ಸೋಮವಾರ, ಆಗಸ್ಟ್ 8, 2022
24 °C

ಸಂಚಾರಿ ವಿಜಯ್ ಬಗ್ಗೆ ನಿರೂಪಕಿ ಅನುಶ್ರೀ ಹಂಚಿಕೊಂಡ ಭಾವನಾತ್ಮಕ ವಿಡಿಯೊ ವೈರಲ್

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಸಂಚಾರಿ ವಿಜಯ್‌ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ ನಿರೂಪಕಿ ಅನುಶ್ರೀ ಅವರು ಇನ್‌ಸ್ಟಾಗ್ರಾಂನಲ್ಲಿ ಸಂದೇಶ ಪ್ರಕಟಿಸಿದ್ದಾರೆ. ಇದರ ಜತೆಗೆ, ವಿಜಯ್‌ ಅವರು ಭಾವನಾತ್ಮಕವಾಗಿ ಮಾತನಾಡಿದ್ದ ಯೂಟ್ಯೂಬ್‌ ಸಂದರ್ಶನದ ತುಣುಕೊಂದನ್ನೂ ಪೋಸ್ಟ್ ಮಾಡಿದ್ದಾರೆ. ಅದೀಗ ವೈರಲ್ ಆಗಿದೆ.

‘ಒಳ್ಳೆಯವರಿಗೇ ಯಾಕೆ ಹೀಗೆ ಆಗುತ್ತದೆ? ವಿಜಯ್ ನಿಮ್ಮ ಜೀವನ ಪಯಣವನ್ನು ನನ್ನ ಯೂಟ್ಯೂಬ್ ಕಾರ್ಯಕ್ರಮದಲ್ಲಿ ಹಂಚಿಕೊಳ್ಳಲು ಬಂದಾಗ ಖಂಡಿತವಾಗಿಯೂ ಇಂಥ ನೋವಿನ ತಿರುವು ಊಹಿಸಿರಲಿಲ್ಲ. ತುಂಬಾ ಕಷ್ಟಪಟ್ಟು, ಸ್ವಾಭಿಮಾನದಿಂದ, ಬೆಳೆದು ನಿಂತು, ಕನ್ನಡಕ್ಕೆ ರಾಷ್ಟಪ್ರಶಸ್ತಿ ತಂದುಕೊಟ್ಟು, ಇಂದು ವಿದಾಯ ಹೇಳಿದ್ದೀರಾ... ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ಆ ಭಗವಂತ ಕೊಡಲಿ’ ಎಂದು ಅನುಶ್ರೀ ಸಂದೇಶ ಪ್ರಕಟಿಸಿದ್ದಾರೆ.

ಓದಿ: 

ಸಿನಿಮಾ ರಂಗ ಪ್ರವೇಶಿಸಲು ಪಟ್ಟ ಪಾಡು, ತಾಯಿಯ ಅಗಲುವಿಕೆಯ ನೋವಿನ ಕ್ಷಣ ಸೇರಿದಂತೆ ಹಲವು ವಿಚಾರಗಳಲ್ಲಿ ಯೂಟ್ಯೂಬ್ ಸಂದರ್ಶನದಲ್ಲಿ ಸಂಚಾರಿ ವಿಜಯ್ ಪ್ರಸ್ತಾಪಿಸಿದ್ದರು.

ಅನುಶ್ರೀ ಅವರು ಪೋಸ್ಟ್ ಮಾಡಿರುವ ವಿಡಿಯೊವನ್ನು ಈಗಾಗಲೇ 4.5 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಸಾವಿರಾರು ಮಂದಿ ಲೈಕ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು