ಕೊಡಗಿನ ಸಂಕಷ್ಟ ಹಂಚಿಕೊಂಡ ಬಾಲಕ: ವಿಡಿಯೊ ವೈರಲ್‌

7

ಕೊಡಗಿನ ಸಂಕಷ್ಟ ಹಂಚಿಕೊಂಡ ಬಾಲಕ: ವಿಡಿಯೊ ವೈರಲ್‌

Published:
Updated:

ಕೊಡಗು: ಜಿಲ್ಲೆಯಲ್ಲಿ ಇತ್ತೀಚೆಗೆ ಮಳೆ ಹೆಚ್ಚಾಗಿದ್ದು, ಕಾಫಿ, ಒಣಮೆಣಸು, ಅಡಿಕೆ, ಭತ್ತ ಬೆಳೆಗಳು ನಾಶವಾಗಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶೀಘ್ರವೇ ರೈತರಿಗೆ ಪರಿಹಾರ ನೀಡುವಂತೆ ಎಂಟನೇ ತರಗತಿ ಓದುತ್ತಿರುವ ಬಾಲಕನೊಬ್ಬ ಮಾತನಾಡಿರುವ ವರದಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. 

ವಿಡಿಯೊದಲ್ಲಿ ಏನಿದೆ?
ಕೊಡಗು ಜಿಲ್ಲೆಯಾದ್ಯಂತ ಮಳೆ ಜಾಸ್ತಿ ಆದರೆ ಮೈಸೂರು, ಮಂಡ್ಯ, ಕೆ.ಆರ್‌.ನಗರ, ತಮಿಳುನಾಡಿನ ಅರ್ಧ ಭಾಗದ ಜನತೆ ನೀರನ್ನು ಬಳಸಿಕೊಳ್ಳುತ್ತಾರೆ. ಆದರೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಕೂಲಿ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುತ್ತಾರೆ. ಜತೆಗೆ, ಕೊಡಗು –ಕೇರಳ ರಸ್ತೆ ಸಂಪೂರ್ಣ ಹದಗೆಟ್ಟಿದೆ ಇದರ ಬಗ್ಗೆ ಗಮನ ಹರಿಸಬೇಕಾಗಿದೆ. 

ಸಿಎಂ ಕುಮಾರಸ್ವಾಮಿ ಅವರು ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಯಾವುದೇ ರೀತಿಯ ಅನುದಾನ ನೀಡದೆ ತಾರತಮ್ಮ ನೀತಿ ಅನುಸರಿಸಿದ್ದಾರೆ. 

ಮುಖ್ಯಮಂತ್ರಿಗಳು ಎಲ್ಲ ಜಿಲ್ಲೆಗಳನ್ನು ಒಂದೇ ರೀತಿ ಕಾಣಬೇಕು. ಆದರೆ ಸಿಎಂ ಕೊಡಗನ್ನು ಕೈ ಬಿಟ್ಟಿದ್ದು ಸರಿಯಲ್ಲ. 

ಮಾಜಿ ಸಿಎಂ ಸಿದ್ದರಾಮಯ್ಯ ಅವರು ‘ಅನ್ನ ಭಾಗ್ಯ’ ಯೋಜನೆಯಡಿ ಪ್ರತಿಯೊಬ್ಬರಿಗೂ ತಲಾ 7 ಕೆ.ಜಿ ಅಕ್ಕಿ ನೀಡುತ್ತಿದ್ದರು. ಆದರೆ ಈಗಿನ ಮುಖ್ಯಮಂತ್ರಿ 2 ಕೆ.ಜಿ ಅಕ್ಕಿ ಕಡಿಮೆ ಮಾಡಿರುವುದು ಸರಿಯಲ್ಲ. 

ಬಿ.ಎಸ್‌.ಯಡಿಯೂರಪ್ಪ ಅವರೇ ನೀವು ವಿಧಾನಸಭೆ ಒಳಗೆ–ಹೊರಗೆ ಕೂಗಾಡಿದರೆ ಏನು ಪ್ರಯೋಜನವಿಲ್ಲ. ಬದಲಿಗೆ ಪ್ರಧಾನಿ ಮೋದಿ ಜೀ ಅವರ ಬಳಿ ಚರ್ಚಿಸಿ ಬೆಳೆ ಪರಿಹಾರ ನೀಡುವಂತೆ ಆಗ್ರಹಿಸಿ.  

ಪ್ರಧಾನ ಮಂತ್ರಿ ದೇಶದ 130 ಕೋಟಿ ಜನರ ಪ್ರತಿನಿಧಿಯೇ ಹೊರತು, ಯಾವುದೇ ಜಾತಿ, ನಿರ್ಧಿಷ್ಟ ವರ್ಗಕ್ಕೆ ಸೇರಿದವರಲ್ಲ. ಎಲ್ಲ ರಾಜ್ಯದವರನ್ನು ಒಂದೇ ಮನಸ್ಸು, ಒಂದೇ ಕಣ್ಣಿನಲ್ಲಿ ಕಾಣಬೇಕು. 

ಜಿಲ್ಲೆಗೆ ಇಲ್ಲಿವರೆಗೆ 24 ಮುಖ್ಯಮಂತ್ರಿ ಭೇಟಿ ನೀಡಿದ್ದು, ಸೂಕ್ತ ಪರಿಹಾರವನ್ನು ಒದಗಿಸಿದ್ದಾರೆ. ಆದರೆ ಈಗಿನ ಸಿಎಂ ಕೊಡಗು ಅನ್ನು ಕೈ ಬಿಟ್ಟಿದ್ದು ಸರಿಯಲ್ಲ. 

ಜನರ ಸಮಸ್ಯೆಗಳನ್ನು ನಿಮ್ಮ ಬಳಿ (ಕುಮಾರಸ್ವಾಮಿ) ಅಲ್ಲದೆ ಬೇರೆ ಯಾರ ಬಳಿ ಹೇಳಿಕೊಳ್ಳಬೇಕು ಎಂದು ಬಾಲಕ ಪ್ರಶ್ನಿಸಿದ್ದಾನೆ. 

ಬರಹ ಇಷ್ಟವಾಯಿತೆ?

 • 27

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !