ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 2.5 ಕೋಟಿ ವೀಕ್ಷಣೆ ಪಡೆದ ವಿಡಿಯೊ: ಸಹೇಲಿ ನೃತ್ಯಕ್ಕೆ ಮನಸೋತ ನೆಟ್ಟಿಗರು

Last Updated 16 ಅಕ್ಟೋಬರ್ 2021, 10:01 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳು ಯುವಕ, ಯುವತಿಯರ ಪ್ರತಿಭೆಯನ್ನು ಅನಾವರಣಗೊಳಿಸುವ ಮುಖ್ಯ ವೇದಿಕೆಗಳಾಗಿವೆ. ಎಷ್ಟೋ ಪ್ರತಿಭೆಗಳು ಸಾಮಾಜಿಕ ಜಾಲತಾಣಗಳಿಂದ ಬೆಳಕಿಗೆ ಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಂಡಿದ್ದಾರೆ. ಅಂತಹವರು ವಿವಿಧ ರಂಗಗಳಲ್ಲಿ ಸ್ಟಾರ್‌ಗಳಾಗಿದ್ದಾರೆ.

ಇತ್ತೀಚೆಗೆ ಸಹೇಲಿ ರುದ್ರ ಎಂಬ ಯುವತಿ ರೈಲ್ವೆ ಪ್ಲಾಟ್‌ಫಾರಂ ಮೇಲೆ ನೃತ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಜನಸಂದಣಿಯ ನಡುವೆ ಉತ್ಸಾಹದಿಂದ 'ಸಾತ್ ಸಮುಂದರ್ ಪಾರ್' ಹಾಡಿಗೆ ನೃತ್ಯ ಮಾಡಿ ನೋಡುಗರ ಮನ ಗೆದಿದ್ದಾರೆ.

ತಾವು ನೃತ್ಯಮಾಡಿದ ವಿಡಿಯೊವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.ಇಲ್ಲಿಯವರೆಗೂ ಈ ವಿಡಿಯೊವನ್ನು ಸುಮಾರು 2.5 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. 15 ಲಕ್ಷ ಜನರು ಲೈಕ್‌ ಮಾಡಿದ್ದು 18 ಸಾವಿರಕ್ಕೂ ಹೆಚ್ಚು ಜನರು ಕಮೆಂಟ್‌ ಮಾಡಿದ್ದಾರೆ.

ಡ್ಯಾನ್ಸರ್‌ ಆಗಿರುವ ಸಹೇಲಿ ಸಾವರ್ಜನಿಕ ಸ್ಥಳಗಳಲ್ಲಿ ನೃತ್ಯ ಮಾಡಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಾರೆ. ಇಂತಹ ನೂರಾರು ವಿಡಿಯೊಗಳು ಅವರ ಖಾತೆಯಲ್ಲಿ ಕಾಣಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT