ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಮೊಬೈಲ್‌, ಪಿಸಿಗೆ ಡಬ್ಲ್ಯುಪಿಎಸ್‌ ಆಫಿಸ್‌

Published:
Updated:

ಚೀನಾದ ಕಿಂಗ್‌ಸ್ಟಾಫ್ಟ್‌ ಆಫಿಸ್ ಕಂಪನಿಯು ಭಾರತದ ಮಾರುಕಟ್ಟೆಗೆ ಡಬ್ಲ್ಯುಪಿಎಸ್‌ ಆಫಿಸ್‌ 2020ರ ಆವೃತ್ತಿ ಪರಿಚಯಿಸಿದೆ. ಮೊಬೈಲ್‌, ಡೆಸ್ಕ್‌ಟಾಪ್‌ ಎಲ್ಲದರಲ್ಲಿಯೂ ಇದನ್ನು ಬಳಸಬಹುದಾಗಿದೆ. ಸದ್ಯ ನಾವು ಮೊಬೈಲ್‌ನಲ್ಲಿ ಬಳಸುತ್ತಿರುವ OfficeSuite ರೀತಿಯಲ್ಲಿಯೇ ವರ್ಡ್‌, ಸ್ಪ್ರೆಡ್‌ಶೀಟ್‌, ಪ್ರೆಸೆಂಟೇಷನ್‌, ಪಿಡಿಎಫ್‌ ಆಯ್ಕೆಗಳು ಇದರಲ್ಲಿಯೂ ಇವೆ. ಉಚಿತವಾಗಿ ಬಳಕೆ ಮಾಡಬಹುದಾಗಿದೆ.

ಶಿಯೋಮಿ, ಒಪ್ಪೊ ಮತ್ತು ವಿವೊ ಹ್ಯಾಂಡ್‌ಸೆಟ್‌ಗಳಲ್ಲಿ ಇದನ್ನು ಪ್ರಿ ಇನ್‌ಸ್ಟಾಲ್‌ ಮಾಡುವ ಮೂಲಕ ಗ್ರಾಹಕರನ್ನು ತಲುಪಲಾಗುವುದು ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಡ್ಯಾನಿ ಚೆನ್‌ ಹೇಳಿದ್ದಾರೆ.

ವಿಶ್ವವಿದ್ಯಾಲಯಗಳು, ಯುವ ವೃತ್ತಿಪರರು, ಹವ್ಯಾಸಿ ಬರಹಗಾರರು, ನವೋದ್ಯಮಗಳು ಮತ್ತು ಸಣ್ಣ ಉದ್ದಿಮೆಗಳನ್ನು ತಲುಪುವ ಯೋಜನೆ ಹೊಂದಿದ್ದೇವೆ. ಈಗಾಗಲೇ ಜಾಗತಿಕ ಮಟ್ಟದಲ್ಲಿ ತಿಂಗಳಿಗೆ 31 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಉಚಿತ ಮತ್ತು ಪಾವತಿ ಸೇವೆಗಳನ್ನು ನೀಡುತ್ತಿದೆ. ವಿಂಡೋಸ್‌, ಆ್ಯಂಡ್ರಾಯ್ಡ್‌ ಮತ್ತು ಒಎಸ್‌ ಮತ್ತು ಮ್ಯಾಕ್‌ನಲ್ಲಿಯೂ ಇದು ಕೆಲಸ ಮಾಡಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಮೈಕ್ರೊಸಾಫ್ಟ್‌ನ ಆಫಿಸ್‌ 365 ಮತ್ತು ಉಚಿತವಾಗಿ ಲಭ್ಯವಿರುವ ಇನ್ನಿತರ ಆ್ಯಪ್‌ಗಳಿಗೆ ಪೈಪೋಟಿ ನೀಡಬಲ್ಲದು.

Post Comments (+)