ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟ್ಸ್‌ಆ್ಯಪ್‌ ಗ್ರೂಪ್ ಹೊಸ ಅಪ್‌ಡೇಟ್‌

Last Updated 4 ಜುಲೈ 2018, 20:28 IST
ಅಕ್ಷರ ಗಾತ್ರ

ವಾಟ್ಸ್ಆ್ಯಪ್‌ನಲ್ಲಿ ಗ್ರೂಪ್ ಕ್ರಿಯೇಟ್‌ ಮಾಡಿದರೆ ಸಾಕು ಮೊದಲೆರಡು ದಿನ ಗ್ರೂಪ್‌ನ ಸದಸ್ಯರು ಎಲ್ಲದಕ್ಕೂ ಪ್ರತಿಕ್ರಿಯಿಸಿ ಸಕ್ರಿಯರಾಗಿರುತ್ತಾರೆ. ದಿನಗಳುರುಳುತ್ತಿದ್ದಂತೆ ಆ ಗ್ರೂಪ್‌ಗಳು ಫಾರ್ವರ್ಡ್ ಮೆಸೇಜ್‌ಗಳಿಂದ ತುಂಬುತ್ತವೆ. ಕೆಲವೊಮ್ಮೆ ಪ್ರಧಾನ ವಿಷಯಗಳನ್ನು ಹಂಚಿಕೊಂಡರೂ ಫಾರ್ವರ್ಡ್ ಸಂದೇಶಗಳ ನಡುವೆ ಇದು ಗಮನಕ್ಕೆ ಬರುವುದಿಲ್ಲ. ಗ್ರೂಪ್ ಆರಂಭದಲ್ಲಿ ಸಕ್ರಿಯರಾಗಿದ್ದ ಸದಸ್ಯರು ಅತ್ತ ಗ್ರೂಪ್ ಬಿಟ್ಟು ಹೋಗಲಾರದೆ, ಇತ್ತ ಇರಲೂ ಆಗದೆ ಮ್ಯೂಟ್ ಮಾಡಿಕೊಂಡು ಸುಮ್ಮನಾಗುತ್ತಾರೆ, ಅದರಲ್ಲಿಯೂ ಕೆಲವೊಂದು ಸದಸ್ಯರನ್ನು ನಿಯಂತ್ರಿಸುವುದು ಗ್ರೂಪ್ ಅಡ್ಮಿನ್‌ಗಳಿಗೆ ತಲೆನೋವಾಗಿ ಬಿಡುತ್ತದೆ. ಇದೀಗ ವಾಟ್ಸ್‌ಆ್ಯಪ್‌ನಲ್ಲಿ ಹೊಸ ಫೀಚರ್‌ಗಳು ಲಭ್ಯವಿದ್ದು, ಇವು ಗ್ರೂಪ್ ಅಡ್ಮಿನ್‌ಗಳಿಗೆ ಸಹಾಯವಾಗುವಂತವುಗಳಾಗಿವೆ.

ಗ್ರೂಪ್‌ನಲ್ಲಿ ಅಡ್ಮಿನ್‌ಗಳಿಗೆ ಹೆಚ್ಚಿನ ಅಧಿಕಾರ

ಗ್ರೂಪ್‌ನ ಕಾರ್ಯಗಳನ್ನು ನಿಯಂತ್ರಿಸಲು ಈಗ ಅಡ್ಮಿನ್‌ಗಳಿಗೆ ಹೆಚ್ಚಿನ ಅಧಿಕಾರವಿದೆ. ನೀವು ವಾಟ್ಸ್‌ಆ್ಯಪ್‌ ಗ್ರೂಪ್‌ನ ಅಡ್ಮಿನ್ ಆಗಿದ್ದರೆ ಗ್ರೂಪ್ ತೆರೆದು ಬಲ ಭಾಗದಲ್ಲಿ ಕಾಣುವ ಸೆಟ್ಟಿಂಗ್ಸ್‌ನಲ್ಲಿ Group Info ಕ್ಲಿಕ್ ಮಾಡಿ. ಅಲ್ಲಿ ಗ್ರೂಪ್ ಸೆಟ್ಟಿಂಗ್ಸ್ ಎಂಬ ಆಪ್ಶನ್ ಕ್ಲಿಕ್ ಮಾಡಿದರೆ Edit Group Info ಎಂದು ಕಾಣುತ್ತದೆ. ಇಲ್ಲಿ All participants ಮತ್ತು Only admins ಎಂಬ ಆಯ್ಕೆ ಇರುತ್ತದೆ, ಇಲ್ಲಿ Only Admins ಎಂದು ಆಯ್ಕೆ ಮಾಡಿದರೆ ಆ ಗ್ರೂಪ್‌ನ ವಿಷಯ, ವಿವರ ಅಥವಾ ಐಕಾನ್‌ಗಳನ್ನು ಬದಲಿಸಲು ಗ್ರೂಪ್ ಅಡ್ಮಿನ್‌ಗೆ ಮಾತ್ರ ಸಾಧ್ಯವಾಗುತ್ತದೆ. ಗ್ರೂಪ್ ಸದಸ್ಯರಿಗೆ ಇಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು ಅವಕಾಶವಿರುವುದಿಲ್ಲ.

ಅದೇ ರೀತಿ ಗ್ರೂಪ್‌ನಲ್ಲಿ ಸಂದೇಶ ಕಳಿಸುವುದನ್ನೂ ಅಡ್ಮಿನ್‌ಗಳು ನಿಯಂತ್ರಿಸಬಹುದು, ಗ್ರೂಪ್ ಸೆಟ್ಟಿಂಗ್ಸ್‌ನಲ್ಲಿ Edit Group Info ಕೆಳಗೆ Send messages ಎಂದಿರುತ್ತದೆ, ಇಲ್ಲಿಯೂ All Participants ಮತ್ತು Only admins ಎಂಬ ಆಯ್ಕೆಗಳಿರುತ್ತವೆ. ಅಡ್ಮಿನ್‌ಗಳು ಮಾತ್ರ ಗ್ರೂಪ್‌ನಲ್ಲಿ ಸಂದೇಶ ಕಳಿಸಲು ಸಾಧ್ಯವಾಗುವಂತೆ ಮಾಡಲು Only Admins ಆಯ್ಕೆ ಕ್ಲಿಕ್ ಮಾಡಿದರೆ ಸಾಕು. ಬೇರೆ ಯಾವ ಸದಸ್ಯರಿಗೂ ಇಲ್ಲಿ ಸಂದೇಶ ಕಳಿಸಲು ಸಾಧ್ಯವಾಗುವುದಿಲ್ಲ. ಆದಾಗ್ಯೂ, ಅಡ್ಮಿನ್‌ಗಳು ಗ್ರೂಪ್ ಸೆಟ್ಟಿಂಗ್ಸ್‌ನಲ್ಲಿ ಮಾಡಿದ ಬದಲಾವಣೆಗಳ ನೋಟಿಫಿಕೇಶನ್ ಗ್ರೂಪ್‌ನಲ್ಲಿ ಕಾಣುತ್ತದೆ.

ಕಚೇರಿ ಮೀಟಿಂಗ್ ಅಥವಾ ಇನ್ಯಾವುದೇ ಪ್ರಧಾನ ವಿಷಯಗಳ ಬಗ್ಗೆ ಅಡ್ಮಿನ್ ಸಂದೇಶ ಕಳುಹಿಸಿದ್ದರೆ ಆ ಸಂದೇಶಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಗುವಂತೆ ಮಾಡಲು Only Admins ಆಯ್ಕೆ ಮಾಡಿ ಸಂದೇಶಗಳನ್ನು ಕಳುಹಿಸಿದರೆ ಸಾಕು. ಹೀಗೆ ಮಾಡಿದರೆ ಬೇರೆ ಸಂದೇಶಗಳ ನಡುವೆ ಅಡ್ಮಿನ್ ಕಳುಹಿಸಿದ ಸಂದೇಶಗಳು ಕಳೆದುಹೋಗುವುದಿಲ್ಲ. ಈ ಮೂಲಕ ಪ್ರಧಾನ ವಿಷಯಗಳನ್ನು ಗ್ರೂಪ್ ಮೂಲಕ ದಾಟಿಸುವುದು ಅಡ್ಮಿನ್‌ಗಳಿಗೆ ಸುಲಭ ಸಾಧ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT