ಇನ್ಫೊಸಿಸ್– ಮೈಸೂರು ಕೇಂದ್ರದ ಮುಖ್ಯಸ್ಥರಾಗಿ ವಿನಾಯಕ ಹೆಗಡೆ

ಮೈಸೂರು: ಇನ್ಫೊಸಿಸ್– ಮೈಸೂರು ಅಭಿವೃದ್ಧಿ ಕೇಂದ್ರದ ಮುಖ್ಯಸ್ಥರಾಗಿ ವಿನಾಯಕ ಪಿ. ಹೆಗಡೆ ನೇಮಕವಾಗಿದ್ದಾರೆ.
ಕಂಪನಿಯಲ್ಲಿ ಉಪಾಧ್ಯಕ್ಷ ಹಾಗೂ ಐವಿಎಸ್ – ಐಎಚ್‌ಎಲ್‌ಸಿಪಿ ಘಟಕದ ಮುಖ್ಯಸ್ಥರಾಗಿರುವ ಅವರು, ಬುಧವಾರ ಸಾಜಿ ಮಾಥ್ಯೂ ಅವರಿಂದ ಅಧಿಕಾರ ಸ್ವೀಕರಿಸಿದರು.
ಕಂಪನಿಯ ವಿವಿಧ ಹುದ್ದೆಗಳಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಗ್ಗೊಣ ಗ್ರಾಮದವರಾದ ವಿನಾಯಕ, 10ನೇ ತರಗತಿವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದವರು.
ಕ್ಷೇತ್ರ ನೋಟ: ಅಂದು ದಾವಣಗೆರೆ ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿಯೇ ಇರಲಿಲ್ಲ!
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.