ಭಾನುವಾರ, ಸೆಪ್ಟೆಂಬರ್ 20, 2020
23 °C

ನಡೆದಾಡುವ ಗೂಗಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹತ್ತು ವರ್ಷದ ಮಕ್ಕಳು ಶಾಲಾ ಪಠ್ಯವನ್ನು ಓದಿ ನೆನಪಿಟ್ಟುಕೊಳ್ಳುವುದೇ ಹೆಚ್ಚು. ಸ್ವಲ್ಪ ಚುರುಕಾಗಿರುವವರು ಗಣಿತ, ವಿಜ್ಞಾನ ಹೀಗೆ ಕೆಲವೊಂದು ವಿಷಯಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. 

ಹರಿಯಾಣದ ಪಂಚಕುಲ ಸಮೀಪದ ಭವನ್‌ ವಿದ್ಯಾಲಯದಲ್ಲಿ ಓದುತ್ತಿರುವ ಕೌಟಿಲ್ಯ ಪಂಡಿತ್‌ ಉಳಿದ ಮಕ್ಕಳಿಗಿಂತ ತುಂಬಾ ಭಿನ್ನ. ಈತನ ನೆನಪಿನ ಶಕ್ತಿಗೆ ಎಲ್ಲರೂ ಮೆಚ್ಚಬೇಕು. ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಬೇಕಿದ್ದರೆ ಗೂಗಲ್ ಹುಡುಕುವ ಬದಲು ಈ ಬಾಲಕನನ್ನು ಕೇಳಿದರೂ ಸಾಕು ಎನ್ನುತ್ತಾರೆ, ಕೌಟಿಲ್ಯನ ಬಗ್ಗೆ ತಿಳಿದವರು. 213 ದೇಶಗಳ ಬಹುತೇಕ ಮಾಹಿತಿ ಮತ್ತು ಅಂಕಿ ಅಂಶಗಳು ಇವನಿಗೆ ಗೊತ್ತು.

ಕೌಟಿಲ್ಯನ ಐಕ್ಯೂ ಮಟ್ಟ 150 ರಷ್ಟಿದೆ. ಆಲ್ಬರ್ಟ್‌ ಐನ್‌ಸ್ಟೈನ್‌ ಅವರ ಐಕ್ಯೂ ಮಟ್ಟವೂ ಸೂಮಾರು ಇಷ್ಟೇ ಇತ್ತು. ಎಂದು ಐಕ್ಯೂ ಪರೀಕ್ಷಿಸಿದ ನರರೋಗ ತಜ್ಞ ಡಾ. ಕಪಿಲ್ ಸಿಂಗಲ್ ಹೇಳಿದ್ದರು. ಎಲ್ಲರೂ ಈತನನ್ನು ಗೂಗಲ್ ಬಾಯ್‌ ಎಂದೇ ಕರೆಯುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು