ಬೆಂಗಳೂರು: ವಿದ್ಯುತ್ಚಾಲಿತ ವಾಹನಗಳ (ಇ.ವಿ) ತಯಾರಿಕೆಯಲ್ಲಿ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಟೆಸ್ಲಾ ಕಂಪನಿಯು ಭಾರತದಲ್ಲಿ ತನ್ನ ಉತ್ಪಾದನಾ ಘಟಕ ತೆರೆಯುವ ಪ್ರಯತ್ನವನ್ನು ಕೈ ಬಿಟ್ಟಿದೆ ಎಂದು ವರದಿಯಾಗಿದೆ.

2022 ರಲ್ಲಿ ಟೆಸ್ಲಾ ಕಂಪನಿ ಭಾರತದಲ್ಲಿ ತನ್ನ ಮಾರುಕಟ್ಟೆ ವಿಸ್ತರಣೆ ಭಾಗವಾಗಿ ಉತ್ಪಾದನಾ ಘಟಕವನ್ನು ತೆರೆಯುವ ಭರವಸೆ ನೀಡಿತ್ತು.

ಆದರೆ, ಸಾಕಷ್ಟು ಅಡೆತಡೆಗಳಿಂದ ಉತ್ಪಾದನಾ ಘಟಕ ತೆರೆಯುವ ಪ್ರಯತ್ನ ಕುಂಟುತ್ತಲೇ ಸಾಗಿತು. ಸದ್ಯ ಕೆಲ ಉತ್ಪಾದನಾ ಘಟಕವನ್ನು ಭಾರತದಲ್ಲಿ ತೆರೆಯದಿರಲು ಟೆಸ್ಲಾ ಅನೌಪಚಾರಿಕವಾಗಿ ನಿರ್ಧರಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಚರ್ಚೆ ನಡೆಸಿದ್ದು, ಟೆಸ್ಲಾ ಉತ್ಪಾದನಾ ಘಟಕ ತೆರೆಯುವ ನಿರ್ಧಾರದಿಂದ ದೂರ ಸರಿದಿರುವುದು ಖಾತ್ರಿಯಾಗಿದೆ ಎಂದು ತಿಳಿಸಿದೆ.

ಆಮದು ಇ.ವಿಗಳಿಗೆ ಭಾರತದಲ್ಲಿ ಹೆಚ್ಚಿನ ಸುಂಕ ಇರುವುದರಿಂದ ಟೆಸ್ಲಾ ಇಲ್ಲಿಯೇ ಉತ್ಪಾದನಾ ಘಟಕ ತೆರೆಯುವ ಮನಸ್ಸು ಮಾಡಿತ್ತು. ಆದರೆ, ಟೆಸ್ಲಾ ಒಡೆಯ ಇಲಾನ್ ಮಸ್ಕ್ ಅವರ ಈ ನಿರ್ಧಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಹಿರಂಗವಾಗಿಯೇ ವಿರೋಧಿಸಿದ್ದರು.

ಆರಂಭದಲ್ಲಿಯೇ ಇಷ್ಟೆಲ್ಲ ಸಮಸ್ಯೆಗಳಿಂದ ಟೆಸ್ಲಾ ಕಡೆಗೆ ಕಳೆದ ವರ್ಷ ಭಾರತದಲ್ಲಿ ತನ್ನ ಶೋರೂಂಗಳನ್ನು ತೆರೆದಿತ್ತು. ದೆಹಲಿ, ಮುಂಬೈ, ಗುರುಗ್ರಾಮ, ಬೆಂಗಳೂರಲ್ಲಿ ಶೋರೋಂ ತೆರೆದು ಮಾಡೆಲ್ ವೈ. ಮಾಡೆಲ್ ವೈಎಲ್ ಕಾರನ್ನು ಮಾರಾಟಕ್ಕಿಟ್ಟಿತ್ತು.

ಆದರೆ, ಆಭರತದಲ್ಲಿ ಒಂದು ವರ್ಷ ಕಳೆದರೂ ಕೇವಲ 368 ಟೆಸ್ಲಾ ಕಾರುಗಳು ಮಾರಾಟವಾಗಿರುವುದು ಟೆಸ್ಲಾ ಕಂಪನಿಯನ್ನು ತೀವ್ರ ನಿರಾಸೆಗೊಳಿಸಿದೆ ಎನ್ನಲಾಗಿದೆ.

ಇನ್ನೊಂದೆಡೆ ಭಾರತದಲ್ಲಿ ಕಡಿಮೆ ಬಜೆಟ್ನ ಟಾಟಾ, ಮಹೀಂದ್ರಾ, ಎಂಜಿ ಅಂತಹ ಕಂಪನಿಗಳ ಇ.ವಿ ಕಾರುಗಳ ಮೇಲೆ ಜನ ಹೆಚ್ಚು ಗಮನ ಕೇಂದ್ರಿಕರಿಸಿರುವುದು ಟೆಸ್ಲಾಗೆ ಹಿನ್ನಡೆಯಾಗಿದೆ. ಅಲ್ಲದೇ ಉತ್ಪಾದನಾ ಘಟಕ ತೆರೆಯಲು ಭಾರತ ಸರ್ಕಾರ ಟೆಸ್ಲಾಗೆ ದೊಡ್ಡ ಪ್ರಮಾಣದ ಹೂಡಿಕೆ ಮಾಡಿ ಎಂದು ಹೇಳಿದೆ. ಆದರೆ, ಕಂಪನಿ ಇದರ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಹಾಗೂ ಸರ್ಕಾರದ ಮಟ್ಟದಲ್ಲಿ ಮಾತುಕತೆಗಳು ಫಲಪ್ರಧವಾಗದಿರುವುದರಿಂದ ಟೆಸ್ಲಾ ಅಂತಿಮವಾಗಿ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿಗಿದೆ.

ಅಷ್ಟೇ ಅಲ್ಲದೇ ಭಾರತದ ಆಮದು ಸುಂಕ ಹೆಚ್ಚಿರುವ ಬಗ್ಗೆಯೂ ಟೆಸ್ಲಾ ತೀವ್ರ ಅಸಮಾಧಾನಗೊಂಡಿರುವುದೂ ಘಟಕ ಸ್ಥಗಿತಗೊಳ್ಳದಿರಲು ಕಾರಣ ಎನ್ನಲಾಗಿದೆ.

ಏತನ್ಮಧ್ಯೆ ಇಷ್ಟೆಲ್ಲಾ ಚರ್ಚೆಯಾಗುತ್ತಿದ್ದರು ಕುಮಾರಸ್ವಾಮಿ ನೇತೃತ್ವದ ಕೇಂದ್ರ ಬೃಹತ್ ಕೈಗಾರಿಕಾ ಇಲಾಖೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕಂಪನಿಯು ಈಗಾಗಲೇ 21 ರಾಜ್ಯಗಳಲ್ಲಿ ಕಾರುಗಳನ್ನು ಪೂರೈಸುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಥಳಗಳಿಗೆ ವಿಸ್ತರಣೆಯಾಗಲಿದೆ. ಹೀಗಾಗಿ ಟೆಸ್ಲಾ ಕೇವಲ ಶೋರೂಂಗಳ ಮೇಲೆ ಮಾತ್ರ ಭಾರತದಲ್ಲಿ ತನ್ನ ವ್ಯವಹಾರಗಳನ್ನು ಕೇಂದ್ರಿಕರಿಸಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.