ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಮೊದಲ ‘ಎಸಿ ಸೇಫ್ಟಿ ಹೆಲ್ಮೆಟ್‘ ಬಿಡುಗಡೆ

Last Updated 11 ನವೆಂಬರ್ 2021, 6:25 IST
ಅಕ್ಷರ ಗಾತ್ರ

ಮುಂಬೈ: ತೆಲಂಗಾಣ ಮೂಲದ ಟೆಕ್ ಕಂಪನಿ ‘ಜೆರ್ಶ್‌ ಸೇಫ್ಟಿ‘ ವಿನ್ಯಾಸಗೊಳಿಸಿರುವ ವಿಶ್ವದ ಮೊದಲ ‘ಎಸಿ ಸೇಫ್ಟಿ ಹೆಲ್ಮೆಟ್‘ ಬಿಡುಗಡೆಯಾಗಿದೆ.

ಈ ಎಸಿ ಹೆಲ್ಮೆಟ್‌ಗಳು ಹೊರಾಂಗಣ ಕಾರ್ಯಪಡೆ(ಉದಾ.ಕಟ್ಟಡ ಕಾರ್ಮಿಕರು) ಮತ್ತು ಕ್ಷೇತ್ರ ಕಾರ್ಯನಿರ್ವಾಹಕರಿಗೆ ಮೀಸಲಾಗಿದೆ ಎಂದು ಕಂಪನಿಯು ತಿಳಿಸಿದೆ.

'ದುಬೈ ಎಕ್ಸ್‌ಪೊ 2020' ಇಂಡಿಯಾ ಪೆವಿಲಿಯನ್‌ನಲ್ಲಿ ಎಸಿ ಸೇಫ್ಟಿ ಹೆಲ್ಮೆಟ್‌ ಅನ್ನು ಬಿಡುಗಡೆ ಮಾಡಲಾಗಿದೆ.

ದುಬೈ ಮೂಲದ ಎನ್‌ಐಎ ಲಿಮಿಟೆಡ್‌ನಿಂದ ಹೆಲ್ಮೆಟ್ ಅನ್ನು ಯುಎಇ ಮಾರುಕಟ್ಟೆಯಲ್ಲಿ ವಿತರಿಸಲಾಗುವುದು ಎಂದು ಕಂಪನಿಯು ಹೇಳಿದೆ.

‘ಜಾರ್ಶ್-ಎನ್‌ಐಎ ಎಸಿ ಸೇಫ್ಟಿ ಹೆಲ್ಮೆಟ್‌ಗಳು ಹೊರಾಂಗಣ ಕಾರ್ಯಪಡೆಗೆ ಅತ್ಯವಶ್ಯವಾಗಿದೆ. ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಈ ಹೆಲ್ಮೆಟ್‌ಗಳು ಹೆಚ್ಚು ಸಹಾಯಕ್ಕೆ ಬರಲಿವೆ‘ ಎಂದು ಜಾರ್ಶ್ ಸೇಫ್ಟಿಯ ಸಿಇಒ ಕೌಸ್ತಬ್ ಕೌಂಡಿನ್ಯ ತಿಳಿಸಿದ್ದಾರೆ.

‘ವರ್ಲ್ಡ್ ಎಕ್ಸ್‌ಪೋ 2020‘ರ ಇಂಡಿಯನ್ ಪೆವಿಲಿಯನ್‌ನ ‘ಇಂಡಿಯಾ ಇನೋವೇಷನ್‌ ಹಬ್‘ ಉಪಕ್ರಮದ ಭಾಗವಾಗಿ ಈ ಉತ್ಪನ್ನವನ್ನು ಬಿಡುಗಡೆ ಮಾಡಲಾಗಿದೆ.

ಈ ಯೋಜನೆಯು ದುಬೈನಲ್ಲಿರುವ ಭಾರತದ ಕಾನ್ಸುಲ್ ಜನರಲ್ ಡಾ.ಅಮನ್ ಪುರಿ ಅವರ ಮಾರ್ಗದರ್ಶನ ಹಾಗೂ ಭಾರತ ಮೂಲದ ಪ್ರಮುಖ ಹೂಡಿಕೆದಾರರ ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತಿದೆ.

24 ಡಿಗ್ರಿ ಸೆಲ್ಸಿಯಸ್‌ವರೆಗೆ ತಂಪಾಗಿಸುವಿಕೆಯನ್ನು ಒದಗಿಸಲು ಪೇಟೆಂಟ್ ಪಡೆದ ಘನ-ಸ್ಥಿತಿಯ ಕೂಲಿಂಗ್ ತಂತ್ರಜ್ಞಾನದಲ್ಲಿ ಜಾರ್ಶ್‌–ಎನ್‌ಐಎ ಹೆಲ್ಮೆಟ್ ಕಾರ್ಯನಿರ್ವಹಿಸುತ್ತದೆ.

ಹಿರಿಯ ಕಾರ್ಯನಿರ್ವಾಹಕರಿಗಾಗಿ ತಯಾರಿಸಲಾಗಿರುವ ಪ್ರಿಮಿಯಂ ಹೆಲ್ಮಟ್‌ ಮಾದರಿಯು ಎರಡು ಗಂಟೆಗಳ ಬ್ಯಾಟರಿ ಬ್ಯಾಕ್‌ ಅಪ್‌ ಹೊಂದಿದೆ. ನುರಿತ ಉದ್ಯೋಗಿಗಾಗಿ ತಯಾರಿಸಲಾಗಿರುವ ಹೆವಿ-ಡ್ಯೂಟಿ ಮಾದರಿಯಲ್ಲಿ 10 ಗಂಟೆಗಳ ಬ್ಯಾಟರಿ ಬ್ಯಾಕ್‌ ಇದೆ. ಹೆಲ್ಮೆಟ್‌ನಲ್ಲಿರುವ ನಾಲ್ಕು ರಂದ್ರಗಳ ಮೂಲಕ ಏಕರೂಪದ ಕೂಲಿಂಗ್ ಅನುಭವವನ್ನು ಪಡೆಯಬಹುದಾಗಿದೆ. ಇದು ಬಳಕೆದಾರರಿಗೆ ಬೆವರು ಮುಕ್ತ ಮತ್ತು ಆರಾಮದಾಯಕ ವಾತಾವರಣವನ್ನು ಒದಗಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT