ಸೋಮವಾರ, ಸೆಪ್ಟೆಂಬರ್ 20, 2021
22 °C

Video: 'ಬಚ್ಪನ್‌ ಕಾ ಪ್ಯಾರ್‌' ಹಾಡಿನ ಮೋಡಿ: ವಿದೇಶಿಯರು ಸಹದೇವ್ ಕಂಠಕ್ಕೆ ಫಿದಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಾಖಂಡ ರಾಜ್ಯದ ಬಾಲಕ ಸಹದೇವ್ ಡಿರ್ಡೊ ಹಾಡಿರುವ ’ಬಚ್ಪನ್‌ ಕಾ ಪ್ಯಾರ್‌’ ಹಾಡು ಭಾರತ ಮಾತ್ರವಲ್ಲದೇ ವಿದೇಶಗಳಲ್ಲೂ ವೈರಲ್ ಆಗಿದೆ.

2019ರಲ್ಲಿ ಸಹದೇವ್‌ ಶಾಲೆಯಲ್ಲಿ ಆತ್ಮವಿಶ್ವಾಸದಿಂದ ಹಾಡಿರುವ ಈ ಹಾಡು ಈಗ ವೈರಲ್‌ ಆಗಿದೆ. ನೂರಾರು ಜನರು ಈ ಹಾಡಿಗೆ ಸಂಗೀತ ಕೊಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಕೆಲವರು ಡ್ಯಾನ್ಸ್‌ ಮಾಡಿರುವ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ಸಹದೇವ್‌ನನ್ನು ಭೇಟಿ ಮಾಡಿ, ಅವನಿಂದ ಹಾಡು ಹೇಳಿಸಿ ಖುಷಿಪಟ್ಟಿದ್ದಾರೆ.

ಈ ಹಾಡಿಗೆ ಭಾರತೀಯರು ಮಾತ್ರವಲ್ಲದೇ ವಿದೇಶಿಯರು ಕೂಡ ಹೆಜ್ಜೆ ಹಾಕುತ್ತಿದ್ದಾರೆ. ’ಬಚ್ಪನ್‌ ಕಾ ಪ್ಯಾರ್‌’  ಹುಡುಗ ಸಹದೇವ್‌ ರಾತ್ರೋರಾತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿದ್ದಾನೆ.

ಅಮೆರಿಕದ ಹಾಲಿವುಡ್‌ ನಟ ರಿಕ್ಕಿ ಪಾಂಡ್‌ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅವರ ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು