ಸುಷ್ಮಾ ಜತೆ ನಿಂತು ಬಾಲಿವುಡ್ ಹಾಡು ಹಾಡಿದ ಉಜ್ಬೇಕ್ ಮಹಿಳೆ, ಟ್ವೀಟ್ ವೈರಲ್

7

ಸುಷ್ಮಾ ಜತೆ ನಿಂತು ಬಾಲಿವುಡ್ ಹಾಡು ಹಾಡಿದ ಉಜ್ಬೇಕ್ ಮಹಿಳೆ, ಟ್ವೀಟ್ ವೈರಲ್

Published:
Updated:

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಜತೆ ನಿಂತು ಉಜ್ಬೇಕಿಸ್ತಾನದ ಮಹಿಳೆಯೊಬ್ಬರು ಹಿಂದಿ ಚಿತ್ರಗೀತೆ 'ಈಚಕ್ ದಾನಾ ಬೀಚಕ್ ದಾನಾ'  ಹಾಡುತ್ತಿರುವ ವಿಡಿಯೊ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಕಜಖಿಸ್ತಾನ್, ಕರ್ಗಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ರಾಷ್ಟ್ರಗಳ ಪ್ರವಾಸದಲ್ಲಿರುವ ಸುಷ್ಮಾ ಉಜ್ಬೇಕಿಸ್ತಾನದಲ್ಲಿ ಮಹಿಳೆಯೊಬ್ಬರ ಜತೆ ಇರುವ ವಿಡಿಯೊ ಅದಾಗಿದೆ. ಆ ಮಹಿಳೆ ಬಾಲಿವುಡ್‍ನ ಶ್ರೀ 420 ಚಿತ್ರದ ಜನಪ್ರಿಯ ಹಾಡು ಈಚಕ್ ದಾನಾ ಬೀಚಕ್ ದಾನಾ ಹಾಡು ಹಾಡುತ್ತಿದ್ದಾರೆ. ಈ ವಿಡಿಯೊವನ್ನು ವಿದೇಶಾಂಗ ಇಲಾಖೆ ವಕ್ತಾರ ರವೀಶ್‌ ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಬಾಲಿವುಡ್‍ಗೆ ಸೀಮಾರೇಖೆಗಳಿಲ್ಲ.ಉಜ್ಬೇಕಿಸ್ತಾನದಲ್ಲಿ ರಾಜ್ ಕಪೂರ್ ಮತ್ತು ನರ್ಗೀಸ್ ಮನೆ ಮಾತಾಗಿದ್ದಾರೆ. ಕ್ಲಾಸಿಕ್ ಸಿನಿಮಾ ಎನಿಸಿಕೊಂಡ ಶ್ರೀ420 ಚಿತ್ರದ 'ಈಚಕ್ ದಾನಾ ಬೀಚಕ್ ದಾನಾ' ಹಾಡನ್ನು ಹಾಡಿರುವ ಉಜ್ಬೇಕ್ ಮಹಿಳೆಗೆ ನಮನಗಳು ಎಂದು ರವೀಶ್ ಕುಮಾರ್ ಟ್ವೀಟಿಸಿದ್ದಾರೆ.

ಟ್ವಿಟರ್ ಪ್ರತಿಕ್ರಿಯೆಗಳು

 

ಶ್ರೀ 420 ಚಿತ್ರದ ಈಚಕ್ ದಾನಾ ಹಾಡು

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !