ಮಂಗಳವಾರ, ಡಿಸೆಂಬರ್ 6, 2022
24 °C

ಆಧಾರ್ ಕಾರ್ಡ್ ಕಳೆದುಹೋದರೆ ಏನು ಮಾಡಬೇಕು?

ರಶ್ಮಿ ಕೆ Updated:

ಅಕ್ಷರ ಗಾತ್ರ : | |

ಆಧಾರ್ ಕಾರ್ಡ್ ಕಳೆದಿದೆಯೇ?

ಕೆಲವೊಂದು ವ್ಯವಹಾರ, ಸೌಲಭ್ಯಗಳನ್ನು ಪಡೆಯಲು ಗುರುತಿನ ಚೀಟಿ- ಆಧಾರ್ ಕಾರ್ಡ್ ಅತ್ಯಗತ್ಯ. ಒಂದು ವೇಳೆ ಆಧಾರ್ ಕಾರ್ಡ್ ಕಳೆದುಹೋದರೆ? ಆನ್‌ಲೈನ್ ಮೂಲಕ ಮನವಿ ಮಾಡಿ ಆಧಾರ್ ರಿಪ್ರಿಂಟ್ ಮಾಡಬಹುದು. ಈ ರೀತಿ  ಆಧಾರ್ ರಿಪ್ರಿಂಟ್ ಮಾಡುವುದಕ್ಕೆ (nominal amount) ₹50 ಪಾವತಿ ಮಾಡಬೇಕಾಗುತ್ತದೆ.

ಇದು ಬೇಕೇ ಬೇಕು

ಆಧಾರ್ ಪಡೆಯಲು  ನಿಮ್ಮ ಆಧಾರ್ ಸಂಖ್ಯೆ ಅಥವಾ Virtual Identification Number(VID) ಗೊತ್ತಿರಬೇಕು. ನಿಮ್ಮ ಫೋನ್ ಸಂಖ್ಯೆ ಆಧಾರ್ ಕಾರ್ಡ್ ಜತೆ ಲಿಂಕ್ ಆಗಿದ್ದರೆ ಮಾತ್ರ ನಿಮ್ಮ ಮೊಬೈಲ್‌ಗೆ OTP ಬರುತ್ತದೆ.

ಆಧಾರ್ ರಿಪ್ರಿಂಟ್ ಪಡೆಯಲು ಹೀಗೆ ಮಾಡಿ

ಬ್ರೌಸರ್‌ನಲ್ಲಿ https://uidai.gov.in/ ಲಿಂಕ್ ಓಪನ್ ಮಾಡಿದೆ.

ಅಲ್ಲಿ My Aadhaar ನ ಕೆಳಗಡೆ ORDER AADHAAR REPRINT ಆಯ್ಕೆ ಕ್ಲಿಕ್ ಮಾಡಿ,

ಹೊಸತೊಂದು ಟ್ಯಾಬ್ ಓಪನ್ ಆಗುತ್ತದೆ. ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಅದರ ಕೆಳಗೆ ಸೆಕ್ಯೂರಿಟಿ ಕೋಡ್ ನಮೂದಿಸಿ ರಿಕ್ವೆಸ್ಟ್ OTP ಕ್ಲಿಕ್ ಮಾಡಿ.

ನಿಮ್ಮ ಮೊಬೈಲ್ ಫೋನ್‌ಗೆ OTP ಬರುತ್ತದೆ. ಆ OTPಯನ್ನು Enter OTP ಎಂಬ ಸ್ಥಳದಲ್ಲಿ ನಮೂದಿಸಿ.

Preview ನೋಡಿಕೊಂಡು ನೀವು ನಮೂದಿಸಿದ ಎಲ್ಲ ಮಾಹಿತಿ ಸರಿ ಇದೆಯೇ ಎಂದು ಪರಿಶೀಲಿಸಿದ ನಂತರ Make payment ಆಯ್ಕೆ ಕ್ಲಿಕ್ ಮಾಡಿ.

ಇದೆಲ್ಲ ಮಾಡಿದ ಮೇಲೆ ಸ್ಕ್ರೀನ್‌ನಲ್ಲಿ confirmation message ಕಾಣಿಸಿಕೊಳ್ಳುತ್ತದೆ. SRN ಸಂಖ್ಯೆ ಸಂದೇಶ ನಿಮ್ಮ ಫೋನ್‌ಗೆ ಬಂದಿರುತ್ತದೆ.

ಒಂದು ವೇಳೆ ನಿಮ್ಮ ಫೋನ್ ಸಂಖ್ಯೆ ನೋಂದಣಿ ಆಗದೇ ಇದ್ದರೆ If you do not register your mobile number' ಎಂಬ ಆಯ್ಕೆ ಕ್ಲಿಕ್ ಮಾಡಿ OTP ಗಾಗಿ ಮೊಬೈಲ್ ಸಂಖ್ಯೆ ನಮೂದಿಸಿದರೆ ಸಾಕು.

ಹೀಗೆ  ಆಧಾರ್ ಪಡೆಯಲು ಮನವಿ ಮಾಡಿದ ಐದು ದಿನಗಳೊಳಗೆ ಸ್ಪೀಡ್ ಪೋಸ್ಟ್ ಮೂಲಕ ಅದು ನಿಮ್ಮ ಕೈ ಸೇರುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು