ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಗಲ್ ಪ್ಲೇಸ್ಟೋರ್‌ನಿಂದ 'ಮಿತ್ರೊನ್' ನಾಪತ್ತೆ

ಅಕ್ಷರ ಗಾತ್ರ

ಟಿಕ್‌ಟಾಕ್‌ಗೆ ಭಾರತೀಯರ ಉತ್ತರ ಎಂದು ಬಿಂಬಿಸಿದ್ದ ಮಿತ್ರೊನ್ (Mitron) ಆಪ್ ಮಂಗಳವಾರ ಗೂಗಲ್ ಪ್ಲೇಸ್ಟೋರ್‌ನಿಂದ ನಾಪತ್ತೆಯಾಗಿದೆ. ಈವರೆಗೆ ಸುಮಾರು 50 ಲಕ್ಷ ಮಂದಿ ಮಿತ್ರೊನ್ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ಗೂಗಲ್‌ ಪ್ಲೇಸ್ಟೋರ್‌ನಿಂದ ಆಪ್ ನಾಪತ್ತೆಯಾಗಿರುವ ಕುರಿತು ಈವರೆಗೆ ಗೂಗಲ್ ಆಗಲಿ, ಮಿತ್ರೊನ್ ಸಂಸ್ಥೆಯಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ.

ಭದ್ರತಾ ಕಾರಣಗಳಿಂದಾಗಿಯೇ ಗೂಗಲ್ ಈ ಆಪ್‌ ಅನ್ನು ಪ್ಲೇಸ್ಟೋರ್‌ನಿಂದ ತೆಗೆದು ಹಾಕಿರಬಹುದು ಎಂಬ ಮಾತುಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ತಂತ್ರಜ್ಞಾನದ ಬೆಳವಣಿಗೆಗಳನ್ನು ವರದಿ ಮಾಡುವ ಕೆಲ ವೆಬ್‌ಸೈಟ್‌ಗಳಲ್ಲಿಯೂ ಇಂಥದ್ದೇ ವಿಶ್ಲೇಷಣೆಗಳು ಪ್ರಕಟವಾಗಿವೆ. ಮಿತ್ರೊನ್ ಆಪ್‌ನಲ್ಲಿರುವ ಭದ್ರತಾ ವೈಫಲ್ಯ ಕುರಿತು ಹಲವು ಪತ್ರಿಕೆಗಳು ವರದಿ ಮಾಡಿದ್ದವು.

ಗೂಗಲ್ ಪ್ಲೇಸ್ಟೋರ್‌ನಿಂದ ಆಪ್ ರಿಮೂವ್ ಆಗಿದ್ದರೂ, ಈಗಾಗಲೇ ಡೌನ್‌ಲೋಡ್ ಮಾಡಿ, ಇನ್‌ಸ್ಟಾಲ್ ಮಾಡಿಕೊಂಡಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಮಿತ್ರೊನ್ ಆಪ್ ಉಳಿದುಕೊಂಡಿರುತ್ತದೆ. ಇಂಥವರು ತಕ್ಷಣ ಆಪ್ ರಿಮೂವ್ ಮಾಡುವುದು ಒಳಿತು ಎಂದು 'ಇಂಡಿಯನ್ ಎಕ್ಸ್‌ಪ್ರೆಸ್‌' ವರದಿ ಮಾಡಿದೆ.

ಐಐಟಿ ರೂರ್ಕಿಯ ವಿದ್ಯಾರ್ಥಿ ಶಿಬಾಂಕ್ ಅಗರ್‌ವಾಲ್ ಈ ಆಪ್‌ನ ಮಾಲೀಕ. ಪಾಕಿಸ್ತಾನದ ಕೋಡಿಂಗ್ ಕಂಪನಿ ಕೊಬೊಕಸ್ ಅಭಿವೃದ್ಧಿಪಡಿಸಿದ್ದ ಟಿಕ್‌ಟಿಕ್‌ನ ಸೋರ್ಸ್‌ ಕೋಡ್‌ ಖರೀಸಿಸಿದ್ದ ಶಿಬಾಂಕ್ ಅದನ್ನು ಮಿತ್ರೊನ್ ಎಂಬ ಹೊಸ ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆ ಮಾಡಿದ್ದರು. ಆಪ್ ಬಿಡುಗಡೆ ಮಾಡುವ ಮೊದಲು ಕೋಡ್‌ಗಳನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವ ಕನಿಷ್ಠ ಜವಾಬ್ದಾರಿಯನ್ನೂ ಶಿಬಾಂಕ್ ಮತ್ತು ಅವರ ತಂಡ ನಿರ್ವಹಿಸಿರಲಿಲ್ಲ. ಪ್ರೈವೆಸಿ ಪಾಲಿಸಿ ಅಭಿವೃದ್ಧಿಪಡಿಸಲಿಲ್ಲ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT