ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸಮವಸ್ತ್ರ ಧರಿಸಿ ಸೈನಿಕರೊಂದಿಗೆ 'ರಾಷ್ಟ್ರಗೀತೆ' ಹಾಡಿದ ಬಾಲಕಿ

Last Updated 29 ಆಗಸ್ಟ್ 2021, 12:26 IST
ಅಕ್ಷರ ಗಾತ್ರ

ನವದೆಹಲಿ: ಮಿಜೋರಾಂ ರಾಜ್ಯದ 5 ವರ್ಷದ ಬಾಲಕಿ ಎಸ್ತಾರ್‌ ನಮ್ತೆ ಸೇನಾ ಯೋಧರ ಜತೆ ರಾಷ್ಟ್ರಗೀತೆ ಹಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಇಲ್ಲಿನ ಲುಂಗ್ಲೆ ಪಟ್ಟಣದಲ್ಲಿ ಅಸ್ಸಾಂ ರೈಫಲ್ಸ್ ಯೋಧರೊಂದಿಗೆ ಸೈನಿಕರ ಸಮವಸ್ತ್ರ ತೊಟ್ಟು ಎಸ್ತಾರ್‌ ರಾಷ್ಟ್ರಗೀತೆ ಹಾಡಿದ್ದಾರೆ. ಈ ವಿಡಿಯೊ ವಿಜೋರಾಂ ಮುಖ್ಯಮಂತ್ರಿ ಸೇರಿದಂತೆ ಲಕ್ಷಾಂತರ ಜನರ ಗಮನ ಸೆಳೆದಿದೆ.

ಈ ವಿಡಿಯೊದಲ್ಲಿ ಎಸ್ತರ್ ಸೇನಾ ಸಮವಸ್ತ್ರ ಧರಿಸಿ ಸೈನಿಕರೊಂದಿಗೆ ಹಾಡುತ್ತಿರುವಾಗ ಧ್ವಜಕ್ಕೆ ವಂದಿಸುತ್ತಿರುವುದು ಕಂಡುಬರುತ್ತದೆ.

ಸ್ವಾತಂತ್ರ್ಯ ದಿನಾಚರಣೆಗೆ ಎರಡು ದಿನಗಳ ಮೊದಲು ಆಗಸ್ಟ್ 13 ರಂದು ಈ ವಿಡಿಯೊವನ್ನು ಅಪ್ ಲೋಡ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT