ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಕ್ ಫ್ರಂ ಹೋಂನ ತಾಯಿಯನ್ನು ಅನುಕರಿಸಿದ್ದ ಮಗಳು; ವಿಡಿಯೊ 15 ಮಿಲಿಯನ್ ವೀಕ್ಷಣೆ

ಅಕ್ಷರ ಗಾತ್ರ

ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆ ಬಹುತೇಕ ಜನರಿಗೆ ಮನೆಯಲ್ಲೇ ಕೆಲಸ ಮಾಡುವ ಸಂದರ್ಭ ಬಂದೊದಗಿದೆ. ಕೊಲೀನ್ ಚುಲಿಸ್ ಎಂಬಾಕೆ ತನ್ನ ಮಗಳು ತನ್ನನ್ನು ಅನುಕರಿಸಿದ್ದ (ಇಮಿಟೇಟ್) ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಆದರೆ ಕಳೆದ ಏಪ್ರಿಲ್‌ನಲ್ಲಿ ಲಿಂಕ್ಡ್ಇನ್‌ನಲ್ಲಿ ಶೇರ್ ಮಾಡಿದ್ದ ವಿಡಿಯೊಗೆ ಅಂತಹ ಪ್ರತಿಕ್ರಿಯೆ ಸಿಗುತ್ತದೆ ಎಂದು ಎಂದಿಗೂ ಯೋಚಿಸಿರಲಿಲ್ಲ.

ಅದಾದ ಮೂರು ತಿಂಗಳ ಬಳಿಕ ವಿಡಿಯೊ ವೈರಲ್ ಆಗಿದ್ದು, ಲಿಂಕ್ಡ್ಇನ್‌ನಲ್ಲಿ 5 ಮಿಲಿಯನ್ ಲೈಕ್ಸ್‌ನೊಂದಿಗೆ 15 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಮೆರಿಕದ ವರ್ಜೀನಿಯಾದ 8 ವರ್ಷದ ಅಡೆಲ್ಲೆ ಸಾಂಕ್ರಾಮಿಕ ರೋಗದಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದ ತಾಯಿಯಂತೆ ನಟಿಸುತ್ತಿರುವುದು ಮೆಚ್ಚುಗೆಗೆ ಕಾರಣವಾಗಿದೆ.

1 ನಿಮಿಷ 23 ಸೆಕೆಂಡ್‌ಗಳಿರುವ ವಿಡಿಯೊದಲ್ಲಿ, ಹುಡುಗಿ ತನ್ನ ತಾಯಿಯ ಟೇಬಲ್ ಬಳಿ ಕುಳಿತು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವಂತೆ ನಟಿಸಿದ್ದಾಳೆ. ಬಳಿಕ ಫೋನ್ ಕರೆಯನ್ನು ಸ್ವೀಕರಿಸಿದಂತೆ ನಟಿಸುತ್ತಾಳೆ ಮತ್ತು ಪ್ರಮುಖ ಸೂಚನೆಗಳನ್ನು ಬರೆಯಲು ನೋಟ್‌ಪ್ಯಾಡ್ ತೆಗೆದುಕೊಳ್ಳುತ್ತಾಳೆ, ಆಕೆಯ ತಾಯಿಯು ಆಗಾಗ್ಗೆ ಹೇಗೆ ವರ್ತಿಸುತ್ತಿದ್ದರೋ ಥೇಟ್ ಹಾಗೆಯೇ ಆಡುತ್ತಾಳೆ. ಮಕ್ಕಳು ಇದ್ದಕ್ಕಿದ್ದಂತೆ ಕೋಣೆಗೆ ಪ್ರವೇಶಿಸಿದಾಗ ತಾಯಿ ಹೇಗೆ ವರ್ತಿಸುತ್ತಾಳೆ ಎಂದು ಅಡೆಲ್ಲೆ ವಿಡಿಯೊದಲ್ಲಿ ಸಂಪೂರ್ಣವಾಗಿ ತೋರಿಸುತ್ತಾಳೆ.

'ನನ್ನ 8 ವರ್ಷದ ಮಗಳು ನಿನ್ನೆ ರಾತ್ರಿ ನನ್ನ ಬಗ್ಗೆ ಇಮಿಟೇಟ್ ಮಾಡಬಹುದೇ ಎಂದು ಕೇಳಿದಳು. ಈ ವೇಳೆ ನಾನು ಏನನ್ನು ನಿರೀಕ್ಷಿಸಬೇಕೆಂದು ಖಾತ್ರಿಯಿರಲಿಲ್ಲ. ಇದು ಮೊದಲ ಮತ್ತು ಏಕೈಕ ಟೇಕ್ ಆಗಿತ್ತು. ಇದೇ ರೀತಿ ನಿಮಗೂ ಹಲವರಿಗೆ ಆಗಿರಬಹುದೆಂದು ನಾನು ಭಾವಿಸಿದ್ದೇನೆ. ಕೋವಿಡ್ ಬಹಳಷ್ಟು ವಿಷಯಗಳನ್ನು ಬದಲಾಯಿಸಿದೆ ಮತ್ತು ಇದು ನನ್ನ ವಾಸ್ತವ ಸ್ಥಿತಿಯಾಗಿದೆ' ಎಂದು ಅವರು ಲಿಂಕ್ಡ್‌ಇನ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದರು.

ಲಿಕ್ಡ್‌ಇನ್ ಬಯೋ ಪ್ರಕಾರ, ಕೊಲೀನ್ ಚುಲಿಸ್ ಅವರು ಎಸ್ಎಪಿ ಸಕ್ಸಸ್‌ಫ್ಯಾಕ್ಟರ್‌ಗಳಿಗಾಗಿ ಮಾರಾಟ ಮತ್ತು ನಿಯಂತ್ರಿತ ಕೈಗಾರಿಕೆಗಳ ಪ್ರಾದೇಶಿಕ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿತ್ತಾರೆ. ಕೊಲೀನ್ ಅವರಿಗೆ ಲೂಕ್ (10), ಅಡೆಲ್ಲೆ (8) ಮತ್ತು ಡೆಕ್ಲಾನ್ (6) ಎಂಬ ಮೂವರು ಮಕ್ಕಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT