ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕೀದಾರ್ ಅಲ್ಲ: ವಿಡಿಯೊ ವೈರಲ್

ಶುಕ್ರವಾರ, ಏಪ್ರಿಲ್ 26, 2019
34 °C

ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕೀದಾರ್ ಅಲ್ಲ: ವಿಡಿಯೊ ವೈರಲ್

Published:
Updated:

ಮುಂಬೈ: ಆಜ್ ತಕ್ ಸುದ್ದಿ ವಾಹಿನಿಯಲ್ಲಿ ಟಕ್ಕರ್ ಎಂಬ ಚರ್ಚಾ ಕಾರ್ಯಕ್ರಮದಲ್ಲಿ ಯುವಕನೊಬ್ಬ ಮೋದಿಯವರ ಚೌಕೀದಾರ್ ಅಭಿಯಾನವನ್ನು ವಿಮರ್ಶಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಟಕ್ಕರ್ ಕಾರ್ಯಕ್ರಮದ ವೇದಿಕೆಯಲ್ಲಿದ್ದ ಬಿಜೆಪಿ ವಕ್ತಾರರನ್ನು ಪ್ರಶ್ನಿಸಿದ ಯುವಕ, 'ನೀವು ಅಂದೊಮ್ಮೆ ಪಕೋಡಾ ಮಾರಲು ಹೇಳಿದ್ದಿರಿ, ಈಗ ನೀವು ಚೌಕೀದಾರ್ ಬಗ್ಗೆ ಹೇಳುತ್ತಿದ್ದೀರಿ. ನಮಗೆ ಚೌಕೀದಾರ್ ಬೇಕಾದರೆ ಕಡಿಮೆ ಬೆಲೆಗೆ ನೇಪಾಳದಿಂದ ಸಿಗುತ್ತಾರೆ. ದೇಶಕ್ಕೆ ಬೇಕಾಗಿರುವುದು ಪ್ರಧಾನಿ, ಚೌಕೀದಾರ್ ಅಲ್ಲ.

ಅದೇ ವೇಳೆ ಪ್ರಧಾನಿ ಮೋದಿಯವರ ಹಳೇ ಟ್ವೀಟ್‍ನ್ನು ಉಲ್ಲೇಖಿಸಿ ಮಾತನಾಡಿದ ಆ ಯುವಕ ಕಳೆದ 70 ವರ್ಷಗಳಲ್ಲಿ ಭಾರತ ಏನೂ ಸಾಧನೆ ಮಾಡಿಲ್ಲ ಎಂದು ನೀವು ಹೇಳುತ್ತಿದ್ದೀರಿ.  2014ರಕ್ಕಿಂತ ಮುಂಚೆ ಈ ದೇಶ ಹಾವಾಡಿಗರ ದೇಶವಾಗಿತ್ತು ಎಂದು ಪ್ರಧಾನಿ ಹೇಳಿದ್ದರು. ಆದರೆ ಪ್ರಧಾನಿ ಹುಟ್ಟುವ  ಮುಂಚೆಯೇ ಇಲ್ಲಿ ಹೋಮಿ ಬಾಬಾ ಸೆಂಟರ್ ಫಾರ್ ಸಯನ್ಸ್ ಎಡ್ಯುಕೇಶನ್ ಇದೆ. ಮೋದಿಯವರು ಗಿಲ್ಲಿ ದಂಡಾ (ಚಿನ್ನಿ ದಾಂಡು) ಆಡುವ ಹುಡುಗನಾಗಿದ್ದಾಗ ಭಾರತದಲ್ಲಿ  ಬಕ್ರಾ ನಂಗಲ್ ಅಣೆಕಟ್ಟು ನಿರ್ಮಾಣವಾಗಿತ್ತು.

ಯುವಕನ ಜೋಷ್ ಭರಿತ ಈ ಮಾತಿನ ವಿಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಹಲವಾರು ನೆಟ್ಟಿಗರು ಈತನ ಮಾತಿಗೆ ಮೆಚ್ಚುಗೆ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 131

  Happy
 • 5

  Amused
 • 2

  Sad
 • 3

  Frustrated
 • 35

  Angry

Comments:

0 comments

Write the first review for this !