ದೇವಾಲಯಗಳ ಹುಂಡಿ ಹಣ ಎಣಿಕೆ

7

ದೇವಾಲಯಗಳ ಹುಂಡಿ ಹಣ ಎಣಿಕೆ

Published:
Updated:
Deccan Herald

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಶಿವಗಂಗೆಯ ಹೊನ್ನಾದೇವಿ ಹಾಗೂ ಗಂಗಾಧರೇಶ್ವರ, ದೇವರಹೊಸಹಳ್ಳಿಯ ವೀರಭದ್ರಸ್ವಾಮಿ ಮತ್ತು ಹಳೇನಿಜಗಲ್‌ನ ಉದ್ಧಾನ ವೀರಭದ್ರೇಶ್ವರ ದೇವಾಲಯಗಳ ಹುಂಡಿ ಎಣಿಕೆ ಸೋಮವಾರ ನಡೆಯಿತು.
ಹೊನ್ನಾದೇವಿ ಹಾಗೂ ಗಂಗಾಧರೇಶ್ವರ ದೇವಾಲಯದಲ್ಲಿ ₹ 6.21 ಲಕ್ಷ, ಮರಿಹೊನ್ನಮ್ಮ ದೇವಾಲಯದ ಹುಂಡಿಯಲ್ಲಿ ₹ 1,892, ವೀರಭದ್ರ ಸ್ವಾಮಿ ದೇವಾಲಯದಲ್ಲಿ ₹ 4.62 ಲಕ್ಷ ಮತ್ತು ಉದ್ಧಾನ ವೀರಭದ್ರೇಶ್ವರ ದೇವಾಲಯದಲ್ಲಿ ₹ 87,967 ದೊರೆತಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಹುಂಡಿ ಹಣ ಎಣಿಕೆ ಮಾಡಲಾಗುತ್ತದೆ. ಹೊನ್ನಾದೇವಿ ಹಾಗೂ ಗಂಗಾಧರೇಶ್ವರ ದೇವಾಲಯದ ಹುಂಡಿ ಎಣಿಕೆ ವೇಳೆ ಇಪ್ಪತ್ತೊಂದು ಡಾಲರ್‌ ಬೆಲೆಯ ನಾಲ್ಕು ನೋಟುಗಳು ದೊರೆತಿವೆ. ಅಮಾನ್ಯಗೊಂಡಿರುವ ₹ 500 ಮುಖ ಬೆಲೆಯ 33 ನೋಟುಗಳಿದ್ದವು. ಈ ಬಗ್ಗೆ ಇಲಾಖೆಯ ಆಯುಕ್ತರಿಗೆ ಮಾಹಿತಿ ನೀಡಿದ್ದೇವೆ ಎಂದು ಮುಜರಾಯಿ ತಹಶೀಲ್ದಾರ್‌ ಕೆ.ಪದ್ಮಾ ಹೇಳಿದರು. ಈ ವೇಳೆ ಕಾರ್ಯನಿರ್ವಹಣಾಧಿಕಾರಿ ಎಂ.ನಾರಾಯಣಸ್ವಾಮಿ, ಚಂದ್ರಕಲಾ, ಪಾರುಪತ್ಯೆದಾರ ಪ್ರಭು
ಇದ್ದರು.

 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !