ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಟ್ಯೂಬ್‌ ಪ್ರಸಾರದಲ್ಲಿ ವ್ಯತ್ಯಯ; ಟ್ವಿಟರ್‌ನಲ್ಲಿ ಬಳಕೆದಾರರ ಆಕ್ರೋಶ

Last Updated 17 ಅಕ್ಟೋಬರ್ 2018, 3:33 IST
ಅಕ್ಷರ ಗಾತ್ರ

ಜಗತ್ತಿನಾದ್ಯಂತ ಅತಿ ಹೆಚ್ಚು ವೀಕ್ಷಕರನ್ನು ಸೆಳೆದುಕೊಂಡಿರುವ ಯುಟ್ಯೂಬ್ ತನ್ನ ಸಂಗ್ರಹದಲ್ಲಿನ ವಿಡಿಯೊ ಪ್ರಸಾರದಲ್ಲಿ ವ್ಯತ್ಯಯ ಕಾಣಿಸಿಕೊಂಡಿದೆ. ಪದೇ ಪದೇ ವಿಡಿಯೊ ಪ್ರಸಾರದಲ್ಲಿ ಅಡಚಣೆ ಉಂಟಾಗುತ್ತಿದ್ದು, ಬಳಕೆದಾರರು ಟ್ವಿಟರ್‌ನಲ್ಲಿ ಯುಟ್ಯೂಬ್‌ಡೌನ್‌ ಹ್ಯಾಷ್‌ಟ್ಯಾಗ್‌ನೊಂದಿಗೆ ಅಸಮಾಧಾನ ಹೊರಹಾಕಿದ್ದಾರೆ.

ಎದುರಾಗಿರುವ ಸಮಸ್ಯೆ ಕುರಿತು ಬಳಕೆದಾರರು ಯುಟ್ಯೂಬ್‌ ಗಮನ ಸೆಳೆಯುತ್ತಿದ್ದಂತೆ ’ಯುಟ್ಯೂಬ್‌ ಟಿವಿ ಮತ್ತು ಯುಟ್ಯೂಬ್‌ ಮ್ಯೂಸಿಕ್‌ನಲ್ಲಿ ಉಂಟಾಗಿರುವ ವ್ಯತ್ಯಗಳ ಕುರಿತು ತಿಳಿಸಿದ್ದಕ್ಕೆ ಧನ್ಯವಾದಗಳು. ಇದನ್ನು ಬಗೆಹರಿಯಲು ಕ್ರಮವಹಿಸಿದ್ದೇವೆ ಹಾಗೂ ಸರಿಪಡಿಸಿದ ಕೂಡಲೇ ನಿಮ್ಮ ಗಮನಕ್ಕೆ ತರುತ್ತೇವೆ’ ಎಂದು ಗೂಗಲ್‌ನ ಭಾಗವಾಗಿರುವ ಯುಟ್ಯೂಬ್‌ ಟ್ವೀಟಿಸಿದೆ.

ಕೆಲವು ಬಳಕೆದಾರರು, ಮೀಮ್ಸ್‌, ವಿಡಿಯೊ, ಫೋಟೊಗಳ ಮೂಲಕ ಯುಟ್ಯೂಬ್‌ ಅಣಕಿಸುವ ಟ್ವೀಟ್‌ ಮಾಡುತ್ತಿದ್ದಾರೆ. ಮತ್ತೆ ಕೆಲವರು ಯುಟ್ಯೂಬ್‌ ಮರಳಿದೆ ಎಂದೂ ಟ್ವೀಟಿಸುತ್ತಿದ್ದಾರೆ. ಈ ನಡುವೆ ಟ್ವಿಟರ್‌ನಲ್ಲಿಯುಟ್ಯೂಬ್‌ಡೌನ್‌ ಟ್ರೆಂಡ್‌ ಆಗಿದೆ.

ಎಲ್ಲೆಲ್ಲಿ ವ್ಯತ್ಯಯ ಉಂಟಾಗಿದೆ ಎಂಬುದನ್ನು ಯುಟ್ಯೂಬ್‌ ತಿಳಿಸಿಲ್ಲ. ಗೂಗಲ್‌–ಆಲ್ಫಾಬೆಟ್‌, ಯುಟ್ಯೂಬ್‌ ಜಾಹೀರಾತುಗಳಿಂದಲೇ ಅಧಿಕ ಆದಾಯ ಗಳಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT