ಮಂಗಳವಾರ, ಅಕ್ಟೋಬರ್ 20, 2020
23 °C

ಡಿಸೆಂಬರ್ 15ರಿಂದ ಕಾರ್ಯಾಚರಿಸಲ್ಲ ಯಾಹೂ ಗ್ರೂಪ್ಸ್: ಕಾರಣವೇನು?

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

Yahoo

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ಬಳಕೆದಾರರ ಸಂಖ್ಯೆ ನಿರಂತರವಾಗಿ ಕುಸಿದಿರುವ ಕಾರಣ ಡಿಸೆಂಬರ್‌ 15ರದಿಂದ ಕಾರ್ಯಾಚರಣೆ ಸ್ಥಗಿತಗೊಳಿಸಲು ಯಾಹೂ ಗ್ರೂಪ್ಸ್‌ ನಿರ್ಧರಿಸಿದೆ. ಈ ಕುರಿತು 2017ರಲ್ಲಿ ಯಾಹೂವನ್ನು ಖರೀದಿಸಿದ್ದ ಅಮೆರಿಕದ ಬಹುರಾಷ್ಟ್ರೀಯ ದೂರಸಂಪರ್ಕ ಕಂಪನಿ ವೆರಿಜಾನ್ ಮಂಗಳವಾರ ಸಂದೇಶ ಪ್ರಕಟಿಸಿದೆ.

‘ಕಳೆದ ಕೆಲವು ವರ್ಷಗಳಿಂದ ಯಾಹೂ ಗ್ರೂಪ್ಸ್‌ ಬಳಕೆದಾರರ ಸಂಖ್ಯೆ ನಿರಂತರವಾಗಿ ಇಳಿಕೆಯಾಗಿದೆ. ಇದೇ ಅವಧಿಯಲ್ಲಿ ಗ್ರಾಹಕರು ನಮ್ಮ ಗ್ರೂಪ್‌ನ ಸೈಟ್‌ಗಳಲ್ಲಿ ವಿಶ್ವಾಸಾರ್ಹ ವಿಷಯಗಳನ್ನು ಹುಡುವ ಅವಧಿ ಹೆಚ್ಚಾಗಿದ್ದನ್ನೂ ಕಂಡುಕೊಂಡಿದ್ದೇವೆ’ ಎಂದು ಕಂಪನಿ ತಿಳಿಸಿದೆ.

‘ಈ ನಿರ್ಧಾರ ಸುಲಭವಾದುದಾಗಿರಲಿಲ್ಲ. ದೀರ್ಘಕಾಲದ ಉದ್ಯಮ ಕಾರ್ಯತಂತ್ರಕ್ಕೆ ಹೊಂದಿಕೆಯಾಗದ ಉತ್ಪನ್ನಗಳ ಬಗ್ಗೆ ನಾವು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಉದ್ಯಮದ ಇತರ ಕ್ಷೇತ್ರಗಳತ್ತ ನಾವು ಗಮನಹರಿಸಬೇಕಿದೆ’ ಎಂದೂ ಕಂಪನಿ ಹೇಳಿದೆ.

ಯಾಹೂ ಗ್ರೂಪ್ಸ್ ಸೇವೆ 2001ರಲ್ಲಿ ಆರಂಭಗೊಂಡಿತ್ತು.

ಡಿಸೆಂಬರ್ 15ರ ಬಳಿಕ ಯಾಹೂ ಗ್ರೂ‍ಪ್ಸ್ ಇಮೇಲ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲೂ ಸಾಧ್ಯವಾಗದು ಎಂದು ಕಂಪನಿ ಹೇಳಿದೆ.

‘ವೆಬ್‌ಸೈಟ್ ಪ್ರವೇಶದ ಆಯ್ಕೆಯೂ ಇನ್ನು ಮುಂದೆ ಲಭ್ಯವಾಗಲಾರದು. ನೀವು ಈಗಾಗಲೇ ಸ್ವೀಕರಿಸಿದ ಮತ್ತು ಕಳುಹಿಸಿದ ಮೇಲ್‌ಗಳು ಹಾಗೆಯೇ ಇರಲಿವೆ. ಡಿಸೆಂಬರ್ 15ರ ನಂತರ ಮೇಲ್ ಕಳುಹಿಸುವುದು ಮತ್ತು ಸ್ವೀಕರಿಸುವುದು ಸಾಧ್ಯವಾಗದು’ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು