ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದಲ್ಲೂ ವೋಕಲ್‌ ಆ್ಯಪ್‌

Last Updated 10 ಮಾರ್ಚ್ 2019, 19:38 IST
ಅಕ್ಷರ ಗಾತ್ರ

ಈಗಾಗಲೇ ಹತ್ತು ಪ್ರಾದೇಶಿಕ ಭಾಷೆಗಳಲ್ಲಿ ಯಶಸ್ವಿಯಾಗಿದ್ದ ‘ವೋಕಲ್‌ ಆ್ಯಪ್‌’ ಈಗ ಕನ್ನಡಕ್ಕೂ ಬಂದಿದೆ.

ಬುಧವಾರ ನಗರದಲ್ಲಿ ವೋಕಲ್‌ ಕನ್ನಡ ಆ್ಯಪ್‌ ಬಿಡುಗಡೆಗೊಂಡಿತು.ಟ್ವಿಟರ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಂಗಿಂತ ಭಿನ್ನವಾದ ಅಭಿವ್ಯಕ್ತಿಯನ್ನು ಈ ಆ್ಯಪ್‌ ಹೊಂದಿದೆ.

ಬಹುತೇಕ ಸಾಮಾಜಿಕ ಜಾಲತಾಣಗಳು ಇಂಗ್ಲಿಷ್‌ನ ಹೇರಿಕೆಯನ್ನು ಹೊಂದಿವೆ. ಪ್ರಾದೇಶಿಕ ಭಾಷೆಗಳ ಸಂವಹನಕ್ಕೆ ಇವು ಅಡೆತಡೆಯಾಗಿವೆ. ನಮ್ಮದೇ ಭಾಷೆಯ ಸಂವಹನ ಹಾಗೂ ವಿಷಯ, ಜ್ಞಾನದ ಹಂಚಿಕೆಗೆ ಒಂದು ತಾಣ ಬೇಕು ಎನಿಸಿದ್ದೇ ಈ ಆ್ಯಪ್‌ ಉದಯಕ್ಕೆ ಕಾರಣವಾಯಿತು ಎನ್ನುತ್ತಾರೆ ವೋಕಲ್‌ ಸಂಸ್ಥೆಯ ಸಿಇಒ ಅಪ್ರಮೇಯ ರಾಧಾಕೃಷ್ಣ.

ಆ್ಯಪ್‌ ಬಳಕೆ ಸುಲಭವಾಗಿರಬೇಕು, ಯಾವುದೇ ಅಡೆತಡೆಯಿಲ್ಲದೆ ಸಂವಹನ ಸಾಧ್ಯವಾಗಬೇಕು ಎಂಬುದು ಅವರ ಮಾತು.

ವೋಕಲ್‌ ಆ್ಯಪ್‌ ಅನ್ನು ಬೇರೆ ಯಾವುದೇ ಆ್ಯಪ್‌ಗೆ ಹೋಲಿಕೆ ಮಾಡಲು ಸಾಧ್ಯವಿಲ್ಲ. ಇದು ಜ್ಞಾನದ ಜೊತೆಗೆ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆಯೂ ಆಗಿದೆ ಎನ್ನುತ್ತಾರೆ ಅವರು.

ಆ್ಯಪ್‌ ಕೆಲಸ: ಆ್ಯಪ್‌ನಲ್ಲಿ ನಮಗೆ ಅಗತ್ಯವಿರುವ ಯಾವುದೇ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಬಹುದು. ಇದಕ್ಕೆ ತಜ್ಞರು ಉತ್ತರಿಸಲಿದ್ದಾರೆ. ಅವರು ಕೊಟ್ಟ ಉತ್ತರಕ್ಕೆ ನಾವು ಕಾಮೆಂಟ್‌ ಕೂಡ ಮಾಡಬಹುದು. ವಿಡಿಯೋ ಅಥವಾ ಆಡಿಯೋ ರೂಪದಲ್ಲಿ ಉತ್ತರ ಸಿಗಲಿದೆ.

ಪ್ರಶ್ನೆ ಕೇಳುವವರು ಟೈಪ್‌ ಮಾಡಬಹುದು. ಅಥವಾ ಧ್ವನಿಯ ರೂಪದಲ್ಲಿಯಾದರೂ ಪ್ರಶ್ನೆ ಕೇಳಬಹುದು. ನಾವು ಕೇಳುವ ಪ್ರಶ್ನೆಗಳನ್ನು ಬೇರೆ ಯಾರಾದರೂ ಈ ಮೊದಲೇ ಕೇಳಿದ್ದರೆ, ಕೆಲವೇ ಸೆಕೆಂಡುಗಳಲ್ಲಿ ನಿಮಗೆ ಉತ್ತರ ಸಿಗಲಿದೆ. ಹೊಸ ಪ್ರಶ್ನೆಯಾಗಿದ್ದರೆ ಕೆಲವು ನಿಮಿಷ ಕಾಯಬೇಕಾಗುತ್ತದೆ.

ಆ್ಯಪ್‌ ಡೌನ್‌ಲೋಡ್‌ ಮಾಡುವುದು ಹೇಗೆ:ಗೂಗಲ್‌ ಪ್ಲೇ ಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್ ಮಾಡಿದಾಕ್ಷಣ ನಮ್ಮ ಮೊಬೈಲ್‌ ನಂಬರ್‌ನೊಂದಿಗೆ ನೋಂದಣಿ ಮಾಡಿಕೊಳ್ಳಬಹುದು. ನಂತರ ನಾವು ಬಳಸುವ ಭಾಷೆಯನ್ನು ಅದು ಮನದಟ್ಟು ಮಾಡಿಕೊಳ್ಳುತ್ತದೆ. ನಮ್ಮ ಇಷ್ಟದ ವಿಷಯಗಳನ್ನು ಆಯ್ಕೆ ಮಾಡಬೇಕು. ಬಳಿಕ ಆ್ಯಪ್‌ ತೆರೆದುಕೊಳ್ಳುತ್ತದೆ.

ಮುಖ್ಯ ಸ್ಕ್ರೀನ್‌ನಲ್ಲಿ ಬೇರೆ ಬೇರೆಯವರು ಕೇಳಿದ ಪ್ರಶ್ನೆಗಳನ್ನು ನೋಡಿ ನಾವು ಕಾಮೆಂಟ್‌ ಕೂಡ ಮಾಡಬಹುದು.

ಆಸಕ್ತಿಗೆ ತಕ್ಕ ಬಳಕೆ

ಆ್ಯಪ್‌ನಲ್ಲಿ ರಾಜಕೀಯ, ಜೀವನ, ಯುಪಿಎಸ್‌ಸಿ, ಹಣ, ಪ್ರೀತಿ, ಜ್ಞಾನಗಂಗಾ, ಸೌಂದರ್ಯ, ಮನರಂಜನೆ ಎಂಬ ಬೇರೆ ಬೇರೆ ವಿಭಾಗಗಳನ್ನು ಮಾಡಲಾಗಿದೆ. ಆಸಕ್ತಿ ಇರುವ ವಿಷಯಗಳ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT