ಬೆಂಗಳೂರು: ಯುವತಿಯೊಬ್ಬಳು ‘108 ಆಂಬುಲೆನ್ಸ್‘ನಲ್ಲಿ ಒಬ್ಬ ಯುವಕ ಮತ್ತು ಆಂಬುಲೆನ್ಸ್ ಚಾಲಕನೊಂದಿಗೆ ಆಕ್ಷೇಪಾರ್ಹವಾದ ರೀತಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಮಧ್ಯಪ್ರದೇಶದ ಛಾತ್ರಪುರ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.

ಆಂಬುಲೆನ್ಸ್ನಲ್ಲಿ ಯುವಕ–ಯುವತಿ ಇರುವುದನ್ನು ಹಾಗೂ ಅನಗತ್ಯವಾಗಿ ಸೈರನ್ ಮೊಳಗಿಸುತ್ತಾ ಹೋಗುತ್ತಿದ್ದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನತ್ತಿದ್ದರು.

ಸುಮಾರು ಐದು ಕಿ,ಮೀ ದೂರ ಹೋದ ನಂತರ ವಾಹನವನ್ನು ತಡೆದು ನೋಡಿದಾಗ ಅದರಲ್ಲಿ ಯುವಕ–ಯುವತಿ ಆಕ್ಷೇಪರ್ಹವಾಗಿ ಇದ್ದಿದ್ದು ಪತ್ತೆಯಾಯಿತು.

ಈ ಕುರಿತು ಚಾಲಕನನ್ನು ಸ್ಥಳೀಯರು ಪ್ರಶ್ನಿಸಿದಾಗ, ಯುವತಿ ಕಾಲೇಜು ವಿದ್ಯಾರ್ಥಿನಿಯಾಗಿದ್ದು ನನ್ನ ತಂಗಿ, ಯುವಕ ರೋಗಿ ಎಂದು ಹೇಳಿದ್ದಾನೆ. ಆದರೆ ಅವರ ಹೆಸರು ಹೇಳಲು ಆತ ತಡಬಡಾಯಿಸಿದ್ದಾನೆ. ಈ ಘಟನೆಯನ್ನು ಸ್ಥಳೀಯರು ವಿಡಿಯೊ ಮಾಡಿಕೊಂಡು ಅಧಿಕಾರಿಗಳಿಗೆ ದೂರು ನೀಡಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಛಾತ್ರಪುರ ಜಿಲ್ಲೆಯ ಮುಖ್ಯ ವೈದ್ಯಾಧಿಕಾರಿ ಆರ್ಪಿ ಗುಪ್ತಾ ಅವರು ಚಾಲಕನನ್ನು ಅಮಾನತು ಮಾಡಿ, ತನಿಖೆಗೆ ಆದೇಶಿಸಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಕೆಲವರು ‘ಮಧ್ಯಪ್ರದೇಶದಲ್ಲಿ ಚಲಿಸುವ ಓಯೊ ರೂಮ್ ನೋಡಿ’ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.