವುದು ತಪ್ಪಿದೆ. ವಿಎಫ್‌ಎಸ್‌ ಗ್ಲೋಬಲ್‌ ಕಂಪನಿಯು ಗ್ರಾಹಕರಿಗೆ ಅತ್ಯಂತ ತ್ವರಿತವಾಗಿ ವೀಸಾ ಅರ್ಜಿಗಳನ್ನು ಸಲ್ಲಿಸಲು ಅನುಕೂಲವಾಗುವಂತಹ ಸೇವೆಗಳನ್ನು ಜಾರಿಗೊಳಿಸಿದೆ.


ಪ್ರಣವ್‌ ಸಿನ್ಹಾ

ವಿಎಫ್‌ಎಸ್‌ ಗ್ಲೋಬಲ್‌ (ವಿಸಾ ಫೆಸಿಲಿಟೇಷನ್ ಸರ್ವೀಸ್‌ ಗ್ಲೋಬಲ್) ಕಂಪನಿಯು ಭಾರತದಲ್ಲಿ ನೀಡುತ್ತಿರುವ ಸೇವೆಗಳ ಬಗ್ಗೆ ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಪ್ರಣವ್ ಸಿನ್ಹಾ ಮಾಹಿತಿ ನೀಡಿದ್ದಾರೆ.

‘ಕಂಪನಿಯು ವೀಸಾ ಅರ್ಜಿ ಸಲ್ಲಿಕೆ ಮತ್ತು ಬಯೊ ಮೆಟ್ರಿಕ್‌ ನೋಂದಣಿ ಕೆಲಸವನ್ನು ಮಾತ್ರವೇ ನಿರ್ವಹಿಸುತ್ತದೆ. ವೀಸಾಗಳ ಕುರಿತಾಗಿ ಯಾವುದೇ ರೀತಿಯ ಸಲಹೆ ಅಥವಾ ಮಾರ್ಗದರ್ಶನವನ್ನಾಗಲಿ ನೀಡುವುದಿಲ್ಲ. ವೀಸಾಕ್ಕೆ ಸಂಬಂಧಿಸಿದ ಗ್ರಾಹಕರ ಅಗತ್ಯಗಳನ್ನೂ ಪೂರೈಸುವುದಿಲ್ಲ’ ಎಂದು ತಿಳಿಸಿದ್ದಾರೆ.

ಪ್ರೀಮಿಯಂ ಲಾಂಜ್‌

ಮೊದಲ ಬಾರಿಗೆ ಪ್ರಯಾಣಿಸುವವರಿಗೆ ಮತ್ತು ಹಿರಿಯ ನಾಗರೀಕರಿಗೆ ಹೆಚ್ಚು ಉಪಯುಕ್ತ. ತರಬೇತಿ ಪಡೆದಿರುವ ಸಿಬ್ಬಂದಿಯು ವೀಸಾ ಅರ್ಜಿ ತುಂಬಲು ನೆರವಾಗಲಿದ್ದಾರೆ.

ಮನೆಬಾಗಿಲಿಗೆ ವೀಸಾ ಸೇವೆ

ಡೋರ್‌ಸ್ಟೆಪ್‌ ವೀಸಾ ಸೇವೆಯು ವೀಸಾ ಉದ್ಯಮದಲ್ಲಿಯೇ ಹೆಗ್ಗುರುತಾಗಿದೆ. ತರಬೇತಿ ಪಡೆದಿರುವ ತಂಡವು ಈ ಸೇವೆ ನೀಡುತ್ತದೆ. ವೀಸಾಗೆ ಅರ್ಜಿ ಸಲ್ಲಿಸುವವರು ಒಬ್ಬರೇ ಆಗಿರಲಿ ಅಥವಾ ಹಲವರಿದ್ದರೂ, ಅವರು ಆಯ್ಕೆ ಮಾಡುವ ಸ್ಥಳಕ್ಕೆ ಬಂದು ಬಯೊಮೆಟ್ರಿಕ್‌ ಮಾಹಿತಿಯೊಂದಿಗೆ ಅಗತ್ಯವಾದ ದಾಖಲೆ ಪತ್ರಗಳನ್ನು ಪಡೆಯಲಾಗುತ್ತದೆ. ಆಸ್ಟ್ರೇಲಿಯಾ, ಬೆಲ್ಜಿಯಂ, ಕ್ರೆಗ್‌ ರಿಪಬ್ಲಿಕ್‌, ಡೆನ್ಮಾರ್ಕ್‌, ಫಿನ್ಲೆಂಡ್‌, ಹಂಗೇರಿ, ಫ್ರಾನ್ಸ್‌, ಲಕ್ಸಂಬರ್ಗ್‌, ಮಾಲ್ಟಾ, ಪೋರ್ಚುಗಲ್‌, ಜರ್ಮನಿ, ಸ್ವಿಟ್ಜರ್ಲೆಂಡ್‌, ಬ್ರಿಟನ್‌ ಮತ್ತು ಇಟಲಿಗೆ ಈ ಸೇವೆ ಲಭ್ಯವಿದೆ.

ಪ್ರೈಮ್‌ ಟೈಮ್‌ ಸೇವೆ

ವಿದ್ಯಾರ್ಥಿಗಳು, ವೃತ್ತಿಪರರು ಹಾಗೂ ವೀಸಾ ಕೇಂದ್ರಕ್ಕೆ ಭೇಟಿ ನೀಡಲು ಸಾಧ್ಯವಾಗದೇ ಇರುವ ಯಾರಾದರೂ ಸರಿ, ಅಂತಹವರಿಗೆ ಪ್ರೈಮ್‌ ಟೈಮ್‌ ಸೇವೆ ಅನುಕೂಲಕರವಾಗಿದೆ. ಅಂದರೆ, ಅರ್ಜಿ ಸಲ್ಲಿಸುವುದಕ್ಕಾಗಿ ರಜೆ ಹಾಕದೆ, ತಮ್ಮ ಕೆಲಸದ ಅವಧಿಯಲ್ಲಿಯೇ ಈ ಸೇವೆಯಡಿ ಅರ್ಜಿ ಸಲ್ಲಿಸಬಹುದಾಗಿದೆ. ದಾಖಲೆಗಳ ದೃಢೀಕರಣ ಮಾಡಿಸಿಕೊಳ್ಳಲೂ ನೆರವಾಗುತ್ತದೆ.

ಇ–ವೀಸಾ ಆನ್‌ ಅರೈವಲ್‌

ಭಾರತ 15 ಲಕ್ಷಕ್ಕೂ ಅಧಿಕ ಜನರು ಪ್ರವಾಸಕ್ಕೆಂದು ಥಾಯ್ಲೆಂಡ್‌ಗೆ ಪ್ರತಿ ವರ್ಷವೂ ಪ್ರಯಾಣಿಸುತ್ತಾರೆ. ಇಂತಹವರಿಗೆ ಸಾಲಿನಲ್ಲಿ ನಿಂತು ಅಥವಾ ಅರ್ಜಿ ಸಲ್ಲಿಸಿ ಕಾಯುವ ರಗಳೆಯಿಂದ ತಪ್ಪಿಸಿಕೊಳ್ಳಲು ಇ–ವೀಸಾ ಆನ್‌ ಅರೈವಲ್‌ ಉಪಯುಕ್ತವಾಗಿದೆ. ಪ್ರಯಾಣ ಆರಂಭಿಸುವುದಕ್ಕೂ ಮೊದಲೇ ವಿಮಾನ ಟಿಕೆಟ್‌, ವಸತಿ ಮಾಹಿತಿ, ಹಣಕಾಸು ವಿವರಗಳು ಮತ್ತು ಪಾವತಿ ಬಗ್ಗೆ ಮಾಹಿತಿಗಳನ್ನು ನೀಡುವ ಅಗತ್ಯ ಇರುವುದಿಲ್ಲ. 

ಮುಂಚಿತವಾಗಿಯೇ ಸಲ್ಲಿಸಿ

ವೀಸಾ: ವಿಸಿಟರ್ಸ್‌ ಇಂಟರ್‌ನ್ಯಾಷನಲ್‌ ಸ್ಟೆ ಅಡ್ಮಿಷನ್‌ ಓರ್ವ ವ್ಯಕ್ತಿಗೆ ಒಂದು ನಿರ್ದಿಷ್ಟ ಸಮಯದವರೆಗೆ ಒಂದು ದೇಶವನ್ನು ಪ್ರವೇಶಿಸಲು ಮತ್ತು ಅಲ್ಲಿ ಉಳಿಯಲು ನೀಡುವ ಅನುಮತಿಯಾಗಿದೆ. ಪ್ರಯಾಣ ಮಾಡುವಾಗ ಮುಂಚಿತವಾಗಿಯೇ ವಿಮಾನ, ಹೊಟೇಲ್‌ ಬುಕ್‌ ಮಾಡುವಂತೆಯೇ ವೀಸಾ ಅರ್ಜಿಯನ್ನೂ ಮುಂಚಿತವಾಗಿಯೇ ಸಲ್ಲಿಸಬಹುದು. ಬಹುತೇಕ ದೇಶಗಳು ಪ್ರಯಾಣಿಸುವ ದಿನಾಂಕಕ್ಕಿಂತಲೂ 90 ದಿನ ಮುಂಚಿತವಾಗಿಯೇ ವೀಸಾ ಅರ್ಜಿ ಸ್ವೀಕರಿಸುತ್ತವೆ.

ವಿಯೆಟ್ನಾಂ ಇ–ವೀಸಾ

ವಿಯೆಟ್ನಾಂಗೆ ಪ್ರಯಾಣಿಸುವ ಭಾರತೀಯರಿಗಾಗಿ ಆನ್‌ಲೈನ್‌ ಜಾಲತಾಣ ವಿಯೆಟ್ನಾಂ ಇ–ವೀಸಾ ಸೌಲಭ್ಯ ಕಲ್ಪಿಸಲಾಗಿದೆ. 

ಇ–ವೀಸಾ ಆನ್‌ ಅರೈವಲ್‌ (ಇವಿಒಎ) ಅರ್ಜಿದಾರರಿಗೆ ಡಿಜಿಟಲ್ ವಾಲೆಟ್‌ / ಲಾಕರ್‌ ಆಯ್ಕೆ ಸಿಗಲಿದೆ. ಇದರಲ್ಲಿ ಪಾಸ್‌ಪೋರ್ಟ್‌, ಲೈವ್‌ ಫೇಷಿಯಲ್‌ ಬಯೊಮೆಟ್ರಿಕ್‌ ಮಾಹಿತಿ ಮತ್ತು ಇವಿಒಎಗೆ ಅನುಮತಿ ನೀಡಿರುವ ಪತ್ರದ ಕಾಪಿಗಳು ಇರಲಿವೆ. 

2018ರಲ್ಲಿ ಬೇರೆ ಬೇರೆ ದೇಶಗಳ 1.5 ಕೋಟಿ ಜನರು ವಿಯೆಟ್ನಾಂಗೆ ಭೇಟಿ ನೀಡಿದ್ದರು. 2019ರಲ್ಲಿ ಈ ಸಂಖ್ಯೆಯು 1.8 ಕೋಟಿಗೆ ಏರಿಕೆಯಾಗಿದೆ.

ಹೆಚ್ಚಿನ ಮಾಹಿತಿಗೆ: www.vfsglobal.com

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು