ಎಂಆರ್ಐ ಸ್ಕ್ಯಾನಿಂಗ್ ಮಾಡಿಸಿಕೊಳ್ಳಲು ಹೆದರಿದ ಮಗನಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಆತನ(ಮಗ) ಜೊತೆ ತಾವೂ ಮಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ತಂದೆಯ ಮಮತೆಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಈ ಜಗತ್ತಿನಲ್ಲಿ ಹೆತ್ತವರ ಪ್ರೀತಿಗೆ ಯಾವುದೂ ಸರಿಸಾಟಿ ಇಲ್ಲ. ತಮ್ಮ ಮಕ್ಕಳಿಗೆ ಧೈರ್ಯ ತುಂಬಲು, ಅವರನ್ನು ಸಂತೋಷವಾಗಿಡಲು, ತಂದೆ–ತಾಯಿ ಎಂತಹ ಸಾಹಸ ಮಾಡಲು ಹಿಂಜರಿಯುವುದಿಲ್ಲ ಎಂಬುವುದನ್ನು ಈ ಘಟನೆ ಸಾರಿ ಹೇಳಿದೆ.

ವಿಡಿಯೊದಲ್ಲಿ ಎನಿದೆ?:

ಎಂಆರ್ಐ ಪ್ರಕ್ರಿಯೆಗೆ ಒಳಗಾಗಲು ಹೆದರಿದ ಪುಟ್ಟ ಬಾಲಕ ನಡುಗುತ್ತಾ ಕಣ್ಣೀರು ಹಾಕುವುದನ್ನು ವಿಡಿಯೊದಲ್ಲಿ ಕಾಣಬಹುದು. ಎಷ್ಟೇ ಪ್ರಯತ್ನಿಸಿದರೂ ಆ ಬಾಲಕ ಎಂಆರ್ಐ ಸ್ಕ್ಯಾನಿಂಗ್ ಯಂತ್ರದ ಒಳಗೆ ಹೋಗಲು ಒಪ್ಪಲಿಲ್ಲ. ಬಳಿಕ ಬಾಲಕನ ತಂದೆ ಮಗನೊಂದಿಗೂ ತಾವೂ ಯಂತ್ರದೊಳಗೆ ಹೋಗಲು ನಿರ್ಧರಿಸುತ್ತಾರೆ.

ಮಗುವನ್ನು ಎಂಆರ್ಐ ಯಂತ್ರದಲ್ಲಿ ಮಲಗಿಸಿ, ಬಳಿಕ ತಾವು ಅವನ ಪಕ್ಕದಲ್ಲಿ ಮಲಗುತ್ತಾರೆ. ಮಗನನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವ ಮೂಲಕ ಆತನ ಭಯವನ್ನು ನಿವಾರಿಸಿ, ರಕ್ಷಣೆಯ ಭಾವ ಮೂಡಿಸುತ್ತಾರೆ.

ಸ್ಕ್ಯಾನ್ ನಡೆಯುವವರೆಗೂ ಅವರು ಮಗುವಿಗೆ ಮೆಲ್ಲಗೆ ಧೈರ್ಯದ ಮಾತುಗಳನ್ನು ಹೇಳುತ್ತಾರೆ. ನೀನು ಒಬ್ಬಂಟಿಯಲ್ಲ. ನಿನ್ನೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ. ಆರಂಭಣದಲ್ಲಿ ಭಯಭೀತನಾಗಿದ್ದ ಬಾಲಕ ಸ್ಕ್ಯಾನಿಂಗ್ ಪ್ರಕ್ರಿಯೆಯ ಕೊನೆಯಲ್ಲಿ, ತನ್ನ ತಂದೆಯ ಅಪ್ಪುಗೆಯಲ್ಲಿ ಶಾಂತವಾಗಿರುವುದು ಕಂಡು ಬಂದಿದೆ.

ಈ ಘಟನೆ ಎಲ್ಲಿ ನಡೆದದ್ದು ಎಂಬ ಬಗ್ಗೆ ಸ್ಷಷ್ಟ ಮಾಹಿತಿಯಿಲ್ಲ. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಅನೇಕ ಬಳಕೆದಾರರು ಆ ತಂದೆಯನ್ನು 'ಸೂಪರ್ ಡ್ಯಾಡ್' ಎಂದು ಕರೆದಿದ್ದಾರೆ. 'ತಂದೆಯ ಮಮತೆ ಎಂದರೆ ಇದು‘ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ತಂದೆ ಹಾಗೂ ಮಗನ ನಡುವಿನ ಬಾಂಧ್ಯವ್ಯವನ್ನು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.