ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್ ಕಾಲಿಂಗ್ ಮಾಡಿ

7
ತಂತ್ರೋಪನಿಷತ್ತು

ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್ ಕಾಲಿಂಗ್ ಮಾಡಿ

Published:
Updated:

ಆಂಡ್ರಾಯ್ಡ್, iOS ಮೊಬೈಲ್ ಫೋನ್‍ಗಳಲ್ಲಿ ವಾಟ್ಸ್‌ಆ್ಯಪ್‌ ಗ್ರೂಪ್ ಆಡಿಯೊ ಮತ್ತು ವಿಡಿಯೊ ಕರೆ ಮಾಡುವ ನೂತನ ಸೌಲಭ್ಯ ಒದಗಿಸಲಾಗಿದೆ. ವಾಟ್ಸ್‌ಆ್ಯಪ್‌ ಅಪ್‍ಡೇಟ್ ಆಗಿದ್ದರೆ ಮಾತ್ರ ಗ್ರೂಪ್ ಕಾಲಿಂಗ್ ಸೌಲಭ್ಯ ಬಳಸಬಹುದು.

ಆಡಿಯೊ ಕರೆ ಮಾಡುವುದು ಹೇಗೆ?
ನಿಮ್ಮ ವಾಟ್ಸ್ಆ್ಯಪ್ ಕಾಂಟಾಕ್ಟ್ ಲಿಸ್ಟ್ ಓಪನ್ ಮಾಡಿ. ವಾಯ್ಸ್ ಕಾಲ್ ಬಟನ್ ಕ್ಲಿಕ್ ಮಾಡುವ ಮೂಲಕ ಒಬ್ಬರಿಗೆ ಕರೆ ಮಾಡಿ.

ಅವರು ಕರೆ ಸ್ವೀಕರಿಸುತ್ತಿದ್ದಂತೆ ಬಲಭಾಗದಲ್ಲಿ Add Contact ಎಂಬ ಐಕಾನ್ ಕಾಣುತ್ತದೆ. ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ವಾಟ್ಸ್‌ಆ್ಯಪ್‌ ಕಾಂಟಾಕ್ಟ್ ಲಿಸ್ಟ್ ಓಪನ್ ಆಗುತ್ತದೆ. ಅಲ್ಲಿಂದ ನಿಮಗಿಷ್ಟವಿರುವವರನ್ನು ಒಬ್ಬರ ನಂತರ ಒಬ್ಬರಾಗಿ ಈ ಗ್ರೂಪ್ ಕರೆಗೆ ಸೇರಿಸಿಕೊಳ್ಳಬಹುದು. ಒಟ್ಟು ಮೂರೇ ಮೂರು ವ್ಯಕ್ತಿಗಳನ್ನು ಗ್ರೂಪ್ ಕರೆಗೆ ಸೇರಿಸಿಕೊಳ್ಳಬಹುದು.

ವಿಡಿಯೊ ಕರೆ ಮಾಡುವುದು ಹೇಗೆ?

ಆಡಿಯೊ ಕರೆ ಮಾಡುವ ರೀತಿಯಲ್ಲಿಯೇ ಕಾಂಟಾಕ್ಟ್ ಲಿಸ್ಟ್ ಓಪನ್ ಮಾಡಿ. ವಿಡಿಯೊ ಕಾಲ್ ಬಟನ್ ಕ್ಲಿಕ್ ಮಾಡಿ. ಕರೆ ಸ್ವೀಕರಿಸುತ್ತಿದ್ದಂತೆಯೇ ಇನ್ನಿಬ್ಬರು ವ್ಯಕ್ತಿಗಳನ್ನು ಗ್ರೂಪ್ ಕರೆಗೆ ಆಹ್ವಾನಿಸಬಹುದು. ಇಲ್ಲಿಯೂ ಮೂರಕ್ಕಿಂತ ಹೆಚ್ಚು ಮಂದಿಯನ್ನುಸೇರಿಸಲಾಗುವುದಿಲ್ಲ. ಅಂದರೆ ಒಟ್ಟು ನಾಲ್ಕು ಮಂದಿಗೆ ಮಾತ್ರ ಇಲ್ಲಿ ಸಂವಹನ ನಡೆಸಬಹುದಾಗಿದೆ.

ರೈಲು ಪ್ರಯಾಣದ ವಿವರ!

IRCTC ರೈಲು ಪ್ರಯಾಣದ ಸಮಯ, ಟಿಕೆಟ್ ಸ್ಟೇಟಸ್ ಎಲ್ಲವನ್ನೂ ವಾಟ್ಸ್ ಆ್ಯಪ್ ಮೂಲಕ ತಿಳಿಯಬಹುದು. ಭಾರತೀಯ ರೈಲ್ವೆ ಮತ್ತು ಮೇಕ್ ಮೈ ಟ್ರಿಪ್ ಸಹಭಾಹಗಿತ್ವದಲ್ಲಿ ಈ ಸೇವೆ ವಾಟ್ಸ್‌ಆ್ಯಪ್‌ ಬಳಕೆದಾರರಿಗೆ ಲಭ್ಯವಿದೆ. 

IRCTC ಲೈವ್ ಟ್ರೈನ್ ಸ್ಟೇಟಸ್ ಪಡೆಯಲು ಹೀಗೆ ಮಾಡಿ:

* ನಿಮ್ಮ ವಾಟ್ಸ್ಆ್ಯಪ್‌ನಲ್ಲಿ ಮೇಕ್ ಮೈ ಟ್ರಿಪ್ ಸಂಖ್ಯೆ 07349389104 ಸೇವ್ ಮಾಡಿ.

* ಮೇಕ್ ಮೈ ಟ್ರಿಪ್ ಚಾಟ್ ಬಾಕ್ಸ್ ಓಪನ್ ಮಾಡಿ. ಯಾವ ರೈಲಿನ ಲೈವ್ ಟ್ರೈನ್ ಸ್ಟೇಟಸ್ ಅರಿಯಬೇಕೋ ಆ ರೈಲಿನ ನಂಬರ್ ಟೈಪ್ ಮಾಡಿ ಕಳಿಸಿ.

* ಉದಾಹರಣೆಗೆ ಯಶವಂತಪುರ ಜಂಕ್ಷನ್‌‍ನಿಂದ ಮಂಗಳೂರಿಗೆ ಹೊರಡುವ ಮೇಲ್ ಎಕ್ಸ್ ಪ್ರೆಸ್ ನ ಸ್ಟೇಟಸ್ ತಿಳಿಯಬೇಕಾದರೆ ರೈಲು ಸಂಖ್ಯೆ 16511 ಟೈಪಿಸಿ ಕಳಿಸಿ. ತಕ್ಷಣವೇ ರೈಲು ಹೊರಡುವ ಸಮಯದ ಸಂದೇಶ ನಿಮ್ಮ ಇನ್‍ಬಾಕ್ಸ್ ಗೆ ಬಂದು ಬೀಳುತ್ತದೆ. ಒಂದು ವೇಳೆ ರೈಲು ಚಲನೆಯಲ್ಲಿದ್ದರೆ ಅದು ಎಲ್ಲಿಗೆ ತಲುಪಿತು? ಎಷ್ಟು ಗಂಟೆಗೆ ಗಮ್ಯ ತಲುಪುತ್ತದೆ ಎಂಬ ಮಾಹಿತಿಯೂ ಸಿಗುತ್ತದೆ.

* ಬುಕಿಂಗ್ ಸ್ಟೇಟಸ್ ಅರಿಯಬೇಕಾದರೆ PNR ಸಂಖ್ಯೆಯನ್ನು ಟೈಪಿಸಿ, ಕಳುಹಿಸಿ. ಮೇಕ್ ಮೈ ಟ್ರಿಪ್ ಬುಕಿಂಗ್ ಸ್ಟೇಟಸ್ ಬಗ್ಗೆ ಸಂದೇಶ ಕಳುಹಿಸುತ್ತದೆ.

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !